May 4, 2024

Bhavana Tv

Its Your Channel

ಭಟ್ಕಳ ಪುರಸಭೆಯಲ್ಲಿ ಬೀದಿದೀಪ ನಿರ್ವಹಣೆಯ ಟೆಂಡರ ನೀಡುವ ಬಗ್ಗೆ ಸಭೆಯಲ್ಲಿ ಗದ್ದಲ

ಭಟ್ಕಳ ಪುರಸಭೆಯ ಬೀದಿದೀಪ ನಿರ್ವಹಣೆಯ ಟೆಂಡರ ನೀಡುವ ಬಗ್ಗೆ ಗುರುವಾರ ಪುರಸಭೆಯಲ್ಲಿ ನಡೆದ ವಿಶೇಷ ಸಾಮಾನ್ಯ ಸಭೆ ಪರಸ್ಪರ ಗದ್ದಲಕ್ಕೆ ಕಾರಣವಾಯಿತು.

ಸಭೆಯ ಆರಂಭದಲ್ಲಿ ಅಧ್ಯಕ್ಷ ಪರ್ವೇಜ್ ಕಾಶೀಂಜೀ ಮಾತನಾಡಿ ಪುರಸಭೆ ವ್ಯಾಪ್ತಿಯ ಬೀದಿದೀಪ ನಿರ್ವಹಣೆಯ ಬಗ್ಗೆ ಹೊಸ ಟೆಂಡರನ್ನು ಕರೆಯಲಾಗಿದೆ. ಮೂವರು ಬಿಡ್ ದಾರರು ಭಾಗವಹಿಸಿದ್ದಾರೆ. ಅದರಲ್ಲಿ ಭಟ್ಕಳದ ಆಯಿಷಾ ಇಲೆಕ್ಟ್ರೀಕಲ್ಸ ಕಡಿಮೆ ಮೊತ್ತದ ಬಿಡ್ ಮಾಡಿದ್ದಾರೆ. ಆದರೆ ಅವರಿಗೆ ಟೆಂಡರ್ ನೀಡಲು ಸಾಧ್ಯವಿಲ್ಲ. ಅವರು ಬೀದಿದೀಪ ಸರಿಯಾಗಿ ನಿರ್ವಹಣೆ ಮಾಡುವುದಿಲ್ಲ ಎಂಬ ದೂರು ಸದಸ್ಯರಿಂದ ಬಂದಿರುವ ಕಾರಣ ಎರಡನೇ ಬಿಡ್ ದಾರನಿಗೆ ನೀಡಲು ನಿರ್ಧರಿಸಿದ್ದೇವೆ ಎಂದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಉಪಾಧ್ಯಕ್ಷ ಕೈಸರ್ ಅವರು ಕಡಿಮೆ ಮೊತ್ತ ಬಿಡ್ ಮಾಡಿದ್ದಾರೆ. ಅವರಿಗೆ ಟೆಂಡರ್ ನೀಡಿದರೆ ನಮಗೆ ವರ್ಷಕ್ಕೆ ೨ ಲಕ್ಷ ಉಳಿತಾಯ ಆಗುತ್ತದೆ. ಮೇಲಾಗಿ ಅವರಿಗೆ ಸರಿಯಾದ ಸಮಯದಲ್ಲಿ ಪುರಸಭೆಯಿಂದ ಬಿಲ್ ಪಾವತಿ ಮಾಡದ ಕಾರಣ ಅವರು ನಿರ್ವಹಣೆ ಮಾಡಲಿಲ್ಲ ಎಂದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಅಧ್ಯಕ್ಷ ಪರ್ವೇಜ್ ಕಾಶೀಂಜೀ ಗುತ್ತಿಗೆದಾರನು ಬಿಲ್ ಸರಿಯಾಗಿ ನೀಡುವುದಿಲ್ಲ. ಮೂರು ತಿಂಗಳ ಬಿಲ್ ಇಂದು ತಂದು ನೀಡಿದ್ದಾನೆ. ಮತ್ತೆ ಬಿಲ್ ಪಾವತಿ ವಿಳಂಭ ಎಂದು ಹೇಗೆ ದೂರುತ್ತಾನೆ ಎಂದು ಪ್ರಶ್ನಿಸಿದರು. ಸದಸ್ಯರಾದ ಕೃಷ್ಣಾನಂದ ಪೈ, ಶ್ರೀಕಾಂತ ನಾಯ್ಕ, ಶ್ರೀಪಾದ ಕಂಚುಗಾರ ಮಾತನಾಡಿ ಹಾಲಿ ಬೀದಿದೀಪ ನಿರ್ವಹಣೆ ಮಾಡುತ್ತೀರುವ ಆಯಿಷಾ ಇಲೆಕ್ಟ್ರೀಕಲ್ಸ ಅವರು ಹಲವು ಬಾರಿ ದೂರಿದರು ಕೆಟ್ಟು ನಿಂತ ಬೀದಿದೀಪ ರಿಪೇರಿ ಮಾಡುವುದಿಲ್ಲ. ಕೇಳಿದರೆ ಬಲ್ಪ ಇಲ್ಲ, ವೈಯರ್ ಇಲ್ಲ ಅನ್ನುತ್ತಾರೆ. ಈ ಹಿಂದೆ ಕೂಡ ಅವರು ಸರಿಯಾಗಿ ನಿರ್ವಹಣೆ ಮಾಡದ ಕಾರಣ ಸಭೆಯಲ್ಲಿ ಚರ್ಚಿಸಿ ನೋಟಿಸು ನೀಡಲಾಗಿತ್ತು. ಆದರೂ ಅದೇ ಮುಂದುವರೆದಿದೆ. ಬೀದಿ ದೀಪ ನಿರ್ವಹಣೆ ಮಾಡದೆ ವರ್ಷಕ್ಕೆ ೧೮ ಲಕ್ಷ ಅವರಿಗೆ ಉಚಿತವಾಗಿ ನೀಡಲಾಗುತ್ತಿದೆ. ಮುಂಜಾನೆ ೮ ಘಂಟೆಯಾದರೂ ದೀಪ ಸ್ವಿಚ್ಛ ಬಂದ್ ಮಾಡುವುದಿಲ್ಲ. ಇದರಿಂದ ಪುರಸಭೆಗೆ ಎಷ್ಟು ಹಾನಿಯಾಗುತ್ತದೆ. ಯಾವುದೇ ಕಾರಣಕ್ಕೂ ಅದೇ ಗುತ್ತಿಗೆದಾರನಿಗೆ ನಿರ್ವಹಣೆ ಟೆಂಡರ್ ನೀಡದಂತೆ ತಾಕೀತು ಮಾಡಿದರು. ಇದಕ್ಕೆ ಹಲವು ಮಹಿಳಾ ಸದಸ್ಯರು ಸಹಮತ ವ್ಯಕ್ತಪಡಿಸಿದರು.

ಸದಸ್ಯ ಅಲ್ತಾಫ ಖರೂರಿ, ಅಜೀಮ್ ಹಾಗೂ ಸೈಯದ್ ರವೂಪ್ ಮಾತನಾಡಿ ಈ ಒಂದು ಬಾರಿ ಅವಕಾಶ ನೀಡೋಣಾ ಮುಂದೆ ಹಾಗೆ ಮಾಡದಂತೆ ತಾಕಿತು ಮಾಡೋಣಾ ಎಂದರು. ಇದಕ್ಕೆ ಕೆಲ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಕೊನೆಯಲ್ಲಿ ಅಧ್ಯಕ್ಷ ಪರ್ವೇಜ್ ಕಾಶೀಂಜೀ ಮಾತನಾಡಿ ಟೆಂಡರ ನಿಯಮದ ಪ್ರಕಾರ ಅವರು ಈ ಟೆಂಡರ ಪಡೆಯಲು ಅರ್ಹತೆ ಪಡೆದಿಲ್ಲ. ಆದರೂ ಈ ಟೆಂಡರ್ ಅಂತಿ ಮಾಡುವುದಿಲ್ಲ. ಹಾಲಿ ಟೆಂಡರ್ ಅವಧಿ ಮುಕ್ತಾಯವಾದ ಕಾರಣ ಮುಂದಿನ ಎರಡು ತಿಂಗಳು ಅವರಿಗೆ ಮುಂದುವರೆಸಿ ನೀಡೋಣಾ. ಈ ಎರಡು ತಿಂಗಳ ಅವಧಿಯಲ್ಲಿ ಮತ್ತೆ ದೂರುಗಳು ಬಂದಲ್ಲಿ ಮುಂದಿನ ನಿರ್ಣಯ ಮಾಡುತ್ತೇವೆ ಎಂದರು.
ಸ್ಥಾಯಿ ಸಮಿತಿ ಅಧ್ಯಕ್ಷ ಇಂಶಾದ್, ಇಂಜಿನೀಯರ್ ಉಮೇಶ ಮಡಿವಾಳ, ಆರೋಗ್ಯಾಧಿಕಾರಿ ಸೋಜಿಯಾ ಇದ್ದರು.

error: