May 5, 2024

Bhavana Tv

Its Your Channel

ಮುರ್ಡೇಶ್ವರದ ನಾಡದೋಣಿ ಮೀನುಗಾರರಿಂದ ಸಮುದ್ರ ರಾಜನಿಗೆ ಪೂಜೆ

ಭಟ್ಕಳ: ಕರಾವಳಿಯಲ್ಲಿ ಭಾರೀ ಮಳೆಯಿಂದ ಸಮುದ್ರವೂ ರೌದ್ರವತಾರ ತಾಳಿದ್ದು ಮೀನುಗಾರಿಕೆಗೆ ಕ್ಷಣಗಣನೆ ಉಂಟಾಗಿದೆ. ಮೀನುಗಾರರು ಈ ಋತುವಿನ ಮೀನುಗಾರಿಕೆಗೆ ಇಳಿಯಲು ಸಮುದ್ರ ಪೂಜೆ ನೆರವೇರಿಸಿದ್ದಾರೆ.

ಹೊಸ ಋತುವಿನ ಮೀನುಗಾರಿಕೆಗೆ ತೆರಳುವ ಮುನ್ನ ಸಮುದ್ರ ರಾಜನಿಗೆ ಪೂಜೆ ಸಲ್ಲಿಸುವುದು ವಾಡಿಕೆ. ಅದರಂತೆ ಮುರ್ಡೇಶ್ವರದ ನಾಡದೋಣಿ ಮೀನುಗಾರರು ಈಶ್ವರನಿಗೆ ಪೂಜೆ ಸಲ್ಲಿಸಿದ ಬಳಿಕ, ಸಮುದ್ರರಾಜನಿಗೂ ಪೂಜೆ ನೆರವೇರಿಸಿ ಹೊಸ ಋತುವಿನ ಮೀನುಗಾರಿಕೆಗೆ ತೆರಳಲಿದ್ದಾರೆ. ಈ ಋತುವಿನಲ್ಲಿ ಮೀನುಗಾರಿಕೆ ವಿಪುಲವಾಗಿ ಆಗುವುದರ ಜೊತೆಗೆ ಅವಘಡಗಳೂ ಸಂಭವಿಸದಿರಲಿ ಎಂದು ಸಮುದ್ರ ದೇವರಾದ ಬಲರಾಮನನ್ನು ಪ್ರಾರ್ಥಿಸಿಕೊಂಡರು.

ಗಾಳಿ ಮಳೆಗೆ ಸಮುದ್ರದ ಅಬ್ಬರ ಜೋರಿರುವುದರಿಂದ ಮೀನುಗಾರರು ಕಡಲಿಗಿಳಿಯೋ ಸಾಹಸ ಮಾಡಿಲ್ಲ. ಜಿಲ್ಲಾಡಳಿತವೂ ರೆಡ್ ಅಲರ್ಟ್ ಘೋಷಿಸಿ ಕಡಲಿಗಿಳಿಯದಂತೆ ಎಚ್ಚರಿಕೆ ನೀಡಿತ್ತು. ಇದೀಗ ಮಳೆ ಕ್ಷೀಣಗೊಂಡಿದ್ದು ಕಡಲು ಕೂಡ ಶಾಂತವಾಗಿದೆ ಎನ್ನುತ್ತಾರೆ ಸ್ಥಳೀಯ ಮೀನುಗಾರರು. ಪ್ರಧಾನ ಅರ್ಚಕಾರದ ಜಯರಾಮ ಭಟ ಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ನೇತ್ರಾಣಿ ಅಡವೆಂಚರ್ ಮಾಲೀಕರಾದ ಗಣೇಶ ಹರಿಕಾಂತ, ಆನಂದ್ ಹರಿಕಾಂತ, ರಾಜು ಹರಿಕಾಂತ, ಪುರಂದ ಹರಿಕಾಂತ, ಸತೀಶ್ ಮಂಜು ಹರಿಕಾಂತ, ರಾಮಚಂದ್ರ ಹರಿಕಾಂತ, ರಾಘು ಹರಿಕಂತ್ರ, ನಾಗರಾಜ ಹರಿಕಾಂತ, ಗಣಪತಿ ಹರಿಕಾಂತ, ಹಾಗೂ ಇತರರು ಇದ್ದರು.

error: