June 26, 2024

Bhavana Tv

Its Your Channel

ಭಟ್ಕಳ ತಾಲೂಕಾ ನಾಮಧಾರಿ ಸಮಾಜದ ಶಿಕ್ಷಣ ಪ್ರೇಮಿಗಳ ಬಳಗದಿಂದ ಸಮುದಾಯದ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ.

ಭಟ್ಕಳ : ಭಟ್ಕಳ ತಾಲೂಕಾ ನಾಮಧಾರಿ ಸಮಾಜದ ಶಿಕ್ಷಣ ಪ್ರೇಮಿಗಳ ಸಮಾನ ಮನಸ್ಕರ ತಂಡವೊAದನ್ನು ಕಟ್ಟಿಕೊಂಡು, ದಾನಿಗಳಿಂದ ದೇಣಿಗೆ ಸಂಗ್ರಹಿಸಿ ಕಳೆದ ಮೂರು ವರ್ಷಗಳಿಂದ ಸಮುದಾಯದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾಪುರಸ್ಕಾರದ ಜೊತೆಯಲ್ಲಿ ಆರ್ಥಿಕ ತೊಂದರೆಯಲ್ಲಿರುವ ವಿದ್ಯಾರ್ಥಿಗಳನ್ನು ಗುರುತಿಸಿ ಅವರ ವಿದ್ಯಾಭ್ಯಾಸಕ್ಕೂ ಕೂಡ ಸಹಕಾರ ನೀಡುತ್ತ ಬಂದಿರುವ ಶಿಕ್ಷಣ ಪ್ರೇಮಿಗಳು, ಭಟ್ಕಳ ತಾಲೂಕ ನಾಮಧಾರಿ ಸಮಾಜ ಇವರಿಂದ ಈ ವರ್ಷ ಕೂಡ ಎಸ್.ಎಸ್.ಎಲ್.ಸಿ. ಮತ್ತು ಪಿಯುಸಿಯಲ್ಲಿ 90% ಕ್ಕು ಅಧಿಕ ಅಂಕ ಗಳಿಸಿದ ಭಟ್ಕಳ ತಾಲೂಕು ವ್ಯಾಪ್ತಿಯ ನಾಮಧಾರಿ ಸಮುದಾಯದ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿಯನ್ನು ಸಲ್ಲಿಸುವವರು ಎಸ್ ಎಸ್ ಎಲ್ ಸಿ, ದ್ವಿತೀಯ ಪಿಯುಸಿ ಅಂಕ ಪಟ್ಟಿ, ಮತ್ತು ಮೊಬೈಲ್ ಸಂಖ್ಯೆ, ಪಾಸಪೋರ್ಟ ಸೈಜ್ ಫೋಟೊ ಗಳೊಂದಿಗೆ ದಿನಾಂಕ 05/06/2024 ಬುಧವಾರದ ಒಳಗಾಗಿ ಪಾಂಡುರAಗ ನಾಯ್ಕ, ಐ ಝೊನ್, ಮೈಸೂರು ಕೆಫೆ ಬಿಲ್ಡಿಂಗ್, ಬಂದರ ರಸ್ತೆ, ಭಟ್ಕಳ ಈ ವಿಳಾಸಕ್ಕೆ ತಲುಪಿಸತಕ್ಕದ್ದು… ಖುದ್ದು ತಲುಪಿಸಲು ಸಾಧ್ಯವಾಗದೇ ಇದ್ದ ಪಕ್ಷದಲ್ಲಿ 7338383822 (7338383822) ನಂಬರಿಗೆ ವಾಟ್ಸಾಪ್ ಮೂಲಕವೂ ಸಲ್ಲಿಸಬಹುದಾಗಿದೆ.

ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು ಜೂನ್ 9 ರವಿವಾರದಂದು ನಿಚ್ಚಲಮಕ್ಕಿ ತಿರುಮಲ ವೆಂಕಟರಮಣ ದೇವಸ್ಥಾನದ ಸಭಾಭವನದಲ್ಲಿ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.

error: