December 22, 2024

Bhavana Tv

Its Your Channel

ಶ್ರೀ ಚೆನ್ನಕೇಶವ ಪ್ರೌಢಶಾಲೆ, ಕರ್ಕಿಯ ಎಸ್.ಎಸ್.ಎಲ್.ಸಿ ಫಲಿತಾಂಶ ಶೇಕಡ 93.65

ಹೊನ್ನಾವರ ; ಈ ಶೈಕ್ಷಣಿಕ ವರ್ಷದ ಎಸ್.ಎಸ್.ಎಲ್.ಸಿ ಫಲಿತಾಂಶ ಪ್ರಕಟವಾಗಿದ್ದು, ಶ್ರೀ ಚೆನ್ನಕೇಶವ ಪ್ರೌಢಶಾಲೆಯಿಂದ 63 ವಿದ್ಯಾರ್ಥಿಗಳು ಪರೀಕ್ಷೆ ಬರೆದು 59 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇಕಡ ಫಲಿತಾಂಶ 93.65 ಆಗಿರುತ್ತದೆ.
606 ಅಂಕ ಪಡೆದು 96.96 ಶೇಕಡ ಫಲಿತಾಂಶದೊAದಿಗೆ ಕುಮಾರಿ ಮನೀಷಾ ರಾಜು ಮೇಸ್ತ ಶಾಲೆಗೆ ಪ್ರಥಮ ಸ್ಥಾನ ಪಡೆದಿರುತ್ತಾಳೆ.
586 ಅಂಕ ಪಡೆದು 93.76 ಶೇಕಡ ಫಲಿತಾಂಶದೊAದಿಗೆ ಕುಮಾರಿ ಪವಿತ್ರಾ ಲಕ್ಷೀಶ ನಾಯ್ಕ ಶಾಲೆಗೆ ದ್ವಿತೀಯ ಸ್ಥಾನ ಪಡೆದಿರುತ್ತಾಳೆ.
583 ಅಂಕ ಪಡೆದು 93.28 ಶೇಕಡ ಫಲಿತಾಂಶದೊAದಿಗೆ ಕುಮಾರಿ ತನುಜಾ ಮುಕುಂದ ನಾಯ್ಕ ಶಾಲೆಗೆ ತೃತೀಯ ಸ್ಥಾನ ಪಡೆದಿರುತ್ತಾಳೆ.
41 ವಿದ್ಯಾರ್ಥಿಗಳು ಅಗ್ರ ಶ್ರೇಯಾಂಕ ಮತ್ತು ಪ್ರಥಮ ದರ್ಜೆ ಅಂಕ ಪಡೆಯುವ ಮೂಲಕ ಶಾಲೆಯ ಫಲಿತಾಂಶ ಉತ್ತಮ ಸ್ಥಿತಿಯಲ್ಲಿದೆ. ಉತ್ತಮ ಗುಣಮಟ್ಟದ ಫಲಿತಾಂಶಕ್ಕಾಗಿ ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಜಿ.ಎಸ್.ನಾಯ್ಕ, ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ಗಜಾನನ ಹೆಗಡೆಯವರು ಮತ್ತು ಮುಖ್ಯಾಧ್ಯಾಪಕರಾದ ಎಲ್.ಎಮ್.ಹೆಗಡೆಯವರು, ಸಿಬ್ಬಂದಿಗಳು ಅಭಿನಂದಿಸಿರುತ್ತಾರೆ.

error: