May 4, 2024

Bhavana Tv

Its Your Channel

ಪತ್ರಿಕೆಗಳನ್ನು ದಿನಾಲೂ ಕೊಂಡು ಓದುವ ಮೂಲಕ ಪ್ರತಿ ದಿನವನ್ನು ಪತ್ರಿಕಾ ದಿನಾಚರಣೆಯನ್ನಾಗಿಸಿ-ಮಾನಾ ಸುತ

ಭಟ್ಕಳ: ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಿAದ ಪತ್ರಿಕಾ ದಿನಾಚರಣೆ ಪ್ರಯುಕ್ತ ಮುರ್ಡೇಶ್ವರದ ಮಾನಾಸ್ಮೃತಿಯಲ್ಲಿ ಸಾಹಿತಿ ಶಂಭು ನಾರಾಯಣ ಹೆಗಡೆ (ಮಾನಾಸುತ) ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಶಂಭು ಹೆಗಡೆ ಯಾವುದೇ ವಿದ್ಯುನ್ಮಾನ, ವಾಟ್ಸ್ಅಪ್, ಫೇಸ್‌ಬುಕ್‌ಗಳಿಗಿಂತಲೂ ಪತ್ರಿಕೆಯು ಪರಿಣಾಮಕಾರಿಯಾಗಿ ಇಂದಿಗೂ ಮುಂದುವರಿದೆ. ಪ್ರತಿಯೋರ್ವರೂ ಕೂಡಾ ಪತ್ರಿಕೆಗಳನ್ನು ದಿನಾಲೂ ಕೊಂಡು ಓದುವ ಮೂಲಕ ಪ್ರತಿ ದಿನವನ್ನು ಪತ್ರಿಕಾ ದಿನಾಚರಣೆಯನ್ನಾಗಿಸ ಬೇಕು ಎಂದು ಕರೆ ನೀಡಿದರು.
ಸಮಾಜದ ಉನ್ನತಿಗೆ ಪತ್ರಿಕೆಗಳ ಪಾತ್ರ ಬಹು ದೊಡ್ಡದು. ಪತ್ರಕರ್ತರು ತಮ್ಮದೇ ಆದ ಜವಾಬ್ದಾರಿ ಹೊಂದಿದವರಾಗಿದ್ದಾರೆ. ಪತ್ರಿಕೆಗಳನ್ನು ಓದುವುದರಿಂದ ನೆಮ್ಮದಿ, ಸಮಾಧಾನ ದೊರೆಯುತ್ತದೆ. ಆದರೆ ಮೊಬೈಲ್‌ನಲ್ಲಿ ಪತ್ರಿಕೆಗಳನ್ನು ಎಷ್ಟೇ ಓದಿದರೂ ಸಮಾಧಾನ ಅನಿಸುವುದಿಲ್ಲ ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮುರ್ಡೇಶ್ವರ ಯಕ್ಷರಕ್ಷೆಯ ಅಧ್ಯಕ್ಷ ಡಾ. ಐ.ಆರ್. ಭಟ್ಟ, ಕಾರ್ಯನಿರತ ಪತ್ರಕರ್ತರ ಸಂಘ ಸಮಾಜದ ಗಣ್ಯರನ್ನು ಗೌರವಿಸುವುದರ ಮೂಲಕ ಉತ್ತಮ ಕೆಲಸ ಮಾಡುತ್ತಿದೆ. ಶಂಭು ಹೆಗಡೆಯವರ ಬರವಣಿಗೆ ಮತ್ತಷ್ಟು ಹೆಚ್ಚಾಗಬೇಕು ಎಂದು ಆಶಯ ವ್ಯಕ್ತಪಡಿಸಿದರು.
ಅಧ್ಯಕ್ಷತೆ ವಹಿಸಿದ್ದ ಹಿರಿಯ ಪತ್ರಕರ್ತ ಹಾಗೂ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನಿಕಟಪೂರ್ವ ಅಧ್ಯಕ್ಷ ರಾಧಾಕೃಷ್ಣ ಭಟ್ಟ ಮಾತನಾಡಿ ಭಟ್ಕಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಕಳೆದ ಹಲವಾರು ವರ್ಷದಿಂದ ಸಮಾಜದ ಓರ್ವ ಗಣ್ಯ ವ್ಯಕ್ತಿಯನ್ನು ಗೌರವಿಸು ಪರಿಪಾಠ ಹಾಕಿಕೊಂಡು ಬಂದಿದೆ. ಸನ್ಮಾನದಿಂದ ಸನ್ಮಾನಿತರ ಜವಾಬ್ದಾರಿ ಜಾಸ್ತಿಯಾಗುತ್ತದೆ, ಸನ್ಮಾನ ಮಾಡಿದ ಸಂಸ್ಥೆಗೂ ಕೂಡಾ ಗೌರವ ಹೆಚ್ಚುತ್ತದೆ ಎಂದರು.
ಕಸಾಪ ತಾಲೂಕು ಅಧ್ಯಕ್ಷ ಗಂಗಾಧರ ನಾಯ್ಕ ಮಾತನಾಡಿ ಪತ್ರಕರ್ತರು ನಿತ್ಯ ಸಾಹಿತಿಗಳಾಗಿದ್ದಾರೆ. ಪತ್ರಕರ್ತರಿಗೆ ಜವಾಬ್ದಾರಿಯುತ ವರದಿ ಮಾಡುವ ಹೊಣೆಗಾರಿಕೆ ಇದೆ ಎಂದರು.
ಲಯನ್ಸ ಕ್ಲಬ್ ಅಧ್ಯಕ್ಷ ಎಂ.ವಿ.ಹೆಗಡೆ ಮಾತನಾಡಿ ಸಮಾಜದ ಗಣ್ಯರನ್ನು ಗುರುತಿಸಿ ಸನ್ಮಾನಿಸುತ್ತಿರುವುದು ಉತ್ತಮ ಕಾರ್ಯ. ಪತ್ರಕರ್ತರ ಸನ್ಮಾನದಿಂದ ಗೌರವ ಹೆಚ್ಚಾಗಲಿದೆ ಎಂದರು.
ಜಿಲ್ಲಾ ಸಂಘದ ಉಪಾಧ್ಯಕ್ಷ ಭವಾನಿಶಂಕರ ನಾಯ್ಕ ಮಾತನಾಡಿದರು. ಸೀತಾ ಹೆಗಡೆ ಪ್ರಾರ್ಥನೆ ಹಾಡಿದರು. ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಂ.ಆರ್.ಮಾನ್ವಿ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಸಂಘದ ತಾಲೂಕು ಉಪಾಧ್ಯಕ್ಷ ಮೋಹನ ನಾಯ್ಕ ನಿರೂಪಿಸಿ ವಂದಿಸಿದರು. ಕಾರ್ಯಕ್ರಮದಲ್ಲಿ ಪತ್ರಕರ್ತರು, ಪ್ರಮುಖರಾದ ಎಸ್.ಎಸ್. ಕಾಮತ್, ಎಂ. ಪಿ. ಭಂಡಾರಿ, ಹವ್ಯಕ ನೌಕರರ ಸಂಘದ ಅಧ್ಯಕ್ಷ ಎಂ. ವಿ. ಹೆಗಡೆ, ಈಶ್ವರ ದೊಡ್ಮನೆ, ಕೆ.ಬಿ.ಹೆಗಡೆ, ಡಾ. ಹರಿಪ್ರಸಾದ ಕಿಣಿ, ಯೋಗಿಶ ಹೆಗಡೆ, ವನಮಾಲಾ ಹೆಗಡೆ, ವನಿತಾ ಶಂಭು ಹೆಗಡೆ, ಉಷಾ ಭವಾನಿಶಂಕರ್, ಪೂರ್ಣಿಮಾ ನಾಯ್ಕ ಮುಂತಾದವರಿದ್ದರು.

error: