ಭಟ್ಕಳ: ಭಟ್ಕಳ ಹೊನ್ನಾವರ ವಿಧಾನಸಭಾ ಚುನಾವಣೆಗೆ ಸಂಬ0ಧಿಸಿದ0ತೆ ಮತದಾರನ ತೀರ್ಪು ಮತಪೆಟ್ಟಿಗೆಯಲ್ಲಿ ಭದ್ರವಾಗಿದ್ದು, 77.73 ಶೇ. ಮತದಾನ ದಾಖಲಾಗಿದೆ.
112988 ಪುರುಷರು. 109720 ಮಹಿಳೆಯರು ಸೇರಿದಂತೆ ಒಟ್ಟೂ 222708 ಮತದಾರರ ಪೈಕಿ 85462 ಪುರುಷ. 87638, ಮಹಿಳಾ ಮತದಾರರನ್ನು ಒಳಗೊಂಡAತ ಒಟ್ಟು 171101 ಮತದಾರರು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ. ಭಟ್ಕಳ ಕಿರಿಯ ಪ್ರಾಥಮಿಕ ಶಾಲೆ ಹದ್ದೂರಿನಲ್ಲಿ ಗರಿಷ್ಠ ಶೇ. 93.40 ಮತದಾನ ದಾಖಲಾಗಿದೆ. ಇಲ್ಲಿ 358 ಪುರುಷ, 354 ಮಹಿಳಾ ಮತದಾರರಿದ್ದು (ಒಟ್ಟು 712), 665 ಮತದಾರರು ಮತ ಚಲಾಯಿಸಿದ್ದಾರೆ. ಭಟ್ಕಳ ಪಟ್ಟಣ ಪ್ರದೇಶದ ಮತದಾರರನ್ನು ಒಳಗೊಂಡ ಆನಂದಾಶ್ರಮ ಕಾನ್ವೆಂಟ್ (ಮತಗಟ್ಟೆ ಸಂಖ್ಯೆ 201) ಮತಗಟ್ಟೆಯಲ್ಲಿ ಕನಿಷ್ಠ ಶೇ.47.35 ಮತದಾನ ದಾಖಲಾಗಿದೆ. ಇಲ್ಲಿ 737 ಮತದಾರರ ಪೈಕಿ ಕೇವಲ 349 ಮತದಾರರು ತಮ್ಮ ಮತ ಚಲಾಯಿಸಿದ್ದಾರೆ.
ಭಟ್ಕಳ ಪಟ್ಟಣದಲ್ಲಿ 20 ಸಾವಿರ ದಾಟಿದ ಮತದಾನ,
ಮತದಾನ ಮುಗಿಯುತ್ತಿದ್ದಂತೆಯೇ ಕಾಂಗ್ರೆಸ್ ಹಾಗೂ ಬಿಜೆಪಿ ಮುಖಂಡರು, ಕಾರ್ಯಕರ್ತರು ಫಲಿತಾಂಶದ ಬಗ್ಗೆ, ಲೆಕ್ಕಾಚಾರದಲ್ಲಿ ತೊಡಗಿಕೊಂಡಿದ್ದು, ಎಲ್ಲರೂ ಭಟ್ಕಳ ಪಟ್ಟಣ ಪ್ರದೇಶದ ವಿಶೇಷವಾಗಿ ಅಲ್ಪಸಂಖ್ಯಾತ ಮುಸ್ಲಿಮ್ ಬಾಹುಳ್ಯ ಹೊಂದಿರುವ ಮತಗಟ್ಟೆಗಳಲ್ಲಿ ನಡೆದಿರುವ ಮತದಾನದ ಬಗ್ಗೆ ಬರವಸೆ ಹೊಂದಿರುವುದು ಕಂಡು ಬಂದಿದೆ. ಜಾಲಿಯನ್ನು ಹೊರತುಪಡಿಸಿ ಭಟ್ಕಳ ಪಟ್ಟಣ ಪ್ರದೇಶದ (ಹನೀಫಾಬಾರ್ದ್ 2 ಮತಗಟ್ಟೆಗಳನ್ನು ಸೇರಿಸಿ) 34 ಮತಗಟ್ಟೆಗಳಲ್ಲಿ, 17000ಕ್ಕೂ ಹೆಚ್ಚು ಮತದಾರರು ಮತ ಚಲಾಯಿಸಿದ್ದು, ಪಲಿತಾಂಶದ ಮೇಲೆ ನಿಖರವಾದ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಿದೆ. ಇದರ ಜೊತೆಗೆ ಜಾಲಿ, ಬೆಳಲಖಂಡ, ಪುರವರ್ಗ, ಬೆಳ್ನಿ, ಮುಂಡಳ್ಳಿ, ಶಿರಾಲಿ, ಮುರುಡೇಶ್ವರ, ಮಂಕಿ, ಹೊನ್ನಾವರ ಮತ್ತಿತರ ಅಲ್ಪಸಂಖ್ಯಾತ ಬಾಹುಳ್ಯ ಇರುವ ಮತಗಟ್ಟೆಗಳಲ್ಲಿ ನಡೆದ ಮತದಾನದ ಬಗ್ಗೆಯೂ ರಾಜಕೀಯ ಮುಖಂಡರು ಹೆಚ್ಚು ಆಸಕ್ತಿಯನ್ನು ಹೊಂದಿದ್ದು, ತಮ್ಮದೇ ಲೆಕ್ಕಾಚಾರವನ್ನು ಮುಂದಿಡುತ್ತಿದ್ದಾರೆ.
ಬೆಟ್ಟಿ0ಗ್ ಜೋರು:
ಈ ನಡುವೆ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ತೆರೆಮರೆಯಲ್ಲಿ ಬೆಟ್ಟಿಂಗ್ ಆರಂಭವಾಗಿದೆ. ಬಹಳಷ್ಟು ಜನರು ಕಾಂಗ್ರೆಸ್ ಗೆಲುವಿನ ಬಗ್ಗೆ ಪಂಥಾಹ್ವಾನ ಮಾಡುತ್ತಿದ್ದರೆ, ಮತ್ತೆ ಕೆಲವು ಬಿಜೆಪಿ ಕಾರ್ಯಕರ್ತರು, ಹೊನ್ನಾವರದಲ್ಲಿ ಗರಿಷ್ಠ ಮತಗಳ ಅಂತರದ ಮುನ್ನಡೆಯನ್ನು ನಿರೀಕ್ಷಿಸಿ ಬೆಟ್ಟಿಂಗ್‌ಗೆ ಮುಂದಾಗಿರುವ ಬಗ್ಗೆ ಮಾಹಿತಿ ಹರಿದಾಡುತ್ತಿದೆ. ಮತ ಎಣಿಕೆಗೆ ಕೇವಲ ಒಂದೇ ದಿನ ಬಾಕಿ ಇದ್ದು, ರಾಜಕೀಯ ಮುಖಂಡರು, ಕಾರ್ಯಕರ್ತರನ್ನು ತುದಿಗಾಲ ಮೇಲೆ ನಿಲ್ಲಿಸಿದೆ.
More Stories
ಗಣಪತಿ ವಿಸರ್ಜನೆ ವೇಳೆ ಸಮುದ್ರದಲ್ಲಿ ಕೊಚ್ಚಿ ಹೊದ ಬಾಲಕ, ರಕ್ಷಣೆ ಮಾಡಿದ ಕೆ.ಎನ್ಡಿ ಪೊಲೀಸರು
ರೈಲು ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೋರ್ವನ ಕೈ ದೇಹದಿಂದ ತುಂಡು
ಉಜಿರೆಯ ಶ್ರೀರಾಮ ಕ್ಷೇತ್ರದ ಪೀಠಾಧೀಶ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ 5ನೇ ಚಾತುರ್ಮಾಸ ವೃತಾಚರಣೆ, ಭಟ್ಕಳ ತಾಲ್ಲೂಕಿನ ಕರಿಕಲ್ ಧ್ಯಾನಮಂದಿರದಲ್ಲಿ