
ಹೊನ್ನಾವರ: ರಾಘವ ಬಾಳೇರಿಯವರಿಂದ ತಾಲೂಕಾ ಮಟ್ಟದಲ್ಲಿ ಆರಂಭವಾಗಿ ಜಿಲ್ಲೆಯಾದ್ಯಂದ ಶಾಖೆಗಳು ಆರಂಭಗೊoಡು, ಜಿಲ್ಲಾ ಯುವವಾಹಿನಿಯ 15ನೇ ಸಮಾವೇಶ ದಿನಾಂಕ 8 ರಂದು ರವಿವಾರ ಮಂಕಿ ಬಣಸಾಲೆಯ ಲಕ್ಷ್ಮಿವೆಂಕಟೇಶ ಮಠದಲ್ಲಿ ನಡೆಯಲಿದೆ. ಎಲ್ಲಾ ಸಮಾಜದ ಯುವಕರಿಗೆ ಸಂಘಟಿತವಾಗಲು ಸ್ಫೂರ್ತಿ ನೀಡಿದ ಯುವವಾಹಿನಿಯ ಕಾರ್ಯಕ್ರಮಗಳು ಮಾದರಿಯಾಗಿ ನಡೆಯಲಿದ್ದು ಬಹುಸಂಖ್ಯೆಯಲ್ಲಿ ಆಗಮಿಸಿಬೇಕೆಂದು ಸಮಾಜದವರನ್ನು ಸ್ವಾಗತ ಸಮಿತಿ ಕೇಳಿಕೊಂಡಿದೆ.
ಅAದು ಮುಂಜಾನೆ ಮಂಗಳೂರು ಶಾಸಕ ವೇದವ್ಯಾಸ ಕಾಮತ ಸಮಾವೇಶವನ್ನು ಉದ್ಘಾಟಿಸುವರು. ಅರ್ಬನ ಬ್ಯಾಂಕ ಅಧ್ಯಕ್ಷ ರಾಘವ ಬಾಳೇರಿ ಅಧ್ಯಕ್ಷತೆ ವಹಿಸವರು. ಹಂಗ್ಯೋ ಉದ್ಯಮ ಅಧ್ಯಕ್ಷ ಪ್ರದೀಪ ಪೈ, ಶಿವಮೊಗ್ಗ ಉದ್ಯಮಿ ಭಟ್ಕಳದ ಸುರೇಂದ್ರ ಶಾನಭಾಗ, ಮಾದನಗೇರಿ ಮಹಾಲಸಾ ಕ್ಷೇತ್ರದ ಸುನೀಲ ಪೈ ಅತಿಥಿಗಳಾಗಿ ಪಾಲ್ಗೊಳ್ಳುವರು. ಉಪನ್ಯಾಸ ಕಾರ್ಯಕ್ರಮದಲ್ಲಿ ಪ್ರೊ. ಅನಂತ ಪ್ರಭು ಮಂಗಳೂರು, ಹರಿ ಪೈ ಹಳದೀಪುರ, ವೇ|ಮೂ| ಮುಕುಂದ ಭಟ್ಟ ಬೇರೊಳ್ಳಿ ಪಾಲ್ಗೊಳ್ಳಲಿದ್ದಾರೆ. ಸಮಾರೋಪ ಸಮಾರಂಭದಲ್ಲಿ ಮಾಜಿ ಶಾಸಕ ಸುನೀಲ ಹೆಗಡೆ ಹಳಿಯಾಳ, ಉದ್ಯಮಿ ಡಿ.ಜೆ. ಕಾಮತ ಶಿರಾಲಿ, ಡಾ|| ರಾಜೇಶ ಕಿಣಿ ಹೊನ್ನಾವರ, ಮಂಜುನಾಥ ಪೈ ಗೋವಾ ಪಾಲ್ಗೊಳ್ಳುವರು. ಮಧ್ಯಾಹ್ನ ಸಂಗೀತಸುಧಾ ಕಾರ್ಯಕ್ರಮವಿದೆ ಎಂದು ಪ್ರಕಟಿಸಲಾಗಿದೆ.

More Stories
ಜಿಲ್ಲಾ ಮಟ್ಟದ ರಾಮಕ್ಷತ್ರೀಯ ಸಮಾಜದ ಹೊನಲು ಬೆಳಕಿನ ಹಗ್ಗಜಗ್ಗಾಟ ಪಂದ್ಯಾವಳಿ
ಕನ್ನಡ ಕಾರ್ತಿಕ 2024ರ ಅನುದಿನ ಅನುಸ್ಪಂದನ
ಹಿಂದುಳಿದ ನಾಯಕ ಬಿಕೆ ಹರಿಪ್ರಸಾದ್ ಅವರ ಬಗ್ಗೆ ನಾಲಗೆ ಹರಿಬಿಟ್ಟ ಹರೀಶ್ ಪೂಂಜಾ ಸಾರ್ವಜನಿಕ ಜೀವನದಲ್ಲಿರಲು ಯೋಗ್ಯರಲ್ಲ :ಮಂಜುನಾಥ ನಾಯ್ಕ