May 18, 2024

Bhavana Tv

Its Your Channel

ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಗಳ ಚಾತುರ್ಮಾಸ ವೃತಕ್ಕೆ ಚಾಲನೆ

ಭಟ್ಕಳ: ನಾಮಧಾರಿ ಸಮಾಜದ ಕುಲಗುರುಗಳಾದ ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಗಳ ಚಾತುರ್ಮಾಸ ವೃತದ ಕಾರ್ಯಕ್ರಮ ಧರ್ಮಸ್ಥಳದ ಕನ್ಯಾಡಿಯ ದೇವರಗುಡ್ಡ ಮಠದಲ್ಲಿ ಅತೀ ವಿಜ್ರಂಭಣೆಯಿAದ ನೆರವೇರಿತು.

ಅರಿಷಡ್ವರ್ಗಗಳನ್ನು ನಿಯಂತ್ರಿಸಿ ಆಧ್ಯಾತ್ಮದ ಸಾಧನೆ ಮಾಡುವುದರಿಂದ ಶಕ್ತಿಯು ಜಾಗೃತಗೊಂಡು ಲೋಕಕ್ಕೆ ಅನುಕೂಲ ಸ್ಥಿತಿ ನಿರ್ಮಿಸುತ್ತದೆ ಎಂದು ಧರ್ಮಸ್ಥಳದ ಶ್ರೀರಾಮ ಕ್ಷೇತ್ರದ ಮಠಾಧೀಶರು ಹಾಗೂ ಜಿಲ್ಲೆಯ ನಾಮಧಾರಿ ಸಮಾಜದ ಕುಲಗುರುಗಳಾದ ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಗಳು ನುಡಿದರು.
ಪ್ರಥದ ದಿನದ ಸಾತ್ವಿಕತೆಯ ಜೀವನದ ಮೂಲಕ ಶಾಂತಿ, ಸುಖ,ನೆಮ್ಮದಿ ಸಿಗುತ್ತದೆ. ಅಧಿಕಾರದಿಂದ ಸಿಗುವ ಸಂಪತ್ತು ಶಾಶ್ವತವಲ್ಲ. ಆಧ್ಯಾತ್ಮಿಕ ಸುಧೆಯ ಅರಿವು,ಭಕ್ತಿಯ ಭಾವ ಜಾಗೃತಗೊಳಿಸುವ ಚಾತುರ್ಮಾಸ್ಯದ ಮುಖ್ಯ ಉದ್ದೇಶ ಆತ್ಮ ಕಲ್ಯಾಣ ಹಾಗೂ ಲೋಕ ಕಲ್ಯಾಣ” ಆಗಿರುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಬಿಜೆಪಿ ರಾಜ್ಯಾಧ್ಯಕ್ಷ ,ಸಂಸದ ನಳೀನ್ ಕುಮಾರ್ ಕಟೀಲ್ ಮಾತನಾಡಿ ಆಧ್ಯಾತ್ಮದ ಚಿಂತನೆಯೊAದಿಗೆ ಪೂಜೆ ಮಾಡುವ ಶ್ರೇಷ್ಠ ಗುರುವರ್ಯವರ ಆದರ್ಶ,ಚಿಂತನೆಗಳು, ಸಂಸ್ಕಾರ ಹಾಗೂ ವಿಚಾರಧಾರೆಗಳು ನಮ್ಮಲ್ಲಿ ಅರಿವು ಮೂಡಿಸಲುಟ ಮಾರ್ಗದರ್ಶನ ನೀಡುತ್ತವೆ.ಗುರುವಿನ ಆರಾಧನೆ ಮೂಲಕ ಸಂಕಲ್ಪ ನೆರವೇರುವುದು ಎಂದು ಕನ್ಯಾಡಿ ಶ್ರೀ ರಾಮ ಕ್ಷೇತ್ರ ಮಹಾ ಸಂಸ್ಥಾನದ ಜಗದ್ಗುರು ಪೀಠದ ಪೀಠಾಧೀಶ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಚಾತುರ್ಮಾಸ್ಯದ ಪ್ರಥಮ ದಿನ ಜು.13 ರಂದು ಪಾದ ಪೂಜೆ ನೆರವೇರಿಸಿ ಮಾತನಾಡಿದರು.
ಭಾರತದಲ್ಲಿ ಗುರು ಪೀಠವೇ ಶ್ರೇಷ್ಠ,ರಾಜ ಪೀಠಕ್ಕು ಗುರು ಪೀಠವೇ ಬಲ ನೀಡುತ್ತದೆ.ಜನ ಸಾಮಾನ್ಯರಿಗೆ ಜ್ಞಾನದ ಸಿಂಚನ ನೀಡುವ ಗುರು ಪರಂಪರೆ ವರ್ತಮಾನದ ಕೊಂಡಿ. ಎಂದರು.
ಚಾತುರ್ಮಾಸ್ಯ ಸಮಿತಿ ಅಧ್ಯಕ್ಷ ಹಾಗೂ ಬೆಳ್ತಂಗಡಿ ಕ್ಷೇತ್ರದ ಶಾಸಕ ಪ್ರಸ್ತಾವನೆಯೊಂದಿಗೆ ಮಾತನಾಡಿ ದಕ್ಷಿಣ ಕನ್ನಡ 8 ವಿಧಾನ ಸಭೆ ಹಾಗೂ ರಾಜ್ಯದ ಹಲವು ಜಿಲ್ಲೆಗಳು ಸೇರಿ ನಡೆಸುತ್ತಿರುವ ಗುರುಗಳ ಚಾತುರ್ಮಾಸ್ಯ ಸಮಾಜದ ಯಶಸ್ವಿ ಸಂಕಲ್ಪಗಳಿಗೆ ದಾರಿದೀಪ,ಶಾಶ್ವತ ಯೋಜನೆ ರೂಪಿಸಿ ಸಂಸದ, ಸಚಿವರ ಮಾರ್ಗದರ್ಶನದಲ್ಲಿ ಮಠವು ಅಭಿವೃದ್ಧಿ ಹೊಂದಿರುವುದು ಭಕ್ತ ವೃಂದದ ಸಂತಸಕ್ಕೆ ಕಾರಣವಾಗಿದೆ. 48 ದಿನಗಳಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಶಾಶ್ವತ ಸಭಾ ಚಪ್ಪರ, ಅನ್ನ ಛತ್ರ ನಿರ್ಮಾಣ ಗುರುಗಳ ಆಶೀರ್ವಾದದಿಂದ ಮಾಡಲಾಗಿದೆ ಎಂದರು.

ಕಿನೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ ಮಾತನಾಡಿ ಸ್ವಾಮೀಜಿಗಳು ಯಾವುದೇ ಜಾತಿಗೆ ಸೀಮಿತ ವಾಗಿರದೆ ಎಲ್ಲಾ ಸಮಾಜದ ಸ್ವಾಮೀಜಿಯಾಗಿ ಸೇವೆ ಮಾಡಿದಾಗ ಪ್ರಗತಿ ಸಾಧ್ಯ ಎಂದರು. ಭಟ್ಕಳದ ಮಾಜಿ ಶಾಸಕ ಮಾಂಕಾಳ್ ವೈದ್ಯ . ಮಾತನಾಡಿ ಸ್ವಾಮೀಜಿಗಳ ಸೇವಾ ಕಾರ್ಯಕ್ರಮಕ್ಕೆ ನನ್ನ ಸಹಕಾರ ಸದಾ ಇರಲಿದೆ ಎಂದರು.
, ಬೆಳ್ತಂಗಡಿ ಮಾಜಿ ಶಾಸಕ ಕೆ. ಪ್ರಭಾಕರ ಬಂಗೇರ ಗುರುದೇವ ಮಠದ ಟ್ರಸ್ಟಿ ಕಂಕನಾಡಿ ಗರೋಡಿ ಅಧ್ಯಕ್ಷ ಚಿತ್ತರಂಜನ್ ಭಟ್ಕಳ, ಹೊನ್ನಾವರ ಶ್ರೀ ರಾಮ ಕ್ಷೇತ್ರ ಸಮಿತಿಯ ಪದಾಧಿಕಾರಿಗಳು, ಸ್ವಾಮಿಜಿಯ ಶಿಷ್ಯ ವೃಂದ ಮೊದಲಾದವರು ಉಪಸ್ಥಿತರಿದ್ದರು.

ಕುದ್ರೋಳಿ ನಾರಾಯಣಗುರು ಕಾಲೇಜಿನ ಉಪನ್ಯಾಸಕ ಕೇಶವ ಬಂಗೇರ ಗೇರುಕಟ್ಟೆ ಚಾತುರ್ಮಾಸ್ಯ ವೃತದ ಕುರಿತು ಪ್ರಾಸ್ತಾವಿಸಿ ಮಾತನಾಡಿದರು. ಶ್ರೀ ರಾಮ ಕ್ಷೇತ್ರ ಸೇವಾ ಸಮಿತಿ ಜಿಲ್ಲಾ ಸಂಚಾಲಕರ ಕೃಷ್ಣಪ್ಪ ಪೂಜಾರಿ ಕಲ್ಲಡ್ಕ ಕಾರ್ಯಕ್ರಮ ನಿರ್ವಹಿಸಿದರು.
ಚಾತುರ್ಮಾಸ್ಯ ಸಮಿತಿ ಸಂಚಾಲಕ ಸೀತಾರಾಮ ಬಿ. ಎಸ್. ಬೆಳಾಲು ವಂದಿಸಿದರು.
ಕಾರ್ಯಕ್ರಮದ ಮೊದಲು ಶ್ರೀ ರಾಮ ಕ್ಷೇತ್ರ ಮಹಾಸಂಸ್ಥಾನದಲ್ಲಿ ಮತ್ತು ಗುರುದೇವ ಮಠದಲ್ಲಿ ವಿಶೇಷ ಪೂಜೆ, ಗುರುದೇವ ಮಠ ದೇವರ ಗುಡ್ಡೆ ದೇವಲಿಂಗ ದೇವಸ್ಥಾನದಿಂದ ಶ್ರೀಗಳ ವೈಭವ ಪುರ ಪ್ರವೇಶ ಮೆರವಣಿಗೆ ನಡೆಯಿತು.

error: