
ಭಟ್ಕಳ: ಪಟ್ಟಣದ ಹಲವೆಡೆ ಪುರಸಭೆ ವ್ಯಾಪ್ತಿಯಲ್ಲಿ ಹಾಗೂ ಗ್ರಾಮೀಣ ಭಾಗಗಳಲ್ಲಿ ವಿವಿಧ ರೋಗಗಳ ವ್ಯಾಪಕವಾಗಿ ಹರಡುತ್ತಿದ್ದರೂ ಸಂಬಧಿಸಿದ ಇಲಾಖೆಗಳು ರೋಗ ಶಮನದ ಕುರಿತು ಮುಂಜಾಗ್ರತೆ ಕೈಗೊಳ್ಳದೆ ಇರುವದು ತಾಲೂಕಿನಾದ್ಯಂತ ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿದೆ.
ತಾಲೂಕಿನಲ್ಲಿ ವಾತವರಣದ ಏರುಪೇರಿನಿಂದ ಹಲವು ರೋಗಗಳು ಲಗ್ಗೆ ಇಟ್ಟಿವೆ. ಅದರಲ್ಲೂ ಭಟ್ಕಳದಲ್ಲಿ ಮೊದಲು ಕಂಡು ಬಂದ ಎಚ್೧ಎನ್೧ ರೋಗದಿಂದ ಸಾವು ಸಂಭವಿಸಿದೆ. ಡೆಂಗ್ಯೂ ಪ್ರಕರಣಗಳು ದಿನೆ ದಿನೆ ಏರಿಕೆ ಕಾಣುತ್ತಿದೆ. ಈಗ ಇಲಿಜ್ವರ ಕಾಲಿಟ್ಟಿದೆ. ಮತ್ತೆ ಯಾವ ರೋಗಗಳು ಬರಲಿದೆಯೋ ಎನ್ನುವ ಆತಂಕದಲ್ಲಿ ಭಟ್ಕಳಿಗರನ್ನು ಕಾಡುತ್ತಿದೆ. ಕೆಲವು ರೋಗಿಗಳು ತಪಾಸಣೆ ನಡೆಸಲು ಭಯಬೀಳುತ್ತಿದ್ದಾರೆ. ಆಸ್ಪತ್ರೆಯ ಎದುರಿನಲ್ಲಿ ಸರತಿಯ ಸಾಲು ಕಂಡು ಬರುತ್ತಿದೆ. ಇಷ್ಟೇಲ್ಲಾ ನಡೆದರೂ ಪುರಸಭೆಯಾಗಲಿ, ತಾಲೂಕಾಡಳಿತವಾಗಲಿ ಏಚ್ಚಂತ ಕಾಣುವದಿಲ್ಲ. ಯಾವುದೆ ಮುಂಜಾಗ್ರತೆ ಕ್ರಮ ಕೈಗೊಂಡಿಲ್ಲ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗಳ ಸುರಿಮಳೆಯಾಗುತ್ತಿದೆ.
ಭಟ್ಕಳದಲ್ಲಿ ಡೆಂಗ್ಯೂ ಮತ್ತಷ್ಟು ಏರುವ ಆತಂಕ
ಪಟ್ಟಣದ ಬಹುತೇಕ ಚರಂಡಿಗಳಲ್ಲಿ ಕೊಳಚೆ ನೀರು ನಿಂತಿದೆ. ಕೆಲವು ಚರಂಡಿಗಳತೂ ಕೊಳೆತು ನಾರುತ್ತಿದೆ. ಅಲ್ಲಿ ಸೊಳ್ಳೆ ಮಾತ್ರವಲ್ಲದೆ ವಿವಿಧ ರೋಗಗಳಲು ಉತ್ಪತ್ತಿಯಾಗುವ ಎಲ್ಲಾಸಾದ್ಯತೆಗಳು ಕಂಡು ಬರುತ್ತಿವೆ. ಸಾರ್ವಜನಿಕರು ಕೇಳಿದ ಮಾಹಿತಿಯನ್ನು ಪುರಸಭೆ ನೀಡುತ್ತಿಲ್ಲ ಎನ್ನುವ ಆರೋಪವಿದೆ. .ಭಟ್ಕಳ ದಿಂದ ೫ ಕಿ.ಮಿ. ಅಂತರದಲ್ಲಿ ಇರುವ ಉಡುಪಿ ಜಿಲ್ಲೆಯ ಹಳ್ಳಿ ಹಳ್ಳಿಗಳಲ್ಲೂ ಫಾಗಿಂಗ್ ನಡೆಸಲಾಗಿದೆ. ಸ್ಪೆçಯನ್ನು ಸಿಂಪಡಿಸಲಾಗುತ್ತಿದೆ. ಅಲ್ಲಿ ಅಷ್ಟೇಲ್ಲಾ ಬೆಳವಣಿಗೆ ಆದರೂ ಭಟ್ಕಳದಲ್ಲಿ ಮಾತ್ರ ಯಾವುದು ಕಾಣುತ್ತಿಲ್ಲ ಎನ್ನುವದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ. ಒಂದು ವೇಳೆ ತಾಲೂಕಾಡಳಿತ ತಕ್ಷಣ ಎಚ್ಚೆತ್ತು ಕ್ರಮ ಕೈಗೊಂಡಿಲ್ಲವಾದರೆ ಡೆಂಗ್ಯೂ ನಿವಾರಣ ಅಭಿಯಾನ ನಡೆಸಿ ಸಂಬಧಿಸಿದ ಇಲಾಖೆಗೆ ಛಿಮಾರಿ ಹಾಕಲಾಗುವುದು ಎಂದು ಮಣಿ ಪೂಜಾರಿ ಎನ್ನುವವರು ಜಾಲತಾಣದಲ್ಲಿ ಎಚ್ಚರಿಕೆ ನೀಡಿದ್ದಾರೆ.
ತಾಲೂಕಿನಲ್ಲಿ ಈಗಾಗಲೆ ಒಂದು ಎಚ್೧ಎನ್೧, ೫ ಲೆಪ್ಟೊಸ್ಪಿರೋಸಿಸ್ ಪ್ರಕರಣಗಳು, ೧೧ ಡೆಂಗ್ಯೂ ಪ್ರಕರಣ ಪತ್ತೆಯಾಗಿವೆ. ಇನ್ನೂ ಖಾಸಗಿ ಕ್ಲಿನಿಕ್‌ಗಳಲ್ಲಿ ಚಿಕಿತ್ಸೆ ಪಡೆದಿರುವ ಮಾಹಿತಿ ಸರಿಯಾಗಿ ಆರೋಗ್ಯ ಇಲಾಖೆಗೆ ಹೋಗುತ್ತದೆ ಎನ್ನುವ ಯಾವುದೆ ಭರವಸೆ ಇಲ್ಲ. ಕೂಡಲೆ ಮುಂಜಾಗ್ರತೆ ಕ್ರಮ ಕೈಗೊಳ್ಳಲಲಿ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.



ಈ ಬಗ್ಗೆ ಶ್ರೀನಿವಾಸ ನಾಯ್ಕ ಮಾತನಾಡಿ ಪೋಗಿಂಗ್ ಇಲ್ಲ ಸ್ಪ್ರೇ ಮಾಡೋದಕ್ಕೆ ಆಗತ್ತಾ ಇಲ್ಲವ ಅಂತ ಸ್ಪಷ್ಟನೆ ಕೊಡಲಿ. ಸಮಾಜದಲ್ಲಿ ನಡೆಯುವ ಘಟನೆ ಗ್ರೂಪ್ ಅಲ್ಲಿ ಶೇರ್ ಮಾಡಿದಾಗ ಕೆಲವೋಬ್ಬರಿಗೆ ಹರ್ಟ್ ಆಗತ್ತೆ ಎಲ್ಲ ಅಧಿಕಾರಿಗಳು ಈ ಗ್ರೂಪ್ ಅಲ್ಲಿ ಇದ್ದಾರೆ. ಗಮನಕ್ಕೆ ತಂದರೂ ಕೂಡ ಸ್ಪಂದನೆ ಕೊಡಲ್ಲ ಎಂದರು.
More Stories
ಜನವರಿ 7 ಭಟ್ಕಳ ತಾಲೂಕ 11ನೆ ಸಾಹಿತ್ಯ ಸಮ್ಮೇಳ
ಭಟ್ಕಳ ತಾಲೂಕು ಕಸಾಪದಿಂದ ರಸಪ್ರಶ್ನೆ ಸ್ಪರ್ಧೆ – ಬಹುಮಾನ ವಿತರಣೆ.
ಭಟ್ಕಳದ ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲಿ ದೀಪದಾನ ಕಾರ್ಯಕ್ರಮ