April 5, 2025

Bhavana Tv

Its Your Channel

ಮಂಕಿ ಬ್ಲಾಕ್ ಸಹಾಯ ಹಸ್ತ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಿ.ಕೆ ಹರಿಪ್ರಸಾದ

ಹೊನ್ನಾವರ: ಕರೋನಾ ಮಹಾಮಾರಿಯ ಲಾಕಡೌನ ಸಂದರ್ಭದಲ್ಲಿ ಬಿಜೆಪಿ ಸರ್ಕಾರವು ಜನರ ಸಂಕಷ್ಟಗಳಿಗೆ ಸರಿಯಾಗಿ ಸ್ಪಂದಿಸದೆ ಹುಚ್ಚರಂತೆ ವರ್ತಿಸಿದೆ. ದೇಶದ ಇತಿಹಾಸದಲ್ಲಿ ಇಂತಹ ಸುಳ್ಳುಹೇಳುವ ಪ್ರಧಾನಿಯನ್ನು ನಾವು ಎಂದು ನೋಡಿಲ್ಲ ಎಂದು ವಿಧಾನ ಪರಿಷತ್ ಸದಸ್ಯ, ಕೆಪಿಸಿಸಿ ಸಹಾಯ ಹಸ್ತ ಕಾರ್ಯಕ್ರಮದ ಉಸ್ತುವಾರಿಗಳಾದ ಬಿ.ಕೆ ಹರಿಪ್ರಸಾದರವರು ವ್ಯಂಗ್ಯ ವಾಡಿದರು. ಅವರು ರವಿವಾರ ಸಂಜೆ ಮಂಕಿ ಕೊಕ್ಕೆಶ್ವರ ಸಭಾಭವನದಲ್ಲಿ ನಡೆದ ಮಂಕಿ ಬ್ಲಾಕ್ ಸಹಾಯ ಹಸ್ತ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಪ್ರಧಾನಿಯಾದವರು ಸದಾ ಜನರೊಂದಿಗೆ ಇರಬೇಕು. ಆದರೆ ಮೊದಿಯವರು ಮಾರ್ಚನಿಂದ ನವೆಂಬರ್ ವರೆಗೆ ಎಲ್ಲು ಹೊರಗೆ ಬಂದಿಲ್ಲ. ಕೇವಲ ಟಿವಿ ಹಾಗೂ ರೇಡಿಯೋದಲ್ಲಿ ಮಾತ್ರ ಕಾಣಿಸಿಕೊಂಡರು. ಕರೊನಾ ಮಾಹಾಮಾರಿ ಬರಲಿದೆ ಎಂಬ ತಜ್ನರ ಸೂಚನೆಗಳಿದ್ದರು ಅದನ್ನು ನಿರ್ಲಕ್ಷಿಸಿ ಚುನಾವಣೆಗಳನ್ನು ನಡೆಸಿದರು. ಅಮೇರಿಕಾ ಅಧ್ಯಕ್ಷರಿಗೆ ಅದ್ಬುತ ಸ್ವಾಗತ ಕೋರಿದರು. ರಾಹುಲ್ ಗಾಂಧಿಯವರು ಸಾಕಷ್ಟು ಮುನ್ಸೂಚನೆ ನೀಡಿದರು ಅವರನ್ನು ಲೇವಡಿ ಮಾಡಿದರು. ರೈತರು ತಮ್ಮ ಬೇಡಿಕೆಗಳಿಗಾಗಿ ಹೋರಾಟ ನಡೆಸುತ್ತಿದ್ದಾರೆ. ಹಲವರು ಜೀವ ಕಳೆದುಕೊಂಡಿದ್ದಾರೆ. ರೈತರ ಬಳಿಹೋಗಲು, ಸಾಂತ್ವನ ಹೇಳಲು ಅವರಿಗೆ ಸಮಯವಿಲ್ಲ. ಆದರೆ ಉದ್ಯಮಿ ಅಂಬಾನಿ ಮೊಮ್ಮಗನಿಗೆ ನೋಡಲು ಹೋಗುತ್ತಾರೆ ಎಂದು ಟೀಕಿಸಿದರು. ಕಾಂಗ್ರೆಸ್ ಪಕ್ಷ ಕರೋನಾ ಸಂಕಷ್ಟದಲ್ಲಿವರಿಗೆ ಸ್ಪಂದಿಸಲು ಸಹಾಯ ಹಸ್ತ ಕಾರ್ಯಕ್ರಮ ದೇಶದಾದ್ಯಂತ ಹಮ್ಮಿಕೊಂಡಿದೆ. ಕಾರ್ಯಕರ್ತರು ಕರೋನಾ ಸಂಕಷ್ಟಕ್ಕೊಳಗಾದವರ ಮನೆಮನೆಗೆ ತೆರಳಿ ಅವರ ಮಾಹಿತಿ ಸಂಗ್ರಹಿಸಬೇಕೆAದರು.
ಭಟ್ಕಳ ಮಾಜಿ ಶಾಸಕ ಮಂಕಾಳ ವೈದ್ಯರವರು ಮಾತನಾಡಿ ಬಿಜೆಪಿಯವರಿಗೆ ಸುಳ್ಳು ಹೇಳುವುದನ್ನು ಬಿಟ್ಟು ಮತ್ತೇನು ಗೊತ್ತಿಲ್ಲ. ಕರೋನಾ ದಿಂದ ಮೃತರಾದವರಿಗೆ ಪರಿಹಾರ ಘೋಷಿಸಿದ್ದಾರೆ. ಆದರೆ ಜನಸಾಮಾನ್ಯರ ಸಿಗುವುದು ಅಷ್ಟು ಸುಲಭದಲ್ಲಿಲ್ಲ. ತುಂಬಾ ತೊಂದರೆಗಳಿವೆ. ಒಂದೆಡೆಗೆ ಮನೆಯವರನ್ನು ಕಳೆದುಕೊಂಡ ದು:ಖ, ಇನ್ನೊಂದೆಡೆ ಸರ್ಕಾರದಿಂದ ಪರಿಹಾರ ದೊರೆತಿಲ್ಲ. ಜೀವನೋಪಾಯಕ್ಕಾಗಿ ಉದ್ಯೋಗವು ಇಲ್ಲ. ಜನರು ತುಂಬಾ ಸಂಕಷ್ಟದಲ್ಲಿದ್ದಾರೆ. ಆದ್ದರಿಂದ ನಮ್ಮ ಪಕ್ಷವು ಅವರ ಸಂಕಷ್ಟಗಳಿಗೆ ಸ್ಪಂದಿಸಲುಈ ಕಾರ್ಯಕ್ರಮ ಹಮ್ಮಿಕೊಂಡಿದ್ದು ಕಾರ್ಯಕರ್ತರು ಪ್ರಾಮಾಣಿಕವಾಗಿ ಈ ಅಭಿಯಾನದಲ್ಲಿ ಪಾಯಲ್ಗೊಂಡ ಬೇಕೆಂದರು. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಭೀಮಣ್ಣ ನಾಯ್ಕರವರು ಮಾತನಾಡಿ ಕರೋನಾ ಮಹಾಮಾರಿಯ ಸಂದರ್ಭದಲ್ಲಿ ನಮ್ಮ ನಾಯಕರು ಸೇರಿದಂತೆ ಕಾರ್ಯಕರ್ತರು ಜನರ ಸಂಕಷ್ಟಗಳಿಗೆ ವೈಯಕ್ತಿಕವಾಗಿ ಸ್ಪಂದಿಸಿದ್ದಾರೆ. ಅಂಬುಲೆನ್ಸ್ ,ಔಷಧ, ಆಹಾರ ಸಾಮಾಗ್ರಿಗಳನ್ನು ಅಲ್ಲದೇ ಆರೋಗ್ಯ ಕೀಟಗಳನ್ನು ವಿವರಿಸಿದ್ದಾರೆ ಎಂದರು.

ವೇದಿಕೆಯಲ್ಲಿ ಸಹಾಯ ಕಾರ್ಯಕ್ರಮದ ಉಸ್ತುವಾರಿ ಎ ಭಾವಾ, ಕೆಪಿಸಿಸಿ ಕಾರ್ಯದರ್ಶಿ ಆರಾಧ್ಯ, ಮುಖಂಡರಾದ ಜೆ.ಡಿ ನಾಯ್ಕ, ಆರ್ ಎನ್ ನಾಯ್ಕ, ಗೀರೀಶ ನಾಯ್ಕ, ಬಸವರಾಜ ದೊಡ್ಮನಿ, ಸಂತೋಷ ನಾಯ್ಕ ಭಟ್ಕಳ ಉಪಸ್ಥಿತರಿದ್ದರು. ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಎಂ ಎನ್ ಸುಬ್ರಹ್ಮಣ್ಯ, ಕ್ರಷ್ಣ ಗೌಡ, ಶ್ರೀಮತಿ ವನಿತಾ ಅಣ್ಣಪ್ಪ ನಾಯ್ಕ,, ಗಜು ನಾಯ್ಕ, ರಾಜು ನಾಯ್ಕ, ಗೋವಿಂದ ನಾಯ್ಕ,ಅಣ್ಣಪ್ಪ ನಾಯ್ಕ, ಉಲ್ಲಾಸ ನಾಯ್ಕ ತಾಳಮಕ್ಕಿ, ವಾಮನ ನಾಯ್ಕ, ಗಣಪಯ್ಯ ಗೌಡ, ಉಷಾ ನಾಯ್ಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಮoಕಿ ಬ್ಲಾಕ್ ಅಧ್ಯಕ್ಷ ಗೋವಿಂದ ನಾಯ್ಕ ಪ್ರಸ್ತಾವಿಕವಾಗಿ ,ಮಾತನಾಡಿದರು. ಗೀರೀಶ ನಾಯ್ಕ ವಂದಿಸಿದರು. ಅಣ್ಣಪ್ಪ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು. ಸಾರಸ್ವತಕೇರಿ,ಕುಂಬಾರಕೇರಿ ಸುಮುತ್ತಲಿನ ಭಾಗಗಳಿಗೆ ತೆರಳಿ ಮಾಹಿತಿ ಸಂಗ್ರಹಿಸಿದರು.

error: