April 5, 2025

Bhavana Tv

Its Your Channel

ಹೊನ್ನಾವರ ಲಯನ್ಸ್ ಕ್ಲಬ್ ನೂತನ ಪದಾಧಿಕಾರಿಗಳ ಪದಗ್ರಹಣ

ಹೊನ್ನಾವರ: ಅಂತರಾಷ್ಟಿçÃಯ ಲಯನ್ ಸೇವಾ ಸಂಸ್ಥೆಯ ಒಂದು ಜಾತ್ಯಾತೀತ ಸೇವಾ ಸಂಸ್ಥೆಯಾಗಿದ್ದು, ವಿಶ್ವದೆಲ್ಲೆಡೆ ತನ್ನ ಸೇವಾ ಚಟುವಟಿಕೆಗಳ ಮೂಲಕ ಗಮನ ಸೆಳೆದಿದ್ದು, ೪೫ ವರ್ಷಗಳ ಇತಿಹಾಸ ಹೊಂದಿರುವ ಹೊನ್ನಾವರ ಲಯನ್ಸ್ ಕ್ಲಬ್ ಕೂಡಾ ತನ್ನ ಸೇವಾ ಚಟುವಟಿಕೆಗಳ ಮೂಲಕ ಮುಂಚುಣಿಯಲ್ಲಿದೆ. ಕಳೆದ ವರ್ಷ ಕೋಡಿವಡ್ -೧೯ ಸಂದಿಗ್ಧ ಸಂದರ್ಭದಲ್ಲಿಯೂ ಹಲವಾರು ಸೇವಾ ಚಟುವಟಿಕೆಗಳನ್ನು ಹಮ್ಮಿಕೊಂಡಿದೆ ಎಂದು ಎಂ.ಜೆ.ಎಫ್. ಲಾಯನ ಡಾ|| ಸುರೇಶ ಎಸ್ ನುಡಿದರು.

ಹೊನ್ನಾವರ ಲಯನ್ ವಿದ್ಯಾಭವನದಲ್ಲಿ ನಡೆದ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ, ನೂತನ ಅಧ್ಯಕ್ಷರಾಗಿ ವಿನೋದ ನಾಯ್ಕ ಮಾವಿನಹೊಳೆ ಹಾಗೂ ಕಾರ್ಯದರ್ಶಿಯಾಗಿ ಉದಯ ನಾಯ್ಕ.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಹೊನ್ನಾವರ ಶ್ರೀದೇವಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಮೆನೆಜಿಂಗ್ ಡೈರೆಕ್ಟರ ಆದ ಲಾಯನ್ ಡಾ|| ವಿ. ಚಂದ್ರಶೇಖರ ಶೆಟ್ಟಿಯವರು ಮಾತನಾಡಿ, ಕಳೆದ ವರ್ಷದ ಅಧ್ಯಕ್ಷರಾದ ಲಾಯನ್ ಪ್ರದೀಪ ಶೆಟ್ಟಿಯವರ ತಂಡವು ಹಲವಾರು ಸೇವಾ ಚಟುಟಿಕೆಗಳ ಮೂಲಕ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ತಲುಪಲು ಪ್ರಯತ್ನಿಸಿದ ಶ್ರೇಯಸ್ಸು ಅವರದ್ದಾಗಿದೆ. ನೂತನ ಅಧ್ಯಕ್ಷರಾದ ವಿನೋದ ನಾಯ್ಕ ರವರ ನೇತೃತ್ವದ ತಂಡವು ಕೂಡಾ ಇನ್ನಷ್ಟು ಕ್ರೀಯಾಶೀಲತೆಯಿಂದ ಕಾರ್ಯ ನಿರ್ವಹಿಸುವಂತಾಗಲಿ ಎಂದು ನೂತನ ಪದಾಧಿಕಾರಿಗಳಿಗೆ ಶುಭ ಕೋರಿದರು.

ಕುಮಾರಿ ಸಂಜನಾ ಪ್ರಾರ್ಥಿಸಿದರು. ಲಾಯನ್ ಎನ್.ಜಿ.ಭಟ್ಟ ಧ್ವಜ ವಂದನೆ ಮಾಡಿದರು. ನಿಕಟ ಅಧ್ಯಕ್ಷರಾದ ಲಾಯನ್ ಪ್ರದೀಪ ಶೆಟ್ಟಿ ಸ್ವಾಗತಿಸಿದರು. ಕಾರ್ಯದರ್ಶಿ ಎಂ.ಜಿ.ನಾಯ್ಕ ವರದಿ ವಾಚನ ಮಾಡಿದರು. ಎಮ್‌ಎಸ್‌ಎಫ್ ಲಾಯನ್ ಎ.ವಿ.ಶ್ಯಾನಭಾಗ್, ಎಮ್. ಎಸ್. ಎಫ್ ಲಾಯನ್ ರಾಜೇಶ ಸಾಳೇಹಿತ್ತಲ್, ಲಾಯನ ಉದಯ ನಾಯ್ಕ ಅತಿಥಿಗಳನ್ನು ಪರಿಚಯಸಿದರು.

ಈ ಸಂದರ್ಭದಲ್ಲಿ ಹಿಂದಿನ ಅಧ್ಯಕ್ಷರಾದ ಲಾ. ಪ್ರದೀಪ ಶೆಟ್ಟಿ ಕಾರ್ಯದರ್ಶಿ ಎಂ.ಜಿ.ನಾಯ್ಕ ಹಾಗೂ ಖಜಾಂಚಿ ಲಾಯನ್ಸ.ಎಸ್.ಟಿ. ನಾಯ್ಕ ರವರನ್ನು ಸನ್ಮಾನಿಸಲಾಯಿತು. 

ಅಧ್ಯಕ್ಷರಾದ ಲಾ. ಪ್ರದೀಪ ಶೆಟ್ಟಿಯವರು ತಮ್ಮ ಅವಧಿಯಲ್ಲಿ ಸಹಕರಿಸಿದ ಸರ್ವರನ್ನು ಸ್ಮರಿಸಿ ಮಾತನಾಡಿದರೆ, ನೂತನ ಅಧ್ಯಕ್ಷರಾದ ಲಾ.ವಿನೋದ ನಾಯ್ಕರವರು ಮುಂದಿನ ದಿನಗಳಲ್ಲಿ ಸರ್ವರ ಸಹಕಾರಗಳನ್ನಾಗಿ ವಿನಂತಿಸಿಕೊAಡರು.

ಲಾಯನ ಶಾಂತರಾಮ ನಾಯ್ಕ ಮತ್ತು ಲಾ. ಜಿ. ಟಿ. ಹೆಗಡೆ ಕಾರ್ಯಕ್ರಮ ನಿರೂಪಿಸಿದರು.  ನೂತನ ಖಜಾಂಚಿ ಎಮ್. ಎಸ್. ಎಫ್ ಲಾಯನ್ ಎಸ್. ಜೆ. ಕೈರನ್ನ ವಂದಿಸಿದರು. 
error: