May 4, 2024

Bhavana Tv

Its Your Channel

ಬಕ್ರೀದ್ ದಿನದಂದು ಗೋಹತ್ಯೆಯಾಗದಂತೆ ನೋಡಿಕೊಳ್ಳಲು ತಾಲೂಕಾಡಳಿತದಿಂದ ವಿಶೇಷ ಕಣ್ಗಾವಲು-ಸಹಾಯಕ ಆಯುಕ್ತೆ ಮಮತಾದೇವಿ

ಭಟ್ಕಳ: ಭಟ್ಕಳ ಸೂಕ್ಷ÷್ಮ ಪ್ರದೇಶವಾದ್ದರಿಂದ ಬಕ್ರೀದ್ ಹಬ್ಬದ ದಿನದಂದು ಗೋಹತ್ಯೆ ತಡೆಯಲು ತಾಲೂಕಾಡಳಿತ ಎಲ್ಲ ರೀತಿಯಿಂದ ಸಿದ್ದತೆ ಮಾಡಿಕೊಂಡಿದ್ದು ವಿಶೇಷ ಕಣ್ಗಾವಲು ಪಡೆ ರಚಿಸಲಾಗಿದೆ ಎಂದು ಭಟ್ಕಳ ಉಪವಿಭಾಗದ ಸಹಾಯಕ ಆಯುಕ್ತೆ ಮಮತಾದೇವಿ ಹೇಳಿದರು.
ಅವರು ಗುರುವಾರ ಸಂಜೆ ಭಟ್ಕಳ ತಾಲೂಕಾಡಳಿತ ಸೌಧದಲ್ಲಿ ಬಕ್ರೀದ್ ಹಬ್ಬದ ನಿಮಿತ್ತ ವಿವಿಧ ಸಮುದಾಯದ ಮುಖಂಡರ ಮತ್ತು ಅಧಿಕಾರಿಗಳ ಸಭೆ ನಡೆಸಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ ಮಾಹಿತಿ ನೀಡಿದರು.
ಎಲ್ಲರ ಹಬ್ಬಗಳಂತೆ ಬಕ್ರೀದ್ ಹಬ್ಬವೂಕೂಡ ಶಾಂತಿಯುತವಾಗಿ ಆಚರಿಸಲ್ಪಡಬೇಕು ಎಂಬ ದೃಷ್ಟಿಯಿಂದ ಯಾವುದೇ ಅನಾಹುತಗಳು ಸಂಭವಿಸದAತೆ ವಿಶೇಷ ಜಾಗೃತಿಯನ್ನು ವಹಿಸಲಾಗುವುದು. ಸಾಮಾಜಿಕ ಜಾಲಾತಾಣಗಳ ಮೇಲೆ ಕಣ್ಗಾವಲು ಇಡಲು ಜಿಲ್ಲಾಮಟ್ಟದಲ್ಲಿ ವಿಶೇಷ ತಂಡರಚನೆಯಾಗಿದೆ. ವಿಶೇಷವಾಗಿ ಭಟ್ಕಳಕ್ಕೆ ಹೆಚ್ಚಿನ ಆಧ್ಯತೆಯನ್ನು ನೀಡಲಾಗುತ್ತಿದೆ ಎಂದ ಅವರು, ಹಬ್ಬದ ದಿನ ಹೆಸ್ಕಾಂ, ಪುರಸಭೆ ಅಧಿಕಾರಿಗಳ ತಮ್ಮ ಆಧೀನದಲ್ಲಿ ಯಾವುದೇ ಸಮಸ್ಯೆಗಳು ಬಾರದಂತೆ ನೋಡಿಕೊಳ್ಳಬೇಕು ಎಂಬ ಸೂಚನೆ ನೀಡಲಾಗಿದೆ. ಅಲ್ಲದೆ ಗೋಹತ್ಯೆ ಕಾನೂನು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದು ಯಾವುದೇ ಪ್ರಕರಣಗಳು ಕಂಡುಬAದಲ್ಲಿ ಅಂತಹವರ ವಿರುದ್ಧ ಯಾವುದೇ ಮುಲಾಜಿ ಇಲ್ಲದೆ ಎಫ್.ಐ.ಆರ್ ದಾಖಲಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಸಿಪಿಐ ದಿವಾಕರ್,ಮಂಜುನಾಥ, ಪಿಎಸ್‌ಐ ಸುಮಾ, ತಹಸಿಲ್ದಾರ ಸುಮಂತ್ ಬಿ. ಹೆಸ್ಕಾಂ ಸಹಾಯಕ ಅಭಿಯಂತರ ಮಂಜುನಾಥ್ ನಾಯ್ಕ, ಪುರಸಭಾ ಮುಖ್ಯಾಧಿಕಾರಿ ಸುರೇಶ ಉಪಸ್ಥಿತರಿದ್ದರು.
ಶಾಂತಿಪಾಲನ ಸಭೆಯಲ್ಲಿ ತಂಝೀಮ್ ಪ್ರಧಾನಕಾರ್ಯದರ್ಶಿ ಅಬ್ದುಲ್ ರಖೀಬ್‌ಎಂ.ಜೆ, ಜೆ.ಡಿ.ಎಸ್. ಮುಖಂಡ ಇನಾಯತುಲ್ಲಾ ಶಾಬಂದ್ರಿ, ವೆಲ್ಫೇರ್ ಪಾರ್ಟಿ ಜಿಲ್ಲಾಧ್ಯಕ್ಷ ಆಸಿಫ್ ಶೇಖ್, ಮಟ್ಟಾ ಸಾದಿಕ್, ಅಸ್ಲಂ ವಲ್ಕಿ, ಮತ್ತಿತರರು ಉಪಸ್ಥಿತರಿದ್ದು ಬಕ್ರೀದ್ ಹಬ್ಬದ ಕುರಿತಂತೆ ಸಲಹೆಗಳನ್ನು ನೀಡಿದರು.

error: