April 2, 2025

Bhavana Tv

Its Your Channel

ಎಸ್.ಡಿ.ಎಂ.ಪದವಿ ಮಹಾವಿದ್ಯಾಲಯದಲ್ಲಿ ವಿವೇಕಾನಂದ ಜಯಂತಿ ಆಚರಣೆ

ಹೊನ್ನಾವರ: ದಿನಾಂಕ 12 ಜನವರಿ 2023, ಗುರುವಾರ ಮುಂಜಾನೆ 11.30 ಗಂಟೆಗೆ ಎಸ್.ಡಿ.ಎಂ.ಪದವಿ ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿ ಒಕ್ಕೂಟದ ಆಶ್ರಯದಲ್ಲಿ ‘ರಾಷ್ಟಿçÃಯ ಯುವ ದಿನಾಚರಣೆ’ ಪ್ರಯುಕ್ತ ಸ್ವಾಮಿ ವಿವೇಕಾನಂದ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು.ಪ್ರಾಚಾರ್ಯರು, ಸಮಸ್ತ ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿಗಲೂ ಹಾಗೂ ಸಮಸ್ತ ವಿದ್ಯಾರ್ಥಿಗಳು ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪ ಸಮರ್ಪಣೆ ಮಾಡಿ ಗೌರವ ಸಲ್ಲಿಸಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಡಾ.ಪತಂಜಲಿ ವೀಣಾಕರ, ಉಪನ್ಯಾಸಕರು ಸಂಸ್ಕೃತ ಪಾಠಶಾಲೆ, ಕವಲಕ್ಕಿ ಇವರು ಯುವ ವಿದ್ಯಾರ್ಥಿಗಳಿಗೆ ವಿವೇಕಾನಂದರ ಸಂದೇಶಗಳನ್ನು ವಿವರಿಸಿ, ವಿದ್ಯಾರ್ಥಿ ಜೀವನದಲ್ಲಿ ಅದನ್ನು ಪಾಲಿಸಲು ಕರೆ ನೀಡಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯರಾದ ಡಾ.ವಿಜಯಲಕ್ಷಿö್ಮ ಎಂ. ನಾಯ್ಕ ವಹಿಸಿ ರಾಷ್ಟç ನಿರ್ಮಾಣದಲ್ಲಿ ಯುವಕರ ಪಾತ್ರವನ್ನು ವಿವರಿಸಿದರು.ಆರಂಭದಲ್ಲಿ ವಿದ್ಯಾರ್ಥಿ ಒಕ್ಕೂಟದ ಉಪಾಧ್ಯಕ್ಷರಾದ ಡಾ.ಡಿ.ಎಲ್. ಹೆಬ್ಬಾರ ಸರ್ವರನ್ನು ಸ್ವಾಗತಿಸಿ ಅತಿಥಿಗಳನ್ನು ಸಭೆಗೆ ಪರಿಚಯಿಸಿದರು. ವೇದಿಕೆಯಲ್ಲಿ ವಿದ್ಯಾಥಿ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಚಂದನ ಮೇಸ್ತ ಉಪಸ್ಥಿತರಿದ್ದರು. ಎನ್. ಜಿ. ಅನಂತಮೂರ್ತಿ ವಂದಿಸಿದರು. ಸಂತೋಷಗುಡಿಗಾರ ನಿರೂಪಿಸಿದರು.
ಇದೇ ಸಂದರ್ಭದಲ್ಲಿ ಆಯ್ದ 50 ವಿದ್ಯಾಥಿಗಳಿಗೆ “ಸ್ವಾಮಿ ವಿವೇಕಾನಂದರ ಬೋಧನೆಯ ಸಾರ” ಎನ್ನುವ ಪುಸ್ತಕಗಳನ್ನು ವಿತರಿಸಲಾಯಿತು.

error: