May 4, 2024

Bhavana Tv

Its Your Channel

ಯುವಕರ ಮೇಲೆ ಗುಂಪು ಹಲ್ಲೆ ಪ್ರಕರಣ, ದೂರು ದಾಕಲಿಸಲು ವಿಳಂಬ, ಠಾಣೆಯ ಎದುರು ಪ್ರತಿಭಟನೆ

ಭಟ್ಕಳ: ಕಳೆದ ಮೂರು ದಿನಗಳ ಹಿಂದೆ ಗೋಕಳ್ಳರನ್ನು ಹಿಂಬಾಲಿಸಿಕೊ0ಡು ಹೋದ ತಾಲೂಕಿನ ಮೂವರು ಯುವಕರ ಮೇಲೆ ಗುಂಪು ಹಲ್ಲೆ ನಡೆಸಲಾಗಿದ್ದು ದೂರು ದಾಖಲಿಸಲಾಗಿದ್ದರೂ ಸಹ ಬಂಧನ ಮಾಡುವಲ್ಲಿ ವಿಳಂಬ ಮಾಡಲಾಗುತ್ತಿದೆ ಎಂದು ಆರೋಪಿಸಿ ಹಿಂದೂ ಸಂಘಟನೆಯ ಕಾರ್ಯಕರ್ತರು ಡಿ.ವೈ.ಎಸ್.ಪಿ. ಅವರನ್ನು ಭೇಟಿಯಾಗಿ ಆರೋಪಿತರನ್ನು ಬಂಧಿಸುವAತೆ ನಗರ ಠಾಣೆಯ ಎದುರು ಪ್ರತಿಭಟನೆ ನಡೆಸಿದರು.
ಬಿ.ಜೆ.ಪಿ. ಮುಖಂಡ ಗೋವಿಂದ ನಾಯ್ಕ ಮಾತನಾಡಿ ಗುರುವಾರ ರಾತ್ರಿ ಗೋ ಸಾಗಾಟ ಮಾಡುತ್ತಿರುವ ಪಿಕ್‌ಅಪ್ ವಾಹನ ಬೆನ್ನಟ್ಟಿ ಹೋದ ಯುವಕರಿಗೆ 50-60 ಜನರು ಹಲ್ಲೆ ನಡೆಸಿದ ಬಗ್ಗೆ ದೂರು ದಾಖಲಾಗಿದ್ದರೂ ಕೂಡಾ ಇನ್ನೂ ತನಕ ಆರೋಪಿಗಳನ್ನು ಬಂದಿಸುವಲ್ಲಿ ಇಲಾಖೆ ಮನಸ್ಸು ಮಾಡಿಲ್ಲ. ತಕ್ಷಣ ಅವರನ್ನು ಬಂಧುಸುವದಕ್ಕೆ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಹಲ್ಲೆಗೊಳಗಾದ ಪ್ರವೀಣ ಶೆಟ್ಟಿ ಮಾತನಾಡಿ ಗುರುವಾರ ತಡರಾತ್ರಿ ನಾವು ಕಾರಿನಲ್ಲಿ ಹೋಗುತ್ತಿರುವಾಗ ಮಹೇಂದ್ರ ಪಿಕ್‌ಅಪ್ ವಾಹನದಲ್ಲಿ ಗೋವುಗಳನ್ನು ಸಾಗಾಟ ಮಾಡುತ್ತಿರುವುದನ್ನು ಖಚಿತಪಡಿಸಿಕೊಂಡು ವಾಹನವನ್ನು ಹಿಂಬಾಲಿಸಿಕೊ0ಡು ಹೋಗಿದ್ದೆವು. ಕುಂಟವಾಣಿ ಚೆಕ್ ಪೋಸ್ಟ್ ಬಳಿಯಲ್ಲಿ ಪೊಲಿಸರಿಗೆ ವಿಷಯ ತಿಳಿಸಿದ್ದು, ನಂತರ ನಗರದಲ್ಲಿ ಪುರಸಭೆಯ ಹತ್ತಿರ ಇರುವ ಗಸ್ತು ಪೊಲೀಸರಿಗೂ ಕೂಡಾ ವಿಷಯ ತಿಳಿಸಿದ್ದೆವು. ಆದರೆ ವಾಹನವನ್ನು ಬೆನ್ನಟ್ಟಿ ಹೋದ ನಮಗೆ ಮಾರುಕಟ್ಟೆಯ ಒಳಗೆ ಹೋಗುತ್ತಿದ್ದಂತೆಯೇ 50-60 ಜನರ ಗುಂಪು ಕೈಯಿಂದ, ದೊಣ್ಣೆಯಿಂದ ಹಲ್ಲೆ ನಡೆಸಿತು ಎಂದು ಹೇಳಿದರು.
ಹಿಂದೂ ಸಂಘಟನೆ ಕಾರ್ಯಕರ್ತ ವಿಶ್ವನಾಥ ಮಾತನಾಡಿ ಮೂವರ ಮೇಲೆ ನಡೆದ ಹಲ್ಲೆಯಿಂದ ಗಾಯಗೊಂಡ ಅವರನ್ನು ಪೊಲೀಸರು ಆಸ್ಪತ್ರೆಗೆ ಕರೆದುಕೊಂಡು ಹೋಗಿ ವೈದ್ಯಕೀಯ ಪರೀಕ್ಷೆ ಮಾಡಿಸಿ ಪ್ರಕರಣವನ್ನು ದಾಖಲಿಸಿಕೊಂಡಿದ್ದರೂ ಆರೋಪಿಗಳ ಬಂಧನಕ್ಕೆ ವಿಳಂಬ ಮಾಡುತ್ತಿದ್ದಾರೆ ಎಂದು ದೂರಿದರು.
ಹಿಂದೂ ಸಂಘಟನೆ ಕಾರ್ಯಕರ್ತ ಶ್ರೀನಿವಾಸ ನಾಯ್ಕ ಮಾತನಾಡಿ ಗೋಸಾಗಾಟ ಮಾಡುತ್ತಿರುವ ಪಿಕ್‌ಅಪ್ ವಾಹನವನ್ನು ಹಿಂಬಾಲಿಸಿಕೊAಡು ಬಂದು ನಗರದ ಖಲೀಫಾ ಸ್ಟಿçÃಟ್‌ಗೆ ಹೋದಾಗ ಗುಂಪು ಹಲ್ಲೆ ನಡೆಸಿದೆ. ಹಲ್ಲೆ ನಡೆಸಿದವರು ಯಾರು ಎಂದು ತಿಳಿದೂ ಅವರ ಬಂಧನ ಮಾಡುತ್ತಿಲ್ಲ. ಶೀಘ್ರ ಹಲ್ಲೆ ನಡೆಸಿದ ಆರೋಪಿಗಳನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.
ಇನ್ಸಪೆಕ್ಟರ್ ಗೋಪಿಕೃಷ್ಣ, ಡಿ.ವೈ.ಎಸ್.ಪಿ. ಶ್ರೀಕಾಂತ ನಾಯ್ಕ ಅವರು ತಮ್ಮನ್ನು ಭೇಟಿಯಾದ ತಂಡಕ್ಕೆ ಆರೋಪಿತರನ್ನು ಬಂಧಿಸುವ ಬರವಸೆ ನೀಡಿದ ನಂತರ ಪ್ರತಿಭಟನಾಕಾರರು ವಾಪಾಸಾಗಿದ್ದು ಮೂರು ದಿನಗಳ ಒಳಗಾಗಿ ಆರೋಪಿಗಳ ಬಂಧನವಾಗದೇ ಇದ್ದಲ್ಲಿ ಮತ್ತೆ ಪ್ರತಿಭಟನೆ ಮಾಡುವುದಾಗಿ ತಿಳಿಸಿದ್ದಾರೆ.

error: