May 5, 2024

Bhavana Tv

Its Your Channel

ಖಾದಿ ಉತ್ಸವಕ್ಕೆ ಮುಖ್ಯಮಂತ್ರಿ ಚಾಲನೆ, ಬಜೆಟ್‌ನಲ್ಲಿ ಗ್ರಾಮೋದ್ಯೋಗಕ್ಕೆ ಆದ್ಯತೆ

ಬೆಂಗಳೂರು: ‘ಖಾದಿಗೆ ಉತ್ತಮ ಭವಿಷ್ಯವಿದೆ, ಯಾರೂ ಭಯ ಪಡುವ ಅವಶ್ಯಕತೆ ಇಲ್ಲ. ಖಾದಿ ಮತ್ತು ಗ್ರಾಮೋದ್ಯೋಗದಿಂದ ಗ್ರಾಮೀಣ ಭಾಗದಲ್ಲಿ ಉದ್ಯೋಗ ಸೃಷ್ಟಿಯಾಗುತ್ತಿದೆ. ಹೀಗಾಗಿ, ಈ ಬಾರಿಯ ಬಜೆಟ್‌ನಲ್ಲಿ ಗ್ರಾಮೋದ್ಯೋಗಕ್ಕೆ ಆದ್ಯತೆ ನೀಡಲಾಗುವುದೆ0ದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು.

ನಗರದ ಅರಮನೆ ಮೈದಾನದಲ್ಲಿ ಆಯೋಜಿಸಲಾಗಿದ್ದ ಒಂದು ತಿಂಗಳು ಕಾಲ ನಡೆಯುವ ರಾಷ್ಟ್ರ ಮಟ್ಟದ ಖಾದಿ ಮತ್ತು ಗ್ರಾಮೋದ್ಯೋಗ ವಸ್ತು ಪ್ರದರ್ಶನದ ಉದ್ಘಾಟಿಸಿ ಅವರು ಮಾತನಾಡಿದರು.

ಪಾಲಿಸ್ಟರ್ ಬಟ್ಟೆಗಳ ಉಪಯೋಗ ಹೆಚ್ಚಾದಾಗ ಖಾದಿ ವಲಯಕ್ಕೆ ತೊಂದರೆಯಾಗಿತ್ತು. ಆದರೆ ಈಗ ಸಾಕಷ್ಟು ಬದಲಾವಣೆಗಳಾಗಿವೆ. ಖಾದಿ ಬಟ್ಟೆಗಳಿಗೆ ಸಾವಯವ ಆಹಾರಕ್ಕೆ ಬೇಡಿಕೆಗಳು ಹೆಚ್ಚಾಗುತ್ತಿದೆ. ಅಮೆಜಾನ್ ಹಾಗೂ ಪ್ಲಿಪ್ ಕಾರ್ಟನಂತ ಸಂಸ್ಥೆಗಳು ಖಾದಿ ವಸ್ತುಗಳ ಖರೀದಿಗೆ ಆಸಕ್ತಿವಹಿಸಿವೆ, ನೇರವಾಗಿ ಉತ್ಪಾದಕರಿಂದ ಮಾರುಕಟ್ಟೆಗೆ ಕಳುಹಿಸುವ ವ್ಯವಸ್ಥೆ ಮಾಡುತ್ತಿದೆ ಎಂದು ತಿಳಿಸಿದರು.
ಖಾದಿ ಗ್ರಾಮೋದ್ಯೋಗ ಸಂಸ್ಥೆಯನ್ನು ಆರ್ಥಿಕವಾಗಿ ಬಲಪಡಿಸಲು ಕ್ರಮ ಕೈಗೊಳ್ಳಲಾಗುವುದು. ಬಾಕಿ ಉಳಿದಿರುವ ಪ್ರೋತ್ಸಾಹಧನದ ಮೊತ್ತ 174 ಕೋಟಿ ರೂಪಾಯಿ ಅನುಮೋದನೆ ನೀಡಲಾಗುವುದು
ಎಂದರು.
ಸ್ತ್ರೀ ಸಾಮರ್ಥ್ಯ ಯೋಜನೆ ಮೂಲಕ ಮಹಿಳೆಯರಿಗೆ 5 ಲಕ್ಷ ರೂ. ವರೆಗೂ ಧನಸಹಾಯ ಮಾಡಿ, ಮಹಿಳಾ ಸಂಘಗಳ ಮೂಲಕ ಉತ್ಪಾದನೆಗೆ ಆದ್ಯತೆ ನೀಡಲಾಗಿದೆ. ಯುವಕರಿಗೆ ಸಂಘಗಳ ಮೂಲಕ ಸ್ವಯಂ ಉದ್ಯೋಗಕ್ಕೂ ಅಕಾಶ ಕಲ್ಪಿಸಲಾಗಿದೆ ಎಂದರು.

ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ, ಖಾದಿ ಮಂಡಳಿ ಅಧ್ಯಕ್ಷ ನಾಗರಾಜು ಹಾಗೂ ಖಾದಿ ಮಂಡಳಿಯ ನಿರ್ದೇಶಕ ಮುಕುಂದ ಎಮ್ ನಾಯ್ಕ ಶಿರಾಲಿ ಮುಂತಾದವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ನಿರ್ದೇಶಕರಾದ ಉತ್ತರ ಕನ್ನಡದ ಮುಕುಂದ ಎಮ್ ನಾಯ್ಕ ಶಿರಾಲಿಯವರು ಮಾದ್ಯಮದವರೊಂದಿಗೆ ಮಾತನಾಡಿ 1 ತಿಂಗಳುಗಳ ಕಾಲ ನಡೆಯುವ ಈ ವಸ್ತು ಪ್ರದರ್ಶನಕ್ಕೆ ಬೆಂಗಳೂರಿಗೆ ಬೇಟಿಕೊಟ್ಟಾಗ ವಸ್ತು ಪ್ರದರ್ಶನಕ್ಕೆ ಬೇಟಿ ನೀಡಿ ಖಾದಿ ಗ್ರಾಮೋದ್ಯೊಗಕ್ಕೆ ಬೆಂಬಲ ನೀಡಿ ಹಾಗೂ ಸರಕಾರ ಖಾದಿ ಗ್ರಾಮೋದ್ಯೋಗಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದು ಅದರ ಸದುಪಯೋಗ ಪಡೆದುಕೊಳ್ಳಿ ಎಂದು ಕರೆ ನೀಡಿದ್ದಾರೆ.

error: