May 5, 2024

Bhavana Tv

Its Your Channel

ಚುನಾವಣೆ ಮುಗಿಸಿ ಕಾರ್ಯಕರ್ತರ ಮದುವೆ, ಗೃಹ ಪ್ರವೇಶ ಕಾರ್ಯಕ್ರಮದಲ್ಲಿ ಹಾಗೂ ಚುನಾವಣಾ ಲೆಕ್ಕಾಚಾರದಲ್ಲಿ ಅಭ್ಯರ್ಥಿಗಳು ಬ್ಯೂಸಿ.

ಭಟ್ಕಳ: ಬುಧವಾರ ವಿಧಾನಸಭಾ ಚುನಾವಣೆ ಮುಗಿದಿದ್ದು, ಮಾರನೆಯ ದಿನ ಗುರುವಾರ ಅಭ್ಯರ್ಥಿಗಳು ಚುನಾವಣಾ ಪ್ರಚಾರ ಗುಂಗಿನಿ0ದ ಹೊರ ಬಂದು ತಮ್ಮದೇ ಆದ ಕೆಲಸ ಕಾರ್ಯಗಳಲ್ಲಿ ತೊಡಗಿಕೊಳ್ಳುವ ಪ್ರಯತ್ನ ನಡೆಸಿದ್ದಾರೆ.


ಕಾಂಗ್ರೆಸ್ ಅಭ್ಯರ್ಥಿ ಮಂಕಾಳ ವೈದ್ಯ, ಚುನಾವಣೆಯ ಮಾರನೆಯ ದಿನವೇ ಮನೆಯಲ್ಲಿ ಕೆಲ ಹೊತ್ತು ಕಾರ್ಯಕರ್ತರೊಂದಿಗೆ ಚರ್ಚೆ ನಡೆಸಿದ್ದು, ನಂತರ ಅಲ್ಲಿಂದ ಹೊರಟು ಮಂಕಿ, ಜಾಲಿ, ಆರೆನ್ನೆಸ್ ಸಭಾಭವನ, ಆಸರಕೇರಿ ಸೇರಿದಂತೆ ವಿವಿದೆಡೆ ದಿನವಿಡೀ ಕಾರ್ಯತರ ಗ್ರಹ ಪ್ರವೇಶ,ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಚುನಾವಣೆ ನಿನ್ನೆಯೇ ಮುಗಿದು ಹೋಗಿದೆ.
ಜನರ ತೋರಿಸಿದ ಪ್ರೀತಿ, ವಿಶ್ವಾಸಕ್ಕೆ ಋಣಿಯಾಗಿದ್ದು, ಕಾರ್ಯಕರ್ತರು, ಸಾರ್ವಜನಿಕರ೦ದಿಗಿನ ಸಂಪಕವನ್ನು ಮುಂದೆ ವರಿಸಿಕೊಂಡು ಹೋಗುತ್ತೇನೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ ಸ೦ದರ್ಬದಲ್ಲಿ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ವೈದ್ಯರನ್ನು ಉತ್ಸಾಹದಿಂದಲೇ ಬರ ಮಾಡಿಕೊಂಡಿದ್ದು ವಿಶೇಷವಾಗಿತ್ತು. ಇತ್ತ ಬಿಜೆಪಿ ಅಭ್ಯರ್ಥಿ ಸುನೀಲ ನಾಯ್ಕ,
ಮನೆಯಲ್ಲಿಯೇ ಕುಳಿತು. ಪಕ್ಷದ ಮುಖಂಡರೊAದಿಗೆ ಚುನಾವಣಾ ಫಲಿತಾಂಶದ ಬಗ್ಗೆ ಚರ್ಚೆ ನಡೆಸಿದ್ದಾರೆ. ಕಳೆದ ೫-೬ ತಿಂಗಳುಗಳಿAದ ತಮ್ಮ ಗೆಲುವಿಗೆ ಪ್ರಯತ್ನ ನಡೆಸಿದ ಪಕ್ಷದ ಎಲ್ಲ ಕಾರ್ಯಕರ್ತರು, ಮುಖಂಡರಿಗೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು. ನಂತರ ಅವರು ಕೆಲ
ಹೊತ್ತು ನಿದ್ರೆಗೆ ಜಾರಿ ಚುನಾವಣಾ ಪ್ರಚಾರ, ಕಾರ್ಯ, ಸುತ್ತಾಟದ ಬಳಲಿಕೆಯನ್ನು ನೀಗಿಸಿಕೊಳ್ಳುವ ಪ್ರಯತ್ನ ನಡೆಸಿದ್ದಾರೆ. ಭಟ್ಕಳ ಜೆಡಿಎಸ್ ಅಭ್ಯರ್ಥಿ ನಾಗೇಂದ್ರ ನಾಯ್ಕ, ಚುನಾವಣೆಯ ಮಾರನೆಯ ದಿನವೇ ತಮ್ಮ ಉದ್ಯಮದ ಕಡೆ ಗಮನ ಹರಿಸಿದ್ದು, ಸಂಜೆಯ ಹೊತ್ತಿಗೆ ಚೌಥನಿಯಲ್ಲಿರುವ ತಮ್ಮ ಆತ್ಮೀಯರೋರ್ವರ ಮನೆಗೆ ಭೇಟಿ ನೀಡಿ ಚುನಾವಣೆಯ ಬಗ್ಗೆ ಕೆಲ ಹೊತ್ತು ಚರ್ಚೆ ನಡೆಸಿದ್ದಾರೆ. ಯಾರು ಏನೇ ಮಾಡಿಕೊಂಡಿರಲಿ ಎಲ್ಲರ ಗಮನವೂ ಶನಿವಾರದ ಚುನಾವಣಾ ಫಲಿತಾಂಶದ ಮೇಲೆ ಇದೆ.

error: