ಹೊನ್ನಾವರ : ಕುಮಟಾ-ಹೊನ್ನಾವರ ವಿಧಾನಸಭಾ ಕ್ಷೇತ್ರ ಅಭಿವೃದ್ಧಿಯಲ್ಲಿ ತೀರಾ ಹಿಂದುಳಿದಿದ್ದು, ನಾನು ಶಾಸಕನಾಗಿ ಆಯ್ಕೆಯಾದಲ್ಲಿ, ರಾಜ್ಯದಲ್ಲಿಯೇ ಕುಮಟಾ ಕ್ಷೇತ್ರವನ್ನು ಮಾದರಿ ವಿಧಾನಸಭಾ ಕ್ಷೇತ್ರವನ್ನಾಗಿ ರೂಪಿಸುವುದೇ ನನ್ನ ಪ್ರಥಮ ಆದ್ಯತೆ ಎಂದು ಕುಮಟಾ-ಹೊನ್ನಾವರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ನಿವೇದಿತ್ ಆಳ್ವಾ ನುಡಿದರು.
ಅವರು ಹೊನ್ನಾವರ ಪಟ್ಟಣದ ತುಳಸಿ ನಗರ ಪ್ರದೇಶದಲ್ಲಿ ಮತದಾರರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಹೊನ್ನಾವರ ಬ್ಲಾಕ್‌ಕಾಂಗ್ರೆಸ್ ಅಧ್ಯಕ್ಷ ಜಗದೀಪ್ ಎನ್ ತೆಂಗೇರಿ ಮಾತನಾಡಿ ಅತ್ಯಂತ ಕ್ರೀಯಾಶೀಲ,ಸ್ನೇಹಪರ ನಡತೆಯ, ಅಭಿವೃದ್ಧಿ ಪರಚಿಂತನೆಯ ಯುವ ಮುಖಂಡನಿಗೆ ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರದ ಪಕ್ಷದ ಟಿಕೇಟ್ ನೀಡಿದ ಕಾಂಗ್ರೆಸ್ ಪಕ್ಷದ ವರಿಷ್ಠರಿಗೆ,ಕ್ಷೇತ್ರದ ಜನತೆಯ ಪರವಾಗಿ ಧನ್ಯವಾದ ಸಲ್ಲಿಸಿದರು. ಕಳೆದ ಇಪ್ಪತ್ತು ವರ್ಷಗಳಿಂದ ಸಾರ್ವಜನಿಕ ಸೇವೆಯಲ್ಲಿದ್ದು, ಪಕ್ಷದ ರಾಜ್ಯಮಟ್ಟದ ವಿವಿಧ ಪದಾಧಿಕಾರಿಯಾಗಿ ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದ ನಿವೇದಿತ್ ಆಳ್ವಾರವರು, ಸಿದ್ದರಾಮಯ್ಯ ಸರಕಾರದ ಆಡಳಿತಾವಧಿಯಲ್ಲಿ ಕರಾವಳಿ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾಗಿ ನೀಡಿದ ಆಡಳಿತ, ಅವರ ಅಭಿವೃದ್ಧಿ ಪರಚಿಂತನೆಗೆ ಹಿಡಿದಕೈಗನ್ನಡಿಯಾಗಿದೆಎಂದರು. ನಂತರ ಹೊನ್ನಾವರ ಪಟ್ಟಣದ ಅಶುರಖಾನಾ ರಸ್ತೆ, ಕೆಳಗಿನ ಪಾಳ್ಯಾ,ಜೋಗಮಠ, ಗಾಂಧಿನಗರ,ಪ್ರಭಾತ ನಗರ ಹಾಗೂ ಹಳದೀಪುರ ಗ್ರಾಮದ ಹೊರಭಾಗ, ಪಳ್ಳಿಕೇರಿ,ಬಡಗಣಿ, ಸಾಲೀಕೇರಿ, ಬಡ್ನಿಕೇರಿಇನ್ನೂ ಹಲವಾರು ಪ್ರದೇಶಗಳಿಗೆ ತೆರಳಿ ಸಾರ್ವಜನಿಕರೊಂದಿಗೆ ಸಂವಾದ ನಡೆಸಿ ಮತ ಯಾಚಿಸಿದರು. ಈ ಸಂದರ್ಭದಲ್ಲಿ ಕೆ.ಪಿ.ಸಿ.ಸಿ. ಸದಸ್ಯ ಎಂ.ಎನ್. ಸುಬ್ರಹ್ಮಣ್ಯ, ಮಹಿಳಾ ಕಾಂಗ್ರೆಸ್‌ಅಧ್ಯಕ್ಷೆ ಪುಷ್ಪಾ ಮಹೇಶ್ ಪಕ್ಷದ ಮುಖಂಡರಾದ ದಾಮೋದರ ನಾಯ್ಕ,ರವಿ ಶೆಟ್ಟಿ, ಸುರೇಶ ಮೇಸ್ತ,ಶ್ರೀಕಾಂತ್ ಮೇಸ್ತ,ಕೃಷ್ಣ ಮಾರಿಮನೆ, ಜಕ್ರಿಯ್ಯಾ ಶೇಖ, ಜಿ.ಎನ್.ಗೌಡ, ಎಸ್.ಡಿ.ಹೆಗಡೆ, ಜನಾರ್ಧನ ನಾಯ್ಕ, ರವಿ ಮೊಗೇರ,ಸುರೇಶರುಕ್ಕು ಮೇಸ್ತ, ಮಹೇಶ ನಾಯ್ಕ, ಅಜಿತ್‌ತಾಂಡೆಲ್,ಅನೀತಾ ಶೇಟ, ಜ್ಯೋತಿ ಮಹಾಲೆ ಇನ್ನೂ ಹಲವಾರು ಮುಖಂಡರು ನಿವೇದಿತ್ ಆಳ್ವಾರವರ ಜೋತೆಯಲ್ಲಿದ್ದರು.
More Stories
ಬಿ.ಎಸ್.ಎಸ್. ಮೈಕ್ರೊ ಪೈನಾನ್ಸ ಲಿಮೆಟಿಡ್ ವತಿಯಿಂದ ಪ್ರವಾಹ ಸಂತ್ರಸ್ಥರಿಗೆ ಪರಿಹಾರ ವಿತರಣೆ
ಮನೆಗೆ ಆಕಸ್ಮಿಕವಾಗಿ ಬೆಂಕಿ
ಹೊನ್ನಾವರದ ಎಸ್.ಡಿ.ಎಂ.ಪದವಿ ಕಾಲೇಜಿನ ಇಂಗ್ಲಿಷ್ ಲಿಟರರಿ ಕ್ಲಬ್ ಆಶ್ರಯದಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಕೈಬರಹ ಪುಸ್ತಕ ‘ಬ್ಲೂಮ್’ ಬಿಡುಗಡೆ.