December 19, 2024

Bhavana Tv

Its Your Channel

ಗೋಕರ್ಣಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಪೂಜ್ಯ ವೀರೇಂದ್ರ ಹೆಗಡೆಯವರು ಭೇಟಿ

ಕುಮಟಾ ತಾಲೂಕಿನ ಗೋಕರ್ಣಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಪೂಜ್ಯ ವೀರೇಂದ್ರ ಹೆಗಡೆಯವರು ಭೇಟಿ ನೀಡಿ ಶ್ರೀ ಮಹಾಬಲೇಶ್ವರನ ದರ್ಶನ ಪಡೆದರು.

ಗೋಕರ್ಣದಲ್ಲಿ ಶ್ರೀ ರಾಮಚಂದ್ರಾಪುರ ಮಠದ ಗುರುಗಳಾದ ಶ್ರೀ ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿಗಳೊಂದಿಗೆ ಸಂವಾದ ನಡೆಸಿ, ಗುರುಕುಲ ವೀಕ್ಷಣೆ ಮಾಡಿದರು. ಬಳಿಕ ಗೋಕರ್ಣದ ಮಹಾಬಲೇಶ್ವರ ದೇವರ ದರ್ಶನವನ್ನು ಪಡೆದು ಭಕ್ತರಿಗೆ ಆಶೀರ್ವದಿಸಿದರು.

ಈ ಸಮಯದಲ್ಲಿ ಪೂಜ್ಯ ಹೆಗ್ಗಡೆಯವರು ಗೌರವ ಸ್ವೀಕರಿಸಿ ಮಾತನಾಡಿ “ಬಹಳ ಜನ ಭಕ್ತರು ಧರ್ಮಸ್ಥಳಕೆ ಬಂದು, ನಮ್ಮ ಕುಟುಂಬದಲ್ಲಿ ಗತಿಸಿದವರಿಗೆ ಮೋಕ್ಷ ಸಿಗಲಿಲ್ಲ. ವಾಗ್ದೋಷ ಉಂಟAತೆ, ಪರಿಹಾರ ತಿಳಿಸಿ ಎನ್ನುತ್ತಾರೆ. ಬಳಿಕ ನಾವು ವಾಗ್ದೋಷ ಪರಿಹಾರ ಮಾಡಿ, ಸದ್ಗತಿಗೆ ಈ ಗೋಕರ್ಣ ಕ್ಷೇತ್ರಕೆ ಕಳುಹಿಸ್ತೇವೆ.ಈ ಭಾಗಕ್ಕೆ ಬಂದಾಗಲೆಲ್ಲ ಈ ತೀರ್ಥ ಕ್ಷೇತ್ರಕ್ಕೆ ಬರುವ ಮನಸ್ಸಾಗುತಿತ್ತು. ಆದರೆ ಸಮಯದ ಅಭಾವದಿಂದ ಸಾಧ್ಯವಾಗಿರಲಿಲ್ಲ. ಆ ಸಮಯ ಇಂದು ಒದಗಿದೆ” ಎಂದರು.

ಈ ಸಂದರ್ಭದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಮಹೇಶ್ ಎಮ್.ಡಿ, ಕುಮಟಾ ಯೋಜನಾಧಿಕಾರಿ ನಾಗರಾಜ ನಾಯ್ಕ, ಹಾಗೂ ಸ್ಥಳೀಯ ಜನಪ್ರತಿನಿದಿನಗಳು, ಒಕ್ಕೂಟದ ಪದಾಧಿಕಾರಿಗಳು, ಅರ್ಚಕರು, ಟ್ರಸ್ಟಿಗಳು, ಸಂಘದ ಸದಸ್ಯರು ಉಪಸ್ಥಿತರಿದ್ದರು.

ವರದಿ: ನರಸಿಂಹ ನಾಯ್ಕ್ ಹರಡಸೆ

error: