March 12, 2025

Bhavana Tv

Its Your Channel

ಎಷ್ಟು ಬೇಡಲಿ ನಾನು ಸಾರದಹೊಳೆ ಹನುಮಂತ – ಉಮೇಶ ಮುಂಡಳ್ಳಿ ಯಿಂದ ಭಕ್ತಿಗೀತೆ ಲೋಕಾರ್ಪಣೆ

ಭಟ್ಕಳ- ಜಿಲ್ಲೆಯ ಭಾವಕವಿ ಉಮೇಶ ಮುಂಡಳ್ಳಿ ಯಿಂದ ಸಾರದಹೊಳೆ ಶ್ರೀ ಹಳೆಕೋಟೆ ಹನುಮಂತ ದೇವರ ಜನಪ್ರಿಯ ಭಕ್ತಿ ಗೀತೆ ಇಂದು ಯುಗಾದಿಯಂದು ಲೋಕಾರ್ಪಣೆ ಯಾಯಿತು. ಸಾರದಹೊಳೆ ಸಭಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ದೇವಸ್ಥಾನದ ಜಿರ್ಣೋದ್ಧಾರ ಮಂಡಳಿ ಅಧ್ಯಕ್ಷರಾದ ಕೃಷ್ಣ ನಾಯ್ಕ ಅವರು ಮುಂಡಳ್ಳಿಯವರು ಹಾಡಿದ ಹಾಡನ್ನು ನಿನಾದ ಯುಟ್ಯೂಬ್ ಚಾನೆಲ್ ನಲ್ಲಿ ಅಧಿಕೃತವಾಗಿ ಬಿಡುಗಡೆಗೊಳಿಸಿ ಮಾತನಾಡುತ್ತಾ ಸಮಾಜದಲ್ಲಿ ಸಂಸ್ಕಾರ ಜಾಗೃತವಾಗಬೇಕು.
ಸಮಾಜದಲ್ಲಿದ್ದ ಅನೇಕ ಪ್ರತಿಭೆಗಳು ಬೆಳಗಬೇಕು ಹಳೆಕೋಟೆ ಹನುಮಂತನ ಕುರಿತು ಇನ್ನಷ್ಡು ಹಾಡುಗಳು ಬರಲಿ ಎಂದು ಹಾರೈಸಿದರು.

ವೇದಿಕೆಯಲ್ಲಿ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷರಾದ ಸುಬ್ರಾಯ ನಾಯ್ಕ ಮೆಚ್ಚುಗೆ ಮಾತನಾಡಿದರು. ಸಾಹಿತಿ ಗಾಯಕ ಉಮೇಶ ಮುಂಡಳ್ಳಿ ಮಾತನಾಡಿ ಇದುವರೆಗೆ ಭಾವಗೀತೆಗಳನ್ನು ಮಾತ್ರ ಸಿಡಿ ಮಾಡಿ ಬಿಡುಗಡೆ ಮಾಡಿದ ಅನುಭವ ಹೊಂದಿದ್ದ ತಮಗೆ ಈ ಹಾಡು ಹನುಮಂತನೇ ಪ್ರೇರಣೆ ನೀಡಿ ಬರೆಯಿಸಿ ಹಾಡಿಸಿದ ಪುಣ್ಯದ ಅವಕಾಶ ಎಂದು ಮನದುಂಬಿ ನುಡಿದರು.

ವೇದಿಕೆಯಲ್ಲಿ ವೆಂಕಟೇಶ ನಾಯ್ಕ, ರಾಮಚಂದ್ರ ನಾಯ್ಕ,ನಂದನ ನಾಯ್ಕ ಮೊದಲಾದ ಗಣ್ಯರು ಉಪಸ್ಥಿತರಿದ್ದರು. ಶಿಕ್ಷಕ ಪರಮೇಶ್ವರ ನಾಯ್ಕ ನಿರ್ವಹಿಸಿ ಸ್ವಾಗತಿಸಿದರು.
ಉಮೇಶ ಮುಂಡಳ್ಳಿ ಸಾಹಿತ್ಯ ಬರೆದು ಸ್ವರ ಸಂಯೋಜಿಸಿ ಹಾಡಿರುವ ಹನುಮಂತನ ಹಾಡು ಬಿಡುಗಡೆ ಗೊಂಡ ಕೆಲವೇ ಗಂಟೆಗಳಲ್ಲಿ ಯೂಟ್ಯೂಬ್ ಫೇಸ್ಬುಕ್ ಪೆಜ್ ಗಳಲ್ಲಿ ಜನಪ್ರೀಯತೆ ಗಳಿಸುತ್ತಿದೆ.

error: