June 29, 2024

Bhavana Tv

Its Your Channel

ಸ್ನೇಹ ಸಮ್ಮೇಳನಕ್ಕೆ ಸಜ್ಜಾದ ಎಸ್.ಡಿ.ಎಮ್!

ಹೊನ್ನಾವರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಎಂ.ಪಿ.ಇ ಸೊಸೈಟಿಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಪೂರ್ವ ಮಹಾವಿದ್ಯಾಲಯದ 2022-23 ನೇ ಶೈಕ್ಷಣಿಕ ಸಾಲಿನ ವಾರ್ಷಿಕ ಸ್ನೇಹ ಸಮ್ಮೇಳನವು ದಿನಾಂಕ 6/01/2023 ಹಾಗೂ ದಿನಾಂಕ 7/01/2023 ರಂದು ಎಸ್.ಡಿ.ಎಮ್.ಪದವಿ ಕಾಲೇಜಿನ ಬಯಲು ರಂಗಮoದಿರದಲ್ಲಿ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾಇದರ ಸ್ನಾತಕೋತ್ತರ ಹಿಂದಿ ವಿಭಾಗದ ಮುಖ್ಯಸ್ಥರಾದ ಡಾ.ಮಂಜುನಾಥ್‌ಎನ್. ಅಂಬಿಗ ಹಾಗೂ ಹೊನ್ನಾವರ ತಾಲೂಕಿನ ಉಪಅರಣ್ಯ ಸಂರಕ್ಷಣಾಧಿಕಾರಿಗಳಾದ ರವಿಶಂಕರ ಸಿ.ಆಗಮಿಸಲಿದ್ದಾರೆ.ಸಭಾಧ್ಯಕ್ಷತೆಯನ್ನು ಎಂ.ಪಿ.ಇ ಸೊಸೈಟಿಯ ಅಧ್ಯಕ್ಷರಾದ ಕೃಷ್ಣಮೂರ್ತಿ ಭಟ್ ಶಿವಾನಿ ವಹಿಸಲಿದ್ದಾರೆ. ಪದವಿ ಕಾಲೇಜಿನ ಪ್ರಾಚಾರ್ಯೆಡಾ.ವಿಜಯಲಕ್ಷಿö್ಮಎಮ್. ನಾಯ್ಕ ಹಾಗೂ ಪದವಿ ಪೂರ್ವಕಾಲೇಜಿನ ಪ್ರಾಚಾರ್ಯ ಎಮ್.ಹೆಚ್.ಭಟ್ ಉಪಸ್ಥಿತರಿರುವರು. ಎರಡು ದಿನ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.

error: