May 5, 2024

Bhavana Tv

Its Your Channel

ಜನಪ್ರತಿನಿಧಿಗಳೆ ಒಮ್ಮೆ ನಮ್ಮ ಊರಿಗೆ ಬಂದು ಹೋಗಿ, ಒಡಾಡಲು ಅನಾನೂಕೂಲ ಮಾಡಿಕೊಡಿ,

ಭಟ್ಕಳ ತಾಲೂಕಿನ ಹಾಡುವಳ್ಳಿ ಗ್ರಾಮಪಂಚಾಯತ್ ವ್ಯಾಪ್ತಿಯ ಅರ್ಕಳ ರಸ್ತೆಯಿಂದ ಹಿರೇಬೆಳ್ಳು ಗೊಂಡರ ಕೇರಿಗೆ ಹೋಗುವ ರಸ್ತೆ ಕೆಸರಿಂದ ಕೂಡಿದ್ದು ಒಡಾಡಲು ಅನಾನೂಕೂಲವಾಗಿದೆ ಎಂದು ನಾಗರಿಕ ದೂರು,

ಭಟ್ಕಳ ; ಹಳ್ಳಿ ಹಳ್ಳಿಗೂ ರಸ್ತೆ, ಸಾರ್ವಜಿಕರಿಗೆ ಮೂಲಭೂತ ಸೌಕರ್ಯವನ್ನ ನಾವು ಒದಗಿಸುತ್ತೇವೆ ಎನ್ನುವ ಜನಪ್ರತಿನಿಧಿಗಳು ಒಮ್ಮೆ ನಮ್ಮ ಊರಿಗೆ ಬಂದು ಹೋಗಿ ಎನ್ನುತ್ತಿದ್ದಾರೆ ಭಟ್ಕಳ ತಾಲೂಕಿನ ಹಾಡುವಳ್ಳಿ ಗ್ರಾಮಪಂಚಾಯತವ್ಯಾಪ್ತಿಯ ಹೀರೆಬೆಳ್ಳು ಗೊಂಡರ ಕೇರಿಯ ನಿವಾಸಿಗಳು, ಈ ರಸ್ತೆಗೆ ಸುಮಾರು 15 ರಿಂದ 20 ಪರಿಶಿಷ್ಟ ಪಂಗಡದ ಮನೆಯ ಜನರು ಹಾಗೂ ಸುಮಾರು ನಾಲ್ಕರಿಂದ ಐದು ಇತರೆ ಹಿಂದುಳಿದ ವರ್ಗದ ಜನರ ಮನೆಗಳು ಅವಲಂಬಿಸಿಕೊAಡಿದ್ದಾರೆ. ರಸ್ತೆಯಲ್ಲಿ ಒಂದು ರಿಕ್ಷಾ, ಒಂದು ಬೈಕ್ ಕೂಡ ತೆಗೆದುಕೊಂಡು ಹೋಗಲಿಕ್ಕೆ ಸಾಧ್ಯವಾಗುತ್ತಿಲ್ಲ ಸಾರ್ವಜನಿಕರು ಮಕ್ಕಳನ್ನು ಶಾಲೆಗೆ ಬಿಡಬೇಕೆಂದರೆ ನಡೆಸಿಕೊಂಡು ಹೋಗಬೇಕಾದ ಪರಿಸ್ಥಿತಿ, ನಡೆದುಕೊಂಡು ಹೋಗುವುದಾದರೂ ಕೂಡ ಮೊಳಕಾಲಿನ ತನಕ ನೀರು ತುಂಬಿರುತ್ತದೆ. ಇಂದು ಮಳೆ ಕಡಿಮೆ ಇದ್ದ ಕಾರಣ ಇಲ್ಲಿಯ ಅಕ್ಕಪಕ್ಕದವರು ಸೇರಿಕೊಂಡು ಒಂದು ಗಟಾರ ಬಿಡಿಸಿ ನೀರು ಹೋಗುವ ರೀತಿ ಮಾಡಿಕೊಂಡಿದ್ದಾರೆ. ಆದರೆ ಅದು ದೊಡ್ಡ ಮಳೆ ಬಂದರೆ ಅದು ಕೂಡ ಕೋರೆದುಕೊಂಡು ಹೋಗಿ ಮತ್ತೆ ಅದೇ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎನ್ನುತ್ತಾರೆ ಸ್ಥಳೀಯರು.
ಇದು ರಸ್ತೆಯ ಒಂದು ಬದಿಯ ಅವಾಂತರ ಹಾಗೆ ಇನ್ನೊಂದು ಬದಿಯಲ್ಲಿ ಕೂಡ ಹಾಗೆ ಆಗಿದೆ. ಇಲ್ಲಿಯ ಸ್ಥಳೀಯ ಜನಪ್ರತಿನಿಧಿಗಳು ಏನು ಮಾಡುತ್ತಾರೆ ಅನ್ನೋದು ನಮಗೆ ಗೊತ್ತಿಲ್ಲ ಯಾಕೆಂದರೆ ಮಳೆಗಾಲ ಬಂತೆAದರೆ ಅವರು ಒಂದು ಬಾರಿ ತನ್ನ ಕ್ಷೇತ್ರವನ್ನು ಪರಿಶೀಲನೆ ಮಾಡಬೇಕಾಗಿರುವುದು ಅವರ ಕರ್ತವ್ಯ. ಯಾರಿಗಾದರೂ ಆರೋಗ್ಯ ಸರಿಯಿಲ್ಲ ಎಂದು ಆಸ್ಪತ್ರೆಗೆ ಹೋಗಬೇಕಾದರೂ ಕೂಡ ಒಂದು ರಿಕ್ಷಾ ಕೂಡ ನಮ್ಮ ವಿಭಾಗದ ಮನೆಗೆ ಬರಲು ಆಗುತ್ತಿಲ್ಲ. ಅವರು ಅಲ್ಲಿಯ ತನಕ ನಡೆದುಕೊಂಡು ಹೋಗಿ ಆಸ್ಪತ್ರೆಗೆ ಹೋಗಬೇಕಾದ ಸಂದರ್ಭ ಎದುರಾಗಿದೆ. ಆದರೆ ನಮ್ಮ ಹಿರೇಬೆಳ್ಳು ಗ್ರಾಮ ಹಾಡವಳ್ಳಿ ಗ್ರಾಮ ಪಂಚಾಯಿತಿಗೆ ಕೇವಲ ಐದರಿಂದ ಆರು ಕಿಲೋಮೀಟರ್ ದೂರದ ವ್ಯಾಪ್ತಿಯಲ್ಲಿದೆ ಆದರೂ ಕೂಡ ಇಲ್ಲಿ ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ಬಾರದೆ ಇರುವುದು ತುಂಬಾ ಶೋಚನೀಯ ಸಂಗತಿ ಎನ್ನುತ್ತಾರೆ ಸ್ಥಳೀಯರು.

ಈಗಾಗಲೇ ಈ ಹಿಂದಿನ ಅವಧಿಯಲ್ಲಿ ರಸ್ತೆಯ ಇನ್ನೊಂದು ಬದಿಯಲ್ಲಿ ಸುಮಾರು ಇನ್ನೂರು ಮೀಟರ್ ಕಾಂಕ್ರೀಟ್ ರಸ್ತೆ ಮಾಡಲಾಗಿದ್ದು, ಆ ರಸ್ತೆಯನ್ನು ಮುಂದುವರಿಸಲು ಮಾನ್ಯ ಶಾಸಕರಿಗೆ ಹಲವಾರು ಬಾರಿ ನಾವು ಗ್ರಾಮದ ಜನರು ಅರ್ಜಿಯನ್ನು ಕೊಟ್ಟಿರುತ್ತೇವೆ. ದಯಮಾಡಿ ಶಾಸಕರು ಈಗಲಾದರೂ ಎಚ್ಚೆತ್ತುಕೊಂಡು ನಮ್ಮ ರಸ್ತೆಗೆ ನಮ್ಮ ಜನರ ಕಷ್ಟವನ್ನು ಅರಿತು ಈ ರಸ್ತೆಯನ್ನು ಸರಿಪಡಿಸಿ ಕೊಡಬೇಕಾಗಿ ವಿನಂತಿಸಿದ್ದಾರೆ.

error: