March 28, 2025

Bhavana Tv

Its Your Channel

ರಸ್ತೆ ಅಪಘಾತ ಗಾಯಗೊಂಡ ವಿದ್ಯಾರ್ಥಿಗೆ ಆರ್ಥಿಕ ನೆರವಾದ ಹೊನ್ನಾವರ ಹವ್ಯಕ ಪ್ರತಿಷ್ಠಾನ

ಹೊನ್ನಾವರ ತಾಲೂಕಿನ ಸಾಲ್ಕೋಡ್ ಗ್ರಾಮ ಪಂಚಾಯತಿ ವ್ಯಾಪ್ತಿಯ ಮರಿಮನೆಯ ಸುಬ್ರಹ್ಮಣ್ಯ ಹೆಗಡೆ ಬೈಕ್ ಅಪಘಾತ ಕಾಲು ಮತ್ತು ಕೈ ಭಾಗಕ್ಕೆ ಗಂಭೀರ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದರು. ಬಡ ಕುಟುಂಬಕ್ಕೆ ಆರ್ಥಿಕವಾಗಿ ನೆರವಾಗಲು ಹವ್ಯಕ ಪ್ರತಿಷ್ಠಾನದ ವತಿಯಿಂದ ಒಂದು ಲಕ್ಷ ಧನಸಹಾಯ ನೀಡಿದರು.

ನಂತರ ಹವ್ಯಕ ಪ್ರತಿಷ್ಠಾನದ ಪ್ರಮುಖರಾದ ಎಂ.ಜಿ.ಭಟ್ ಮಾತನಾಡಿ ಅಪಘಾತದಲ್ಲಿ ಗಾಯಗೊಂಡ ಸಮಾಜದ ಬಡ ಕುಟುಂಬಕ್ಕೆ ಆರ್ಥಿಕವಾಗಿ ನೆರವಾಗಲು ಎಲ್ಲರೂ ಸೇರಿ ಒಂದು ಲಕ್ಷ ಧನಸಹಾಯ ನೀಡಲಾಗಿದೆ. ಕಷ್ಟದಲ್ಲಿದ್ದಾಗ ಸೇವೆ ರೂಪದಲ್ಲಿ ಮುಂದೆ ಬಂದು ನೊಂದವರ ಬಾಳಿಗೆ ಬೆಳಕಾಗುದು ಪ್ರತಿಷ್ಠಾನದ ಮೂಲ ಉದ್ದೇಶವಾಗಿದೆ. ಮುಂದಿನ ದಿನದಲ್ಲಿ ಸಮಾಜದ ಬಡತನದಲ್ಲಿರುವವರನ್ನು ಗುರುತಿಸಿ ಆರ್ಥಿಕವಾಗಿ ಸಹಾಯ ಮಾಡುವ ಯೋಜನೆ ರೂಪಿಸಲಾಗಿದೆ. ಈ ಎಲ್ಲಾ ಕಾರ್ಯಕ್ಕೆ ಸಹಕಾರ ಅಗತ್ಯವಿದೆ ಎಂದರು.
ಪ್ರತಿಷ್ಠಾನದ ಪ್ರಮುಖರಾದ ಆರ್.ಎನ್.ಹೆಗಡೆ, ವಿ.ಡಿ ಹೆಗಡೆ, ಭುವನ್ ಭಾಗವತ, ಜಗದೀಶ್ ಭಟ್, ವೆಂಕಟರಮಣ ಭಟ್, ವಿ.ಎ. ಪ್ರಸನ್ನ,ಎಂ.ಆರ್. ಹೆಗಡೆ, ಎನ್.ಎಸ್. ಹೆಗಡೆ, ಶಿವರಾಮ ಹೆಗಡೆ ,ಜಿಕೆ ಹೆಗಡೆ, ದಿನೇಶ್ ಹೆಗಡೆ, ಎಲ್ ಎ ಭಟ್ಟ ಮತ್ತಿತರರು ಉಪಸ್ಥಿತರಿದ್ದರು..

error: