
ಭಟ್ಕಳ: “ಭಾರತ ಯುವ ಪ್ರತಿಭೆಗಳು ಅಧಿಕ ಪ್ರಮಾಣದಲ್ಲಿರುವ ಇರುವ ರಾಷ್ಟ್ರವಾಗಿದ್ದು, ಇಲ್ಲಿನ ಯುವ ಸಮುದಾಯದ ಕೌಶಲ್ಯ ಅಭಿವೃದ್ಧಿಯಲ್ಲಿ ರೋಟರಾಕ್ಟ್ ಸಂಘಟನೆಯು ಬಹುಮುಖ್ಯ ಪಾತ್ರ ನಿರ್ವಹಿಸುತ್ತಿದೆ” ಎಂದು ರೋಟರಾಕ್ಟ್ ಜಿಲ್ಲೆ 3170 ಜಿಲ್ಲಾ ಪ್ರತಿನಿಧಿ ಪ್ರಾಂಜಲ್ ಮರಾಠೆ ಹೇಳಿದರು. ತಾಲೂಕಿನ ಶ್ರೀ ಗುರು ಸುಧೀಂದ್ರ ಪದವಿ ಮಹಾವಿದ್ಯಾಲಯದ ಘಟಕವಾದ ಭಟ್ಕಳದ ರೋಟರಾಕ್ಟ್ ಕ್ಲಬ್‌ನ 2023-24 ನೇ ಸಾಲಿನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಹಾಗೂ ರೋಟರಿ ನಾಯಕತ್ವ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು “ಕೇವಲ ಸಾಂಪ್ರದಾಯಿಕ ಶಿಕ್ಷಣದಿಂದ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯಾಗುವುದಿಲ್ಲ, ವಿದ್ಯಾರ್ಥಿಗಳು ಸಾಮಾಜಿಕ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಾಗ ಮಾತ್ರ ಅವರಲ್ಲಿ ದೇಶದ ಬಗ್ಗೆ ಕಾಳಜಿ ಮೂಡುತ್ತದೆ” ಎಂದರು. ಕಾರ್ಯಕ್ರಮದ ಮುಖ್ಯ ಅತಿಥಿ ಡಾ. ಎಂ. ಎ ಭಾವಿಕಟ್ಟಿ ಮಾತನಾಡಿ “ಜಾಗತೀಕರಣದ ಈ ಕಾಲಘಟ್ಟದಲ್ಲಿ ಪ್ರಕೃತಿಯ ಉಳಿವಿಗಾಗಿ ಪ್ರತಿಯೊಬ್ಬ ನಾಗರಿಕನು ಶ್ರಮವಹಿಸುವ ಅಗತ್ಯವಿದೆ” ಎಂದರು. ರೋಟರಿ ನಾಯಕತ್ವ ತರಬೇತಿ ಸಂಸ್ಥೆಯ ಪ್ರಮುಖ ರಾಘವೇಂದ್ರ ಪ್ರಭು, ತರಬೇತುದಾರರಾದ ಗೌರೀಶ್ ಪಡುಕೋಣೆ, ನಾಗರಾಜ್ ಜೋಶಿ, ಬಿನೋಯ್ ಮೊಮಯ, ರೋಟರಿ ಅಧ್ಯಕ್ಷ ಶ್ರೀನಿವಾಸ್ ಪಡಿಯಾರ್, ಕಾರ್ಯದರ್ಶಿ ರಾಜೇಶ್ ನಾಯಕ್, ಮಹಾವಿದ್ಯಾಲಯದ ಪ್ರಾಂಶುಪಾಲ ಶ್ರೀನಾಥ್ ಪೈ, ಕ್ಲಬ್ ಸಂಯೋಜಕ ದೇವೇಂದ್ರ ಕಿಣಿ ಉಪಸ್ಥಿತರಿದ್ದರು. ರೋಟರಾಕ್ಟ್ ಅಧ್ಯಕ್ಷೆ ವೈಷ್ಣವಿ ನಾಯ್ಕ್ ಸ್ವಾಗತಿಸಿದರು, ಸದಸ್ಯರಾದ ಮಿಥಾಲಿ ಪ್ರಭು ಹಾಗೂ ಪ್ರತ್ಯಕ್ಷ ಮಜಲಿಕರ್ ನಿರೂಪಿಸಿದರು ಮತ್ತು ಕಾರ್ಯದರ್ಶಿ ಪ್ರಜ್ಞಾ ಗೋಲಿ ವಂದಿಸಿದರು. ಬಳಿಕ ನೂತನ ಪದಾಧಿಕಾರಿಗಳಿಗೆ ನಾಯಕತ್ವ ತರಬೇತಿ ಕಾರ್ಯಾಗಾರ ಜರುಗಿತು.
More Stories
ಜನವರಿ 7 ಭಟ್ಕಳ ತಾಲೂಕ 11ನೆ ಸಾಹಿತ್ಯ ಸಮ್ಮೇಳ
ಭಟ್ಕಳ ತಾಲೂಕು ಕಸಾಪದಿಂದ ರಸಪ್ರಶ್ನೆ ಸ್ಪರ್ಧೆ – ಬಹುಮಾನ ವಿತರಣೆ.
ಭಟ್ಕಳದ ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲಿ ದೀಪದಾನ ಕಾರ್ಯಕ್ರಮ