June 26, 2024

Bhavana Tv

Its Your Channel

ಮೀನು ಹಿಡಿಯಲು ಬಲೆ ಬೀಸಲು ಹೋಗಿದ್ದ ಮೀನುಗಾರ ಸಾವು.

ಭಟ್ಕಳ: ಹೊಳೆಗೆ ಬಲೆ ಬೀಸಲು ಹೋಗಿದ್ದ ಮೀನುಗಾರರೋರ್ವರ ಶವವು ಬಲೆಯ ಉರುಳು ಕುತ್ತಿಗೆಗೆ ಬಿಗಿದ ಸ್ಥಿತಿಯಲ್ಲಿ ಇಲ್ಲಿನ ಬೆಳಕೆ ಮೊಗೇರಕೇರಿಯಲ್ಲಿ ಪತ್ತೆಯಾಗಿದೆ. ಮೃತರನ್ನು ಇಲ್ಲಿನ ಬೆಳಕೆ ಕೆಳಗಿನಮನೆ ನಿವಾಸಿ ಮಂಜುನಾಥ ವೆಂಕ್ಷ ಮೊಗೇರ (62) ಎಂದು ಗುರುತಿಸಲಾಗಿದೆ.

ಹೊಳೆಯ ನಡುವೆ ಮೀನಿಗೆ ಬಲೆ ಬೀಸುವಾಗ ಆಯ ತಪ್ಪಿ ಉರುಳು ಕುತ್ತಿಗೆಯನ್ನು ಬಿಗಿದು ಅವಘಡ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ. ಮೃತರು ಪತ್ನಿ, ಓರ್ವ ಪುತ್ರ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

error: