May 5, 2024

Bhavana Tv

Its Your Channel

ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಭಟ್ಕಳದ ದಿ ನ್ಯೂ ಇಂಗ್ಲೀಷ ಪಿ ಯು ಕಾಲೇಜಿನ ವಿದ್ಯಾರ್ಥಿಗಳ ಉತ್ತಮ ಸಾಧನೆ

ಭಟ್ಕಳ: ಏಪ್ರಿಲ್ 2022 ರಲ್ಲಿ ನಡೆದ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಭಟ್ಕಳದ ದಿ ನ್ಯೂ ಇಂಗ್ಲೀಷ ಪಿ ಯು ಕಾಲೇಜು ಉತ್ತಮ ಸಾಧನೆ ಮಾಡಿದ್ದು, ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳಲ್ಲಿ 307 ವಿದ್ಯಾರ್ಥಿಗಳು ಉತ್ತೀರ್ಣರಾಗುವುದರ ಮೂಲಕ ಶೇಕಡಾ95.04% ಫಲಿತಾಂಶವನ್ನು ದಾಖಲಿಸಿದೆ.

92ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿತೇರ್ಗಡೆ ಹೊಂದಿದರೆ, 177ವಿದ್ಯಾರ್ಥಿಗಳು ಪ್ರಥಮದರ್ಜೆಯಲ್ಲಿಉತ್ತೀರ್ಣರಾಗಿರುತ್ತಾರೆ.
ವಾಣಿಜ್ಯ ವಿಭಾಗದಲ್ಲಿ221 ವಿದ್ಯಾರ್ಥಿಗಳಲ್ಲಿ 210 ತೇರ್ಗಡೆಯಾಗುವುದರ ಮೂಲಕ 95.02% ಫಲಿತಾಂಶ ದಾಖಲಿಸಿ ಶ್ರೀನಿಧಿ ಪೈ 97.84% ನೊಂದಿಗೆ ಪ್ರಥಮ, ಅಪರ್ಣಾಕಾಮತ್ ಮತ್ತು ಭೂಮಿಕಾಕಾಮತ್97.67% ನೊಂದಿಗೆ ದ್ವೀತಿಯ ಮತ್ತು ಸಂಧ್ಯಾ ಬೈಂದೂರು ಮತ್ತು ಪ್ರಿಯಾಂಕಾ ಕಾಮತ್97.50% ನೊಂದಿಗೆ ತೃತೀಯ ಸ್ಥಾನವನ್ನು ಪಡೆದುಕೊಂಡಿರುತ್ತಾರೆ.
ವಿಜ್ಞಾನ ವಿಭಾಗದಲ್ಲಿ 80 ವಿದ್ಯಾರ್ಥಿಗಳಲ್ಲಿ 75 ತೇರ್ಗಡೆಯಾಗುವುದರ ಮೂಲಕ 93.75% ಫಲಿತಾಂಶ ದಾಖಲಿಸಿಅಮಾನ ಮುಷ್ತಾಕ್‌ಅಹ್ಮದ್ ಸೈಯದ್ 97.84% ನೊಂದಿಗೆ ಪ್ರಥಮ, ಪ್ರಮೋದಚಿತ್ರಾಪುರ96.50% ನೊಂದಿಗೆ ದ್ವಿತೀಯ ಮತ್ತು ಪ್ರಶಾಂತಿ ಹೆಬ್ಬಾರ 96.17% ನೊಂದಿಗೆ ತೃತೀಯ ಸ್ಥಾನ ಪಡೆದುಕೊಂಡಿರುತ್ತಾರೆ.
ಕಲಾ ವಿಭಾಗದಲ್ಲಿ22 ವಿದ್ಯಾರ್ಥಿಗಳಲ್ಲಿ 22 ತೇರ್ಗಡೆಯಾಗುವುದರ ಮೂಲಕ 100% ಫಲಿತಾಂಶ ದಾಖಲಿಸಿ ಚಂದನಾ ನಾಯ್ಕ 94.50% ನೊಂದಿಗೆ ಪ್ರಥಮ, ಲಿಡಿಯ ಬಸ್ಟಾö್ಯಂವ್ ಲೂಯಿಸ್ 94.34% ನೊಂದಿಗೆ ದ್ವೀತಿಯ ಮತ್ತು ವಿಜೇತಾ ನಾಯ್ಕ 91.67% ನೊಂದಿಗೆ ತೃತೀಯ ಸ್ಥಾನವನ್ನು ಪಡೆದುಕೊಂಡಿರುತ್ತಾರೆ.
ವಾಣಿಜ್ಯವಿದ್ಯಾರ್ಥಿಗಳಾದ ಅಪರ್ಣಾಕಾಮತ್‌ಅರ್ಥಶಾಸ್ತç, ವ್ಯವಹಾರಅಧ್ಯಯನ, ಸಂಖ್ಯಾಶಾಸ್ತç, ಪ್ರಿಯಾಂಕಕಾಮತ್‌ಅರ್ಥಶಾಸ್ತç, ಸಂಖ್ಯಾಶಾಸ್ತç, ಲೆಕ್ಕಶಾಸ್ತç, ಸಂಧ್ಯಾ ಬೈಂದೂರು ಸಂಖ್ಯಾಶಾಸ್ತç, ಲೆಕ್ಕಶಾಸ್ತç, ಶ್ರೀನಿಧಿ ಪೈ ವ್ಯವಹಾರಅಧ್ಯಯನ, ಸಂಖ್ಯಾಶಾಸ್ತç, ಭೂಮಿಕಾಕಾಮತ್ ಸಂಖ್ಯಾಶಾಸ್ತç, ದೀಪ್ತಿ ಡಿ ಸಂಖ್ಯಾಶಾಸ್ತç, ವನುಜಾ ನಾಯ್ಕ ಸಂಖ್ಯಾಶಾಸ್ತç, ನಾಗರತ್ನ ನಾಯ್ಕಗಣಕಶಾಸ್ತç, ಸಹನಾ ಪಿ ಗಣಕಶಾಸ್ತç, ತೇಜಸ್ವಿನಿಭಟ್‌ಗಣಕಶಾಸ್ತç, ಪುಷ್ಪಾ ನಾಯ್ಕಅರ್ಥಶಾಸ್ತçವಿಷಯಗಳಲ್ಲಿ ವಿಜ್ಞಾನ ವಿದ್ಯಾರ್ಥಿಗಳಾದ ಅಮಾನ ಮುಷ್ತಾಕ್‌ಅಹ್ಮದ್ ಸೈಯದ್‌ರಸಾಯನ ಶಾಸ್ತç, ಗಣಿತ ಮತ್ತುಜೀವಶಾಸ್ತç, ಹೇಮಾ ನಾಯ್ಕರಸಾಯನ ಶಾಸ್ತç, ಗಣಿತ ಮತ್ತುಜೀವಶಾಸ್ತç, ದೀಕ್ಷಾ ನಾಯ್ಕಗಣಿತ, ದೀಪಾ ದೇವಾಡಿಗಗಣಕವಿಜ್ಞಾನ, ಮೇಘಾ ಶಾನಭಾಗಗಣಿತ, ನಿಖಿತಾ ಮೊಗೇರಜೀವಶಾಸ್ತç, ಪ್ರಮೋದಚಿತ್ರಾಪುರಗಣಿತ, ಪ್ರಶಾಂತಿ ಹೆಬ್ಬಾರಗಣಕಶಾಸ್ತç, ಪ್ರಿಯಾದೇವಾಡಿಗಗಣಕಶಾಸ್ತç ಹಾಗೂ ಕಲಾ ವಿಭಾಗದಲ್ಲಿಚಂದನಾ ನಾಯ್ಕ ಶಿಕ್ಷಣಶಾಸ್ತç, ಕಪಿಲ್ ಭಟ್ ಶಿಕ್ಷಣಶಾಸ್ತçದಲ್ಲಿ 100/100 ಅಂಕಗಳನ್ನು ಪಡೆದುಕೊಂಡಿರುತ್ತಾರೆ.
ವಿದ್ಯಾರ್ಥಿಗಳ ಸಾಧನೆಗೆ ಭಟ್ಕಳ ಎಜ್ಯುಕೇಶನ್‌ಟ್ರಸ್ಟ್ ನ ಅಧ್ಯಕ್ಷರಾದಡಾ.ಸುರೇಶ ನಾಯಕ್, ಮ್ಯಾನೇಜಿಂಗ್ ಟ್ರಸ್ಟಿ ಶ್ರೀ ಅರ್.ಜಿ.ಕೊಲ್ಲೆ , ಟ್ರಸ್ಟಿ ಮೆನೇಜರ್ ಶ್ರೀ ರಾಜೇಶ ನಾಯಕ್ ಹಾಗೂ ಪ್ರಾಂಶುಪಾಲರಾದ ಶ್ರೀ ವಿರೇಂದ್ರ ಶ್ಯಾನಭಾಗ, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಅಭಿನಂದನೆಯನ್ನು ಸಲ್ಲಿಸಿರುತ್ತಾರೆ.

error: