
ಭಟ್ಕಳ: ಪಟ್ಟಣದ ಸ್ನೇಹಾ ವಿಶೇಷ ಶಾಲೆಗೆ ಬೇಟಿ ನೀಡಿದ ಭಟ್ಕಳ ಜಿಎಸ್‌ಬಿ ಸಮಾಜದ ಜಿಎಸ್‌ಎಸ್ ತಂಡ ವರ್ಷಂಪ್ರತಿಯ0ತೆ ಈ ವರ್ಷವೂ ಭಟ್ಕಳ ವಿಶೇಷ ಮಕ್ಕಳ ಅಭಿವೃದ್ಧಿಗೆ ದೇಣಿಗೆ ಮೂಲಕ ನೆರವು ನೀಡಿ ವಿದ್ಯಾರ್ಥಿಗಳಿಗೆ ಸಹಿ ಹಂಚಿ ಸಂಭ್ರಮಿಸಿದರು.
ಪಟ್ಟಣದ ಕೋಕ್ತಿಯಲ್ಲಿರುವ ಸ್ನೇಹಾ ವಿಶೇಷ ಶಾಲೆಗೆ ಜಿಎಸ್‌ಎಸ್ ಸದಸ್ಯರು ಗುರುವಾರ ಬೇಟಿ ನೀಡಿದರು. ಅಲ್ಲಿನ ವಿಶೇಷ ಮಕ್ಕಳ ಕುರಿತು ಮಾಹಿತಿ ಪಡೆದರು. ಬಳಿಕ ಜಿಎಸ್‌ಬಿ ಸಮಾಜದ ದಾನಿಗಳು ನೀಡಿದ ಹಣವನ್ನು ಚೆಕ್ ಮೂಲಕ ಸಂದಾಯ ಮಾಡಿ ವಿದ್ಯಾರ್ಥಿಗಳಿಗೆ ಸಿಹಿ ಹಂಚಿದರು. ವಿದ್ಯಾರ್ಥಿಗಳು ತಾವೆ ಪೇಪರಿನಿಂದ ತಯಾರಿಸಿದ ಹೂವನ್ನು ಜಿಎಸ್ ಎಸ್ ಸದಸ್ಯರಿಗೆ ನೀಡಿ ಹರ್ಷ ವ್ಯಕ್ತಪಡಿಸಿದರು. ಈ ಸಂದರ್ಬದಲ್ಲಿ ಜಿಎಸ್‌ಎಸ್ ಅಧ್ಯಕ್ಷ ಕಲ್ಪೇಶ ಪೈ, ಪ್ರಮುಖರಾದ ನರೇಂದ್ರ ನಾಯಕ, ಉದಯ ಪೈ, ಶ್ರೀಧರ ನಾಯಕ, ಅನಿಲ ಪೈ, ದೀಪಕ ನಾಯಕ, ಶ್ರೀನಾಥ ಪೈ ಹಾಗೂ ಸ್ನೇಹಾ ವಿಶೇಷ ಶಾಲೆಯ ಮಾಲತಿ ಉದ್ಯಾವರ ಇದ್ದರು.
More Stories
ಜನವರಿ 7 ಭಟ್ಕಳ ತಾಲೂಕ 11ನೆ ಸಾಹಿತ್ಯ ಸಮ್ಮೇಳ
ಭಟ್ಕಳ ತಾಲೂಕು ಕಸಾಪದಿಂದ ರಸಪ್ರಶ್ನೆ ಸ್ಪರ್ಧೆ – ಬಹುಮಾನ ವಿತರಣೆ.
ಭಟ್ಕಳದ ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲಿ ದೀಪದಾನ ಕಾರ್ಯಕ್ರಮ