May 8, 2024

Bhavana Tv

Its Your Channel

ಹೊನ್ನಾವರ ತಾಲೂಕಿನಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಪಡಿಸಲು ಚಿಂತನೆ : ಸಿ ಇ ಒ ಪ್ರಿಯಾಂಗ್ ಎಂ

ಹೊನ್ನಾವರ : ಹೊನ್ನಾವರ ತಾಲೂಕಿನ ವಿವಿಧ ಪ್ರವಾಸೋಧ್ಯಮ ಕ್ಷೇತ್ರಗಳಿಗೆ ಜಿ. ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಿಯಾಂಗ್ ಎಂ ರವರು ಭೇಟಿ ನೀಡಿ ಅಲ್ಲಿಯ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿ ಪಡಿಸುವ ಕುರಿತು ಸಂಬoಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು, ಹಾಗೂ ಸಾರ್ವಜನಿಕರೊಂದಿಗೆ ಚರ್ಚಿಸಿದರು.

ಕಾಸರಕೋಡ ಗ್ರಾಮ ಪಂಚಾಯತ ವ್ಯಾಪ್ತಿಯ ಇಕೋ ಬೀಚ್ ಗೆ ಭೇಟಿ ನೀಡಿ ಅಲ್ಲಿ ತುರ್ತಾಗಿ ಆಗಬೇಕಾದ ಪಾರ್ಕಿಂಗ್ ವ್ಯವಸ್ಥೆಯ ಕುರಿತು ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲಿಸಿ ಮಾರ್ಗದರ್ಶನ ನೀಡಿದರು, ಪಟ್ಟಣದ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ನೀರು ಪರೀಕ್ಷಣಾ ಪ್ರಯೋಗಾಲಯಕ್ಕೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು.

೨೦೨೧-೨೨ ನೇ ಸಾಲಿನ ಎಎಒ ಯೋಜನೆಯ 6 ಕಾಮಗಾರಿಗಳನ್ನು ತ್ವರಿತವಾಗಿ ಆರಂಭಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ನಂತರ ಹೆರಂಗಡಿ ಗ್ರಾಮ ಪಂಚಾಯತಕ್ಕೆ ಬೇಟಿ ನೀಡಿ ಡಿಜಿಟಲೀಕರಣ ಗ್ರಂಥಾಲಯ ಹಾಗೂ ಅಮೃತ ಗ್ರಾಮ ಯೋಜನೆ ಕುರಿತು ಜನಪ್ರತಿನಿಧಿಗಳು, ಪಂಚಾಯತ ಅಧ್ಯಕ್ಷರು, ಪಂಚಾಯತ ಅಭಿವೃದ್ಧಿ ಅಧಿಕಾರಿಗಳೊಂದಿಗೆ ಚರ್ಚಿಸಿದರು. ಹೆರಂಗಡಿ ಮತ್ತು ಕುರ್ವ ಗ್ರಾಮ ಸಂಪರ್ಕಿಸುವ ಸೇತುವ ಕಾಮಗಾರಿಯನ್ನು ಪರಿಶೀಲಿಸಿ ತುರ್ತಾಗಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚಿಸಿದರು.
ನಗರಬಸ್ತಿಕೇರಿ ಗ್ರಾಮ ಪಂಚಾಯತ ವ್ಯಾಪ್ತಿಯ ಐತಿಹಾಸಿಕ ಚತುರ್ಮುಖ ಬಸದಿ (ಚನ್ನ ಭೈರಾದೇವಿ ಬಸದಿ) ಪ್ರವಾಸೋದ್ಯಮಕ್ಕೆ ಪೂರಕವಾದ ಅಭಿವೃದ್ಧಿ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿದರು.

ತಾಲೂಕಿನಲ್ಲಿ ಸಂಭವಿಸಬಹುದಾದ ನೆರ ಪ್ರವಾಹದ ಮುನ್ನೆಚ್ಚರಿಕೆ ಕೈಗೊಂಡ ಕ್ರಮದ ಕುರಿತು ಕಾರ್ಯನಿರ್ವಾಹಕ ಅಧಿಕಾರಿ, ಹಾಗೂ ಪಂಚಾಯತ ಅಭಿವೃದ್ಧಿ ಅಧಿಕಾರಿಗಳೊಂದಿಗೆ ಚರ್ಚಿಸಿದರು. ತಾಲೂಕಿನಲ್ಲಿ ನೆರೆ ಪರಿಸ್ಥಿತಿಯನ್ನು ಉತ್ತಮವಾಗಿ ತಂಡದಲ್ಲಿ ನಿರ್ವಹಿಸಿದಕ್ಕೆ ಅಧಿಕಾರಿಗಳನ್ನು ಶ್ಲಾಘಿಸಿದರು. ಸಿ ಇ ಒ ಪ್ರಿಯಾಂಗ್ ಎಂ ರವರ ತಾಲೂಕಿನ ಭೇಟಿಯು ನರೇಗಾ, ಎಸ್.ಬಿ.ಎಮ್, ವಸತಿ, ಗ್ರಂಥಾಲಯ, ಜೆ.ಜಿ.ಎಮ್, ಅಮೃತಗ್ರಾಮದ ಅನುಷ್ಠಾನದ ಜೊತೆಗೆ ತಾಲೂಕಿನಲ್ಲಿ ಪ್ರವಾಸೋದ್ಯಮ ಕ್ಷೇತ್ರವನ್ನು ಅಭಿವೃದ್ಧಿ ಪಡಿಸುವ ಚಿಂತನ ಒಳಗೊಂಡಿತ್ತು.

ಈ ಸಂದರ್ಭದಲ್ಲಿ ತಾ. ಪಂ. ಕಾರ್ಯನಿರ್ವಾಹಕ ಅಧಿಕಾರಿ ಸುರೇಶ ನಾಯ್ಕ, ಸಹಾಯಕ ನಿರ್ದೇಶಕ ಕೃಷ್ಣಾನಂದ ಕೆ. ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕರಾದ ಜಯಂತ, ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರರಾದ ಪ್ರಕಾಶ, ಪಿಎಮ್‌ಜಿವೈ ಎಇಇ ರಾಜೀವ ನಾಯ್ಕ, ಪಿಆರ್‌ಇಡಿ ಎಇಇ ಪ್ರದೀಪ ಆಚಾರಿ, ಹೆರಂಗಡಿ ಗ್ರಾಮ ಪಂಚಾಯತ ಅಧ್ಯಕ್ಷರಾದ ಪ್ರಮೋದ ನಾಯ್ಕ, ಪಂಚಾಯತ ಅಭಿವೃದ್ಧಿ ಅಧಿಕಾರಿಗಳಾದ ಉದಯ ಬಾಂದೇಕರ, ಚನ್ನಬಸಪ್ಪ ಮಹಾಜನಶೆಟ್ಟಿ ಮುಂತಾದ ಅಧಿಕಾರಿಗಳು ಹಾಜರಿದ್ದರು.

ವರದಿ ; ವೆಂಕಟೇಶ ಮೇಸ್ತ ಹೊನ್ನಾವರ

error: