April 6, 2025

Bhavana Tv

Its Your Channel

ಕರ್ಕಿ ಹೊರೆಸಾಲದಲ್ಲಿ ಗುಡ್ಡ ಕುಸಿತ : ಹತ್ತಿರದ ನಿವಾಸಿಗಳಿಗೆ ಆತಂಕ.

ಹೊನ್ನಾವರ : ತಾಲೂಕಿನ ಕರ್ಕಿ ಗ್ರಾಮ ಪಂಚಾಯತ ವ್ಯಾಪ್ತಿಯ ಹೊರೆಸಾಲದಲ್ಲಿ ರಸ್ತೆಯ ಮೇಲೆ ಗುಡ್ಡ ಕುಸಿತವಾಗಿ ಅಲ್ಲಿ ವಾಸಿಸುರತ್ತಿರುವ ಮನೆಯವರಿಗೆ ಮತ್ತು ರಸ್ತೆಯ ಮೇಲೆ ಓಡಾಡುವವರಿಗೆ ಆತಂಕ ನಿರ್ಮಾಣವಾಗಿದೆ. ಮಳೆಯೂ ಜೋರಾಗಿ ಬೀಳುತ್ತಿರುವುದರಿಂದ ಎಷ್ಟು ಹೊತ್ತಿಗೂ ಅಪಾಯ ತಂದೊಡ್ದುವ ಎಲ್ಲಾ ಸಾಧ್ಯತೆಗಳು ಇದೆ.

ಹೊರೆಸಾಲ ರಸ್ತೆಯ ಮೇಲೆ ಪ್ರತಿದಿನ ಸಾವಿರಾರು ಜನ ಓಡಾಡುತ್ತಿರುತ್ತಾರೆ. ಜಾನುವಾರು ಕೂಡ ಪ್ರತಿದಿನ ಅದೇ ರಸ್ತೆಯಲ್ಲೇ ಓಡಾಡುತ್ತದೆ. ಸುಮಾರು ಅರ್ಧ ಕಿ. ಮೀ. ಅಷ್ಟು ಗುಡ್ಡ ಕಟಾವು ಮಾಡಿ ರಸ್ತೆ ನಿರ್ಮಿಸಿರುವುದರಿಂದ ತಿರುಗಾಡಲೇ ಭಯ ಪಡುವಂತಾಗಿದೆ.

ಗುಡ್ಡದ ಅಂಚಿನಲ್ಲಿ ೫ ರಿಂದ ೬ ಪಡ್ತಿ ಸಮಾಜದ ಮನೆಗಳು ಇದ್ದು ಪ್ರತಿ ದಿನ ರಾತ್ರಿ ಹಗಲು ಭಯದಲ್ಲೇ ದಿನ ಕಳೆಯುವಂತಾಗಿದೆ. ಮಂಗಳವಾರ ರಮೇಶ ಪಡ್ತಿ ಯವರ ಮನೆಯ ಹತ್ತಿರ ಗುಡ್ಡ ಕುಸಿದು ಬಿದ್ದು ಸ್ವಲ್ಪ ಕೆಳಗೆ ಹೋದರು ಮನೆಯ ಮೇಲೆ ಬೀಳುವ ಸಾಧ್ಯತೆ ಇತ್ತು ಎಂದು ಸ್ಥಳೀಯರು ಹೇಳುತ್ತಾರೆ.

ಮೂರರಿಂದ ನಾಲ್ಕು ತಿಂಗಳು ಮಳೆ ಸುರಿಯುವುದರಿಂದ ಎಷ್ಟು ಹೊತ್ತಿಗೂ ಅಪಾಯವಾಗುವ ಸಾಧ್ಯತೆ ಇದೆ. ಸಾವು ನೋವು ಆಗುವುದಕ್ಕಿಂತ ಮೊದಲೇ ಸಂಬAಧ ಪಟ್ಟವರು ಕ್ರಮ ಕೈಗೊಳ್ಳಬೇಕು ಎಂದು ಜನರ ಆಗ್ರಹವಾಗಿದೆ. ಈಗಾಗಲೇ ಈ ಹಿಂದೆ ೩ ಲಕ್ಷ ರೂ. ವೆಚ್ಚದಲ್ಲಿ ಐವತ್ತು ಮೀ. ರಷ್ಟು ತಡೆಗೋಡೆ ನಿರ್ಮಿಸಿದ್ದಾರೆ. ಇನ್ನೂ ಬಾಕಿ ಉಳಿದ ಗುಡ್ಡಕ್ಕೆ ತಡೆಗೋಡೆ ನಿರ್ಮಿಸಬೇಕಾಗಿದೆ. ದೊಡ್ಡ ಅನಾಹುತವಾಗುವ ಮೊದಲು, ಶಾಸಕರು, ಜಿಲ್ಲಾಧಿಕಾರಿಕಾಗರಿಗಳು, ತಹಶೀಲ್ದಾರರು ಸ್ಥಳ ಪರಿಶೀಲನೆ ಮಾಡಿ ಅತೀ ಶೀಘ್ರದಲ್ಲಿ ಸಮಸ್ಯೆ ಬಗೆಹರಿಸಿ ಕೊಡಬೇಕು ಎಂದು ಸ್ಥಳೀಯರ ಅಗ್ರಹವಾಗಿದೆ.

error: