September 26, 2024

Bhavana Tv

Its Your Channel

ಭಟ್ಕಳ ತಾಲೂಕಾ ಆಸ್ಪತ್ತೆಯಲ್ಲಿ ಶನಿವಾರದದಂದು ನಡೆದ ಬ್ರಹತ್ ರಕ್ತದಾನ ಶಿಬಿರ

ಭಟ್ಕಳ : ರಕ್ತವನ್ನು ಸ್ವತಃ ತಯಾರಿಸಲು ಸಾಧ್ಯವಿಲ್ಲ. ಮನುಷ್ಯರಿಂದ ಮನುಷ್ಯರಿಗೆ ಕೊಡುವ ಕಾರಣಕ್ಕೆ ರಕ್ತದಾನ ಅತ್ಯಂತ ಮಹತ್ವ ಪಡೆಯುತ್ತದೆ ಎಂದು ಭಟ್ಕಳ ತಾಲೂಕಾ ವೈಧ್ಯಾಧಿಕಾರಿ ಡಾ. ಸವಿತಾ ಕಾಮತ್ ಹೇಳಿದರು

ಅವರು ಭಟ್ಕಳ ತಾಲೂಕಾ ಆಸ್ಪತ್ರೆ , ಭಟ್ಕಳ ತಾಲೂಕಾ ವೈಧಾಧಿಕಾರಿಗಳ ಕಛೇರಿ, ರಕ್ತನಿಧಿ ಕೇಂದ್ರ ಜಿಲ್ಲಾಸ್ಪತ್ರೆ ಉಡುಪಿ ಇವರ ಸಂಯುಕ್ತಾಶ್ರಯದಲ್ಲಿ ಭಟ್ಕಳ ತಾಲೂಕಾ ಆಸ್ಪತ್ತೆಯಲ್ಲಿ ಶನಿವಾರದದಂದು ನಡೆದ ಬ್ರಹತ್ ರಕ್ತದಾನ ಶಿಬಿರದಲ್ಲಿ ಮಾತನಾಡಿದರು

ತಾಲೂಕಾ ಸರ್ಕಾರಿ ಆಸ್ಪತ್ರೆಯಲ್ಲಿ ದಿನನಿತ್ಯವು ರಕ್ತದ ಅವಶ್ಯಕತೆ ಇರುತ್ತದೆ. ಈ ಹಿಂದೆ ಆಸ್ಪತ್ರೆಯಲ್ಲಿ ಬ್ಲಡ್ ಸ್ಟೋರೇಜ್ ಇತ್ತು ತಿಂಗಳಿಗೆ ಒಮ್ಮೆಯಾದರೂ ರಕ್ತದಾನ ಶಿಬಿರವನ್ನು ಏರ್ಪಡಿಸುತ್ತಿದ್ದೇವು. ಆದರೆ ಈಗ ರಕ್ತಕ್ಕಾಗಿ ಕುಂದಾಪುರ,ಉಡುಪಿ ಜಿಲ್ಲಾಸ್ಪತ್ರೆಯನ್ನು ಅವಲಂಭಿಸಿದ್ದೇವೆ. ಪ್ರತಿ ದಿನವು ನಾವು ಜಿಲ್ಲಾಸ್ಪತ್ರೆ ರಕ್ತನಿಧಿಯಿಂದ ರಕ್ತವನ್ನು ಪಡೆಯುತ್ತಿದ್ದು. ಇಷ್ಟೊಂದು ಪ್ರಮಾಣದಲ್ಲಿ ನಾವು ಅವರಿಂದ ರಕ್ತ ಪಡೆದುಕೊಳ್ಳುತ್ತಿರುವುದರಿಂದ ನಾವು ಅವರಿಗೆ ರಕ್ತದಾನ ಶಿಬಿರದ ಮೂಲಕ ನಮ್ಮ ಕಡೆಯಿಂದ ರಕ್ತ ನೀಡುವ ಸಲುವಾಗಿ ಇಂದು ರಕ್ತದಾನ ಶಿಬಿರವನ್ನು ಹಮ್ಮಿಕೊಂಡಿದ್ದೇವೆ. ಮುಂದಿನ ದಿನಗಳಲ್ಲಿ ಖಾಸಗಿ ಆಸ್ಪತ್ರೆ ಹಾಗೂ ಸಂಘಸAಸ್ಥೆಗಳ ಸಹಯೋಗದೊಂದಿಗೆ ಪ್ರತಿ ಎರಡು ತಿಂಗಳಿಗೆ ಒಮ್ಮೆಯಾದರು ರಕ್ತದಾನ ಶಿಬಿರವನ್ನು ಏರ್ಪಡಿಸುವ ಇಚ್ಛೆಯನ್ನು ಹೊಂದಿದ್ದೇವೆ. ಯಾಕೆಂದರೆ ರಕ್ತವನ್ನು ಸ್ವತಃ ತಯಾರಿಸಲು ಸಾಧ್ಯವಿಲ್ಲ. ಮನುಷ್ಯರಿಂದ ಮನುಷ್ಯರಿಗೆ ಕೊಡುವ ಕಾರಣಕ್ಕೆ ರಕ್ತದಾನ ಅತ್ಯಂತ ಮಹತ್ವ ಪಡೆಯುತ್ತದೆ ಎಂದರು.

ಜಿಲ್ಲಾ ಆಸ್ಪತ್ರೆ ಉಡುಪಿಯ ರಕ್ತನಿಧಿಕೇಂದ್ರದ ಆಡಳಿತಾಧಿಕಾರಿ ಡಾ. ವೀಣಾ ಮಾತನಾಡಿ. ಭಟ್ಕಳ ತಾಲೂಕಾ ಆಸ್ಪತ್ರೆಗೆ ಅಗತ್ಯವಿರುವ ರಕ್ತವನ್ನು ದೂರದ ಕಾರವಾರ ಅಥವಾ ಉಡುಪಿ ಜಿಲ್ಲೆಯನ್ನು ಅವಲಂಭಿಸಿದ್ದು, ಈ ಹಿಂದೆ ಭಟ್ಕಳದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಬ್ಲಡ್ ಸಬ್ ಸ್ಟೋರ್ ನ್ನು ಅಗತ್ಯವಿರುವ ತಾಂತ್ರಿಕ ವರ್ಗವನ್ನು ಪೂರೈಸಿ ಪುನಶ್ಚೇತನಗೊಳಿಸಬೇಕಾಗಿದೆ ಎಂದರು.

ಒಟ್ಟಿನಲ್ಲಿ ಇಂತಹ ರಕ್ತದಾನ ಶಿಬಿರಗಳು ಏರ್ಪಟ್ಟಾಗ ಸಾರ್ವಜನಿಕರು ರಕ್ತದಾನದ ಕುರಿತಾದ ಪೂರ್ವಾಗ್ರಹ ಪೀಡಿತ ತಪ್ಪುಕಲ್ಪನೆಗಳಿಂದ ಹೊರಬಂದು ರಕ್ತದಾನ ಮಾಡಲು ಮುಂದಾದರೆ ಈ ರಕ್ತವು ಅಗತ್ಯವಿರುವ ರೋಗಿಗಳ ಜೀವ ಉಳಿಸಲು ಉಪಯೋಗವಾಗಿ ಅದರ ಸಂಪೂರ್ಣ ಪ್ರತಿಫಲ ರಕ್ತದಾನ ಮಾಡಿದ ದಾನಿಗೆ ಪ್ರಾಪ್ತವಾಗುತ್ತದೆ ಎಂದರು. ಈ ವೇಳೆ ಒಟ್ಟು 36 ಶಿಬಿರಾರ್ಥಿಗಳಿಂದ ರಕ್ತದಾನ ಮಾಡಿದರು

error: