
ಹೊನ್ನಾವರ: ಅರಣ್ಯ ಹಕ್ಕು ಮಾನ್ಯತೆ ಕಾಯಿದೆಯಡಿ ಸಲ್ಲಿಕೆಯಾದ ಕ್ಲೇಮುಗಳಿಗೆ ಸಂಬAಧಿಸಿ ಅರಣ್ಯ ಇಲಾಖೆಯಿಂದ ಈ ವರೆಗೆ ಜಿ.ಪಿ.ಎಸ್. ಸಮೀಕ್ಷೆ ಆಗದಿರುವ ಮತ್ತು ಸಮೀಕ್ಷೆ ನಡೆಸಿಯೂ ಗ್ರಾಮ ಅರಣ್ಯ ಹಕ್ಕು ಸಮಿತಿಗಳಿಗೆ ಜಿ. ಪಿ.ಎಸ್. ನಕಾಶೆಗಳನ್ನು ಸಲ್ಲಿಸಲು ಬಾಕಿ ಇರುವ ಪ್ರಕರಣಗಳ ವಿಚಾರವಾಗಿ ಅರಣ್ಯವಾಸಿಗಳ ಹಿತರಕ್ಷಣೆ ಮಾಡುವ ಉದ್ದೇಶದಿಂದ ಅರಣ್ಯ ಭೂಮಿ ಹಕ್ಕು ಹೋರಾಟ ಸಮಿತಿಯ ಹೊನ್ನಾವರದ ಅಧ್ಯಕ್ಷ ಚಂದ್ರಕಾoತ ಕೊಚರೇಕರ ನೇತ್ರತ್ವದ ನಿಯೋಗವು ಹೊನ್ನಾವರ ಉಪ ಅರಣ್ಯ ಸಂರಕ್ಷಣಾಧಿಕಾರಿ ರವೀಂದ್ರ ರವರ ಕಛೇರಿಯಲ್ಲಿ ಭೇಟಿ ಮಾಡಿ ಸುದೀರ್ಘ ಚರ್ಚೆ ನಡೆಸಿತು. ಚರ್ಚೆಯ ಸಂದರ್ಭದಲ್ಲಿ ತಾಲೂಕಿನಲ್ಲಿ ಸಾವಿರಾರು ಅರಣ್ಯ ಹಕ್ಕು ಕ್ಲೇಮು ಅರ್ಜಿಗಳಿಗೆ ಸಂಬAಧಿಸಿ ಅರಣ್ಯ ಇಲಾಖೆಯ ಕೆಲವು ವಲಯ ಕಛೇರಿಗಳು ಸ್ಥಳೀಯ ಗ್ರಾಮ ಅರಣ್ಯ ಹಕ್ಕು ಸಮೀತಿಗಳಿಗೆ ಸಂಬAಧಪಟ್ಟ ವೈವಾಟಿ ಸ್ಥಳದ ಜಿ. ಪಿ. ಎಸ್. ನಕಾಶೆಗಳನ್ನು ಈ ವರೆಗೆ ಸಲ್ಲಿಸದೇ ಇರುವದು ಮತ್ತು ಕೆಲವು ಪ್ರಕರಣಗಳಲ್ಲಿ ವೈವಾಟಿ ಸ್ಥಳಕ್ಕೂ ನಕಾಶೆಯಲ್ಲಿ ತೋರಿಸಿದ ಸ್ಥಳಕ್ಕೂ ಭಾರಿ ವ್ಯತ್ಯಾಸ ಇರುವ ಬಗ್ಗೆ ಗಮನ ಸೆಳೆಯಲಾಯಿತು.
ಈ ವಿಚಾರವನ್ನು ಪರಿಶೀಲಿಸಿ ಸಾಗುವಳಿ ಸ್ಥಳದ ಜಿಪಿಎಸ್ ನಕಾಶೆಗಳನ್ನು ಸಲ್ಲಿಸಲು ಕ್ರಮಗಳು ಅಗಬೇಕು ಮತ್ತು ಗೇರು ಅಭಿವೃದ್ಧಿ ನಿಗಮಕ್ಕೆ ಲೀಸ್ ಗೆ ನೀಡುವ ಪೂರ್ವದಲ್ಲಿ ಅರಣ್ಯ ಭೂಮಿಯಲ್ಲಿದ್ದ ನೈಜ ಒತ್ತುವರಿಯನ್ನು ಗುರುತಿಸಿ,ಅರಣ್ಯ ಹಕ್ಕು ಕ್ಲೇಮುಗಳ ವಿಚಾರದಲ್ಲಿ ಅರಣ್ಯ ಭೂಮಿ ಸಾಗುವಳಿದಾರರಿಗೆ ಸಮಸ್ಯೆ ಆಗದಂತೆ ಇಲಾಖೆ ಸಹಕರಿಸಬೇಕು ಎಂದು ನಿಯೋಗ ರವಿಂದ್ರ ರವರಲ್ಲಿ ಮನವಿ ಮಾಡಿತು.
ವೈವಾಟಿ ಸ್ಥಳ ಮತ್ತು ಜಿ ಪಿ ಎಸ್ ನಕಾಶೆಗಳಲ್ಲಿನ ವ್ಯತ್ಯಾಸ ಮತ್ತು ಲೋಪಗಳ ಕುರಿತು ನಿರ್ಧಿಷ್ಠ ದೂರು ಇರುವ ಪ್ರಕರಣಕ್ಕೆ ಸಂಬAಧಿಸಿ ಮರು ಸಮೀಕ್ಷೆ ನಡೆಸಿ ಬದಲಿ ನಕಾಶೆ ಸಲ್ಲಿಸಲು ಪರಿಶೀಲಿಸಬೇಕೆಂದು ನಿಯೋಗವು ಉಪ ಅರಣ್ಯ ಸಂರಕ್ಷಣಾಧಿಕಾರಿಗಳಲ್ಲಿ ಕೋರಿಕೆ ಸಲ್ಲಿಸಿ ಈ ಸಂಬAಧ ಸುದೀರ್ಘ ಚರ್ಚೆ ನಡೆಸಿತು.
ನಿಯೋಗದ ಮನವಿಗೆ ಸ್ಪಂದಿಸಿದ ಉಪ ಅರಣ್ಯ ಸಂರಕ್ಷಣಾಧಿಕಾರಿ ರವೀಂದ್ರ ರವರು ಅರಣ್ಯ ಹಕ್ಕು ಮಾನ್ಯತೆ ಕಾಯಿದೆ ಪ್ರಕಾರ ಅರ್ಜಿ ಸ್ವೀಕಾರವಾಗಿರುವ ಕ್ಲೇಮುಗಳಿಗೆ ಸಂಬAಸಿದAತೆ ನಮ್ಮ ಇಲಾಖೆಯಿಂದ ಗ್ರಾಮ ಅರಣ್ಯ ಹಕ್ಕು ಸಮಿತಿ ಗಳಿಗೆ ಜಿ.ಪಿ. ಎಸ್. ನಕಾಶೆ ಸಲ್ಲಿಸಲು ಬಾಕಿ ಇದ್ದರೆ ಅವುಗಳ ಬಗ್ಗೆ ಕೂಡಲೇ ಪರಿಶೀಲಿಸಿ ನಕಾಶೆಗಳನ್ನು ಆಯಾ ಸಮಿತಿಗಳಿಗೆ ಸಲ್ಲಿಸಲು ಸಂಬoಧ ಪಟ್ಟ ವಲಯ ಅರಣ್ಯಾಧಿಕಾರಿಗಳಿಗೆ ಸೂಚಿಸಲಾಗುವುದು. ಇನ್ನುಳಿದ ವಿಚಾರಗಳ ಬಗ್ಗೆಯೂ ಪರಿಶೀಲಿಸಿ ಸಮಸ್ಯೆ ಇದ್ದರೆ ಬಗೆಹರಿಸಲಾಗುವದಾಗಿ ರವೀಂದ್ರ ಅವರು ತಮ್ಮನ್ನು ಭೇಟಿಯಾದ ನಿಯೋಗಕ್ಕೆ ಭರವಸೆ ನೀಡಿದರು.
ನಿಯೋಗದಲ್ಲಿ ಹೋರಾಟ ಸಮಿತಿ ಅಧ್ಯಕ್ಷ ಚಂದ್ರಕಾAತ ಕೊಚರೇಕರ, ಉಪಾಧ್ಯಕ್ಷರುಗಳಾದ ಹರಿಯಪ್ಪ ನಾಯ್ಕ ಹುಡಗೋಡ, ಯೋಗೇಶ ರಾಯ್ಕರ್ ಉಪ್ಪೊಣಿ, ಕಾರ್ಯದರ್ಶಿ ವಿನಾಯಕ ನಾಯ್ಕ ಮುಡ್ಕಣಿ, ಜಂಟಿ ಕಾರ್ಯದರ್ಶಿ ಗಣೇಶ್ ಜಿ. ನಾಯ್ಕ, ಕೆಂಬಾಲ, ಮನೋಹರ ಅಂಕೊಲೆಕರ ಅಳ್ಳಂಕಿ ಇನ್ನಿತರರು ಉಪಸ್ಥಿತರಿದ್ದರು. ಉಪ ಅರಣ್ಯ ಸಂರಕ್ಷಣಾಧಿಕಾರಿ ಶ್ರೀ ರವಿಶಂಕರ ಎಂದು ತಿದ್ದುಪಡಿ ಮಾಡಿಕೊಳ್ಳುವದು

More Stories
ಜಿಲ್ಲಾ ಮಟ್ಟದ ರಾಮಕ್ಷತ್ರೀಯ ಸಮಾಜದ ಹೊನಲು ಬೆಳಕಿನ ಹಗ್ಗಜಗ್ಗಾಟ ಪಂದ್ಯಾವಳಿ
ಕನ್ನಡ ಕಾರ್ತಿಕ 2024ರ ಅನುದಿನ ಅನುಸ್ಪಂದನ
ಹಿಂದುಳಿದ ನಾಯಕ ಬಿಕೆ ಹರಿಪ್ರಸಾದ್ ಅವರ ಬಗ್ಗೆ ನಾಲಗೆ ಹರಿಬಿಟ್ಟ ಹರೀಶ್ ಪೂಂಜಾ ಸಾರ್ವಜನಿಕ ಜೀವನದಲ್ಲಿರಲು ಯೋಗ್ಯರಲ್ಲ :ಮಂಜುನಾಥ ನಾಯ್ಕ