May 4, 2024

Bhavana Tv

Its Your Channel

ಭಟ್ಕಳ ಸರ್ಪನಕಟ್ಟೆಯ ಮುಲ್ಲಿಗದ್ದೆಯಲ್ಲಿರುವ ಖಾಸಗಿ ಸಿಗಡಿ ಆಗರ; ಉಪ್ಪುನೀರಿನ ಟ್ಯಾಂಕ್ ಒಡೆದು ಕೃಷಿ ಭೂಮಿ ಹಾಗೂ ಮನೆಗಳಿಗೆ ನುಗ್ಗಿದ ನೀರು

ಭಟ್ಕಳ ತಾಲ್ಲೂಕಿನ ಸರ್ಪನಕಟ್ಟೆಯ ಮುಲ್ಲಿಗದ್ದೆಯಲ್ಲಿರುವ ಖಾಸಗಿ ಸಿಗಡಿ ಆಗರದ ಉಪ್ಪುನೀರಿನ ಟ್ಯಾಂಕೊAದು ಒಡೆದು ಕೃಷಿ ಭೂಮಿ ಹಾಗೂ ಮನೆಗಳಿಗೆ ನೀರು ನುಗ್ಗಿ ಅಪಾರ ಹಾನಿಯಾಗಿದೆ.

ಮುಲ್ಲಿಗದ್ದೆ ಪ್ರದೇಶದಲ್ಲಿ ಸಮುದ್ರ ತೀರ ಮಂಗಳೂರಿನ ವ್ಯಕ್ತಿಯೊಬ್ಬರು ಅದನ್ನು ನಡೆಸುತ್ತಿದ್ದರು. ಸಿಗಡಿ ಬೆಳೆಸಲು ಬೇಕಾಗುವ ಉಪ್ಪುನೀರನ್ನು ಬೃಹತ್ ಗಾತ್ರದ ಟ್ಯಾಂಕರ್‌ನಲ್ಲಿ ಶೇಖರಣೆ ಮಾಡಿ ಇಟ್ಟಿದ್ದರು. ಹೀಗೆ ಶೇಖರಿಸಿದ ಎರಡು ಟ್ಯಾಂಕ್ ಸೋಮವಾರ ಬೆಳಿಗ್ಗೆ ಹಾಗೂ ಮಂಗಳವಾರ ರಾತ್ರಿ ಒಡೆದು ಸುತ್ತಮುತ್ತಲಿನ ಕೃಷಿ ಭೂಮಿ ಹಾಗೂ ಮನೆಗಳಿಗೆ ನುಗ್ಗಿದೆ. ಇದರಿಂದ ಭತ್ತದ ಕೃಷಿ ಮಾಡಲು ಬೀಜ ಬಿತ್ತಿದ ಅಂದಾಜು ಎರಡು ಎಕರೆ ಕೃಷಿ ಭೂಮಿ ಉಪ್ಪುನೀರಿಗೆ ಆಹುತಿಯಾಗಿದೆ. ಅಲ್ಲದೆ ಅಲ್ಲೇ ಪಕ್ಕದಲ್ಲಿದ್ದ ಮನೆಗಳಿಗೆ ನೀರು ನುಗ್ಗಿ ಮನೆಯಲ್ಲಿರುವ ಸಾಮಗ್ರಿ ಹಾನಿಯಾಗಿದೆ ಹಾಗೂ ಬಾವಿ ನೀರುಕಲುಷಿತಗೊಂಡಿದೆ ಎಂದು ಸ್ಥಳೀಯರು ಕಲುಷಿತಗೊಂಡಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಒಡೆದಿರುವ ಉಪ್ಪು ನೀರು ಸಂಗ್ರಹ ಟ್ಯಾಂಕ್ ಗಾತ್ರ ಎರಡು ಲಕ್ಷ ಲೀಟರ್‌ನದು. ಈ ನೀರು ನೇರವಾಗಿ ಮನೆಗಳಿಗೆ ನುಗ್ಗಿದರೆ ಬಾರಿ ಅನಾಹುತ ಸಂಭವಿಸುತ್ತಿತ್ತು ಎಂದು ನೀರು ನುಗ್ಗಿರುವ ಮನೆಯ ಮಾಲೀಕ ಸುರೇಶ ನಾಯ್ಕ ತಿಳಿಸಿದ್ದಾರೆ. ಅದೇ ಗಾತ್ರದ ಇನ್ನೂ ಎರಡು ಟ್ಯಾಂಕ್ ಅಲ್ಲಿ ನಿರ್ಮಿಸಲಾಗಿದೆ. ಅದು ಕೂಡ ಅಪಾಯದ ಸ್ಥಿತಿಯಲ್ಲಿದೆ ಎನ್ನುತ್ತಾರೆ ಅವರು. ‘ಜನವಸತಿ ಪ್ರದೇಶದಲ್ಲಿ ಗ್ರಾಮ ಪಂಚಾಯ್ತಿಯವರು ಸಿಗಡಿ ಅಗರ ನಡೆಸಲು ಪರವಾನಗಿ ನೀಡಿದ್ದಾರೆ. ಇದರಿಂದ ಈ ಪ್ರದೇಶದಲ್ಲಿ ದುರ್ನಾತ ಬೀರುತ್ತಿದೆ. ಇದರ ಜೊತೆಯಲ್ಲಿ ಇಂತಹ ಅನಾಹುತಗಳಿಂದ ನಮಗೆ ಭಯದ ವಾತಾವರಣ ಸೃಷ್ಟಿಯಾಗಿದೆ. ಸಂಬAಧಪಟ್ಟ ಅಧಿಕಾರಿಗಳು ಇದನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

error: