May 4, 2024

Bhavana Tv

Its Your Channel

ಹೊನ್ನಾವರ: ರಾಜ್ಯ ವಿಧಾನಸಭಾ ಚುನಾವಣೆಯ ಫಲಿತಾಂಶ, ಕುಮಟಾ ಕ್ಷೇತ್ರ ಬಿಜೆಪಿ ತೆಕ್ಕೆಗೆ,ಭಟ್ಕಳ ಕ್ಷೇತ್ರ ಕಾಂಗ್ರೆಸ್ ವಶ, ಉತ್ತರ ಕನ್ನಡ ಕಾಂಗ್ರೇಸ್ ೪, ಬಿಜೆಪಿ ೨ ಗೆಲುವು ಕಂಡಿದೆ,

ಭಟ್ಕಳ-ಹೊನ್ನಾವರ ವಿಧಾನಸಭಾ ಕ್ಷೇತ್ರದಲ್ಲಿ ಮಂಕಾಳ ವೈದ್ಯ ಈ ಬಾರಿ ಮತ್ತೇ ಕಾಂಗ್ರೆಸ್ ನಿಂದ ಸ್ಪರ್ಧಿಸಿ ೧೦೦೪೪೨ ಮತ ಪಡೆದು ೩೨,೬೭೧ ಮತಗಳ ಅಂತರದಿ0ದ ಭರ್ಜರಿ ಗೆಲವು ಸಾಧಿಸಿದ್ದಾರೆ.

ಮಂಕಾಳರ ಗೆಲವಿನ ಹಿಂದೆ ಶಾಸಕರಾಗಿದ್ದ ಸುನೀಲ್ ನಾಯ್ಕ ಅವರ ವರ್ತನೆಯಿಂದ ಬೇಸರಗೊಂಡಿದ್ದ ಮೂಲ ಬಿಜೆಪಿಗರು,ಹಿಂದೂಪರ ಕಾರ್ಯಕರ್ತರ ಹೆಚ್ಚಿನ ಶ್ರಮವಿದೆ ಎನ್ನಲಾಗುತ್ತಿದೆ. ಕುಮಟಾ ಮತ ಏಣಿಕೆ ಕೇಂದ್ರ ಸನಿಹದಲ್ಲಿ ಮಂಕಾಳರ ನೂರಾರು ಅಭಿಮಾನಿಗಳು ಜಮಾಯಿಸಿದ್ದರು. ಕುಮಟಾದಿಂದ ಭಟ್ಕಳದ ವರೆಗೂ ಜೈಕಾರ ಹಾಕುತ್ತಾ ಕರೆ ತಂದರು. ಅಲ್ಲಲ್ಲಿ ಅಭಿಮಾನಿಗಳು ಹೂಮಾಲೆ ಹಾಕಿದರು. ಪಟ್ಟಣದ ಗೇರುಸೊಪ್ಪಾ ವೃತ್ತದಲ್ಲಿ,ಶರಾವತಿ ವೃತ್ತದಲ್ಲಿ ಅಭಿಮಾನಿಗಳು,ಪಕ್ಷದ ಕಾರ್ಯಕರ್ತರು,ಮುಖಂಡರು ಪಟಾಕಿ ಹೊಡೆದು,ಮಂಕಾಳರಿಗೆ ಸಿಹಿತಿನಿಸಿ ಸಂಭ್ರಮಿಸಿದರು.
ಸಾಮಾಜಿಕ ಜಾಲತಾಣದಲ್ಲಿ ಶಾಸಕರ ಬೆಂಬಲಿಗರಿ0ದ ನಡೆದ ತೆಜೋವಧೆ, ಕಾರ್ಯಕರ್ತರ ಶ್ರಮ, ಹಿಂದುತ್ವ ಹೋರಾಟಗಾರರ, ಶಾಸಕರ ವಿರೋಧಿತನದ ಒಗ್ಗಟ್ಟು ಮಂಕಾಳ ವೈದ್ಯರ ಪಾಲಿಗೆ ಗೆಲುವಿಗೆ ದೊಡ್ಡ ಅಂತರ ನೀಡಿ ಗೆಲುವು ಸಾಧಿಸಲು ನೆರವಾಯಿತು.
ಕುಮಟಾ-ಹೊನ್ನಾವರ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ದಿನಕರ ಶೆಟ್ಟಿ ೫೯೯೬೬ ಮತ ಪಡೆದು ೬೭೩ ಮತಗಳ ಅಂತರದಿAದ ಮತ್ತೊಮ್ಮೆ ಗೆಲುವು ಸಾಧಿಸಿ ವಿಜಯಪತಾಕೆ ಹಾರಿಸಿದ್ದಾರೆ.ಬಿಜೆಪಿ ಮತ್ತು ಜೆಡಿಎಸ್ ನಡುವೆ ತೀವ್ರ ಜಿದ್ದಾಜಿದ್ದಿಗೆ ಕಾರಣವಾದ ಕ್ಷೇತ್ರವಾಗಿತ್ತು. ಮೊದಲಿನ ಸುತ್ತಿನಿಂದಲೂ ಜೆಡಿಎಸ್ ಪಕ್ಷದ ಅಭ್ಯರ್ಥಿ ಸೂರಜ್ ನಾಯ್ಕ ಸೋನಿ, ಬಿಜೆಪಿ ಅಭ್ಯರ್ಥಿ ದಿನಕರ ಶೆಟ್ಟಿ ಮಧ್ಯೆ ನೇಕ್ ಟು ನೆಕ್ ಫೈಟ್ ನಡೆದಿತ್ತು.ಕೊನೆಯ ಎರಡು ಸುತ್ತಿನ ವರೆಗೂ ಕೆಲವೇ ಮತಗಳ ಅಂತರದಲ್ಲಿ ಸೋನಿ ಮುನ್ನಡೆ ಸಾಧಿಸುತ್ತಿದ್ದರು. ಕುಮಟಾದಲ್ಲಿ ಚೆನ್ನಾಗಿ ಮತ ಪಡೆದ ಸೋನಿಗೆ ಹೊನ್ನಾವರ ಭಾಗದಲ್ಲಿ ಹಿನ್ನಡೆಯಾಗಿದೆ. ಕಳೆದ ಬಾರಿ ಹಿಂದೂತ್ವದ ಅಲೆಯಲ್ಲಿ ಸರಿಸುಮಾರು ೩೦,೦೦೦ ಮತಗಳ ಅಂತರದಲ್ಲಿ ಜಯಸಾಧಿಸಿದ್ದ ದಿನಕರ ಶೆಟ್ಟಿ ಈ ಬಾರಿ ಕೇವಲ ೬೭೩ ಮತಗಳ ಅಂತರದಿAದ ಗೆಲವು ಸಾಧಿಸುವಂತಾಗಿದೆ.ಎದುರಾಳಿ ಸೂರಜ್ ಸೋನಿ ೫೯೨೯೩ ಮತ ಪಡೆದು ಗೆಲವಿನ ಅಲೆಯಲ್ಲಿ ಸೋಲು ಕಾಣುವಂತಾಗಿದೆ. ಒಂದು ಕ್ಷಣ ಸೂರಜ್ ಗೆಲವು ಎಂದು ಸಂಭ್ರಮಾಚರಣೆಯಲ್ಲಿದ್ದ ಕಾರ್ಯಕರ್ತರು ಗಲಿಬಿಲಿಯಾದರು.
ಹೊನ್ನಾವರ ಕಾರ್ಯಕರ್ತರ ಶ್ರಮ ದಿನಕರ ಶೆಟ್ಟಿ ಗೆಲುವಿಗೆ ಪ್ಲಸ್ ಪಾಯಿಂಟ್ ಆಗಿದೆ. ಎರಡು ತಾಲೂಕು ಹೊಂದಿದ್ದರೂ ಈ ಬಾರಿ ಹೊನ್ನಾವರ ಮತ ಸೋಲು ಗೆಲುವಿನ ನಿರ್ಧಾರಕ್ಕೆ ಸಾಕ್ಷಿಯಾಗಿದ್ದು, ಪಟ್ಟಣ ಹಾಗೂ ಎರಡು ಜಿ.ಪಂ. ಮತಗಳು ಬಿಜೆಪಿಯತ್ತ ಚಲಾವಣೆಯಾಗಿರುದು ಕಾರ್ಯಕರ್ತರ ಒಗ್ಗಟ್ಟು, ಮಾಜಿ ಜಿ.ಪಂ.ಸದಸ್ಯ ಶಿವಾನಂದ ಹೆಗಡೆ ಸೆರ್ಪಡೆ ಗೆಲುವಿಗೆ ಪ್ರಮುಖವಾಯಿತು.
ಕ್ಷೇತ್ರದಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಪೈರ್ ಬ್ರ‍್ಯಾಂಡ್ ಸಿಎಂ ಯೋಗಿ ಆದಿತ್ಯನಾಥ್ ಚುನಾವಣಾ ರ್ಯಾಲಿಯಲ್ಲಿ ಪಾಲ್ಗೊಂಡಿರುವುದು,ಅAತಯೇ ಅಂಕೋಲಾಕ್ಕೆ ಫ್ರಧಾನಿ ಮೋದಿ ಭೇಟಿ ಅಭ್ಯರ್ಥಿ ಗೆಲುವಿಗೆ ಪ್ಲಸ್ ಆಗಿದೆ.ಚದುರಿ ಹೋಗಿದ್ದ ಹಿಂದೂತ್ವದ ವೋಟುಗಳು ಮತ್ತೇ ಒಗ್ಗೂಡಲು ಕಾರಣವಾಗಿತ್ತು. ಹೊನ್ನಾವರ ನಗರ ಹಾಗೂ ಮುಗ್ವಾ ಮತ್ತು ಹಳದೀಪುರ ಜಿ.ಪಂ. ವ್ಯಾಪ್ತಿಯ ಮತಗಳು ಬಿಜೆಪಿಯತ್ತ ಹೆಚ್ಚಿನ ಪ್ರಮಾಣದಲ್ಲಿ ಚಲಾವಣೆಯಾಗಿರುದು ದಿನಕರ ಶೆಟ್ಟಿ ಗೆಲುವಿಗೆ ಪ್ರಮುಖ ಪಾತ್ರವಹಿಸಿತು.

error: