May 5, 2024

Bhavana Tv

Its Your Channel

ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಬುಧಾವಾರ ಹೊನ್ನಾವರ ತಾಲೂಕಿನ 172 ಮತಗಟ್ಟೆಗಳಲ್ಲಿ ಶಾಂತಿಯುತ ಮತದಾನ

ಹೊನ್ನಾವರ ; ತಾಲೂಕು 2 ವಿಧಾನಸಭಾ ಕ್ಷೇತ್ರಗಳಿಗೆ ಹೊಂದಿಕೊAಡಿದ್ದು ಕುಮಟಾ ವಿಧಾನ ಸಭಾ ಕ್ಷೇತ್ರದ 64 ಮತಗಟ್ಟೆ ಭಟ್ಕಳ ವಿಧಾನಸಭಾ ಕ್ಷೇತ್ರದ 108 ಮತಗಟ್ಟೆ ಹೊಂದಿದೆ ಎಲ್ಲಾ ಮತಗಟ್ಟೆಗಳಿಗೆ ವಿದ್ಯನ್ಮಾನ ಮತಯಂತ್ರ ಹಾಗೂ ಇತರ ಸಲಕರಣೆಗಳನ್ನು ಮಂಗಳವಾರ ಸರಬರಾಜು ಮಾಡಲಾಗಿದ್ದು ಮತಗಟ್ಟೆ ಅಧಿಕಾರಿಗಳು ಸಿಬ್ಬಂದಿಗಳು ಯಾವುದೇ ಸಮಸ್ಯೆ ಉಂಟಾಗದೆ ಕಾರ್ಯ ನಿರ್ವಹಿಸಿದರು. ತಾಲೂಕಿನ  ಸೂಕ್ಷ್ಮ& ಅತೀ ಸೂಕ್ಷ್ಮ ಮತಗಟ್ಟೆಗಳಲ್ಲಿ ಬಿಗಿ ಪೊಲೀಸ್‌ಬಂದೋಬಸ್ತ ಕಲ್ಪಿಸಲಾಗಿತ್ತು. ಕೆಲವು ಕಡೆಗಳಲ್ಲಿ ರಾಜಕೀಯ  ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಂದು ಪೊಲಿಸರು ಹೆಚ್ಚಿನ ಸಿಬ್ಬಂದಿಗಳನ್ನು ನಿಯೋಜನೆಗೊಳಿಸಲಾಗಿತ್ತು.
 ತಾಲೂಕಿನ ಒಟ್ಟೂ 29 ಗ್ರಾಮ ಪಂಚಾಯತಗಳಲ್ಲಿ 2 ಪಟ್ಟಣ ಪಂಚಾಯತ ಸೇರಿಕೊಂಡಿದೆ, ಕುಮಟಾ-8 ಭಟ್ಕಳ-20 ಹಾಗೂ ಮುಗ್ವಾ ಗ್ರಾಮ ಪಂಚಾಯತ ಮಾತ್ರ ಎರಡು ಕ್ಷೇತ್ರದ ವ್ಯಾಪ್ತಿಗೆ ಹೋಂದಿಕೊAಡಿದ್ದು ಕುಮಟಾ ಕ್ಷೇತ್ರ ವ್ಯಾಪ್ತಿಗೆ ಹೊನ್ನಾವರ ಪಟ್ಟಣ ಪಂಚಾಯತ ಮತ್ತು ಭಟ್ಕಳ ಕ್ಷೇತ್ರ ವ್ಯಾಪ್ತಿಗೆ ಮಂಕಿ ಪಟ್ಟಣ ಪಂಚಾಯತ ಸೇರಿದೆ.

ತಾಲೂಕಿನಲ್ಲಿ ಭಟ್ಕಳ-ಹೊನ್ನಾವರ ವಿಧಾನ ಸಭಾ ಕ್ಷೇತ್ರದಲ್ಲಿ 108 ಮತಗಟ್ಟೆಗಳಲ್ಲಿ 44690 ಪುರುಷ ಮತದಾರರು, 43134 ಮಹಿಳಾ ಮತದಾರರು ಸೇರಿದಂತೆ ಒಟ್ಟೂ 87824 ಮತದಾರರಿದ್ದಾರೆ. ಕುಮಟಾ ಕ್ಷೇತ್ರಕ್ಕೆ ಸಂಭAಧಿಸಿ ಹೊನ್ನಾವರ ತಾಲೂಕಿನಲ್ಲಿ 64 ಮತಗಟ್ಟೆಗಳಿದ್ದು, 27349 ಪುರುಷರು, 27871 ಮಹಿಳೆಯರು ಹಾಗೂ ಇತರೆ 3 ಸೇರಿದಂತೆ ಒಟ್ಟೂ 55223 ಮತದಾರರಿದ್ದಾರೆ. ಭಟ್ಕಳ-ಹೊನ್ನಾವರ ಸೇರಿ ಒಟ್ಟೂ 172 ಮತಗಟ್ಟೆಗಳಿದ್ದು 14,6047 ಮತದಾರರು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ. ಭಟ್ಕಳ ಕ್ಷೇತ್ರದಲ್ಲಿ ಕಾಂಗ್ರೇಸ್ ಬಿಜೆಪಿ ಜೆಡಿಎಸ್ ಸೇರಿದಂತೆ 9 ಅಭ್ಯರ್ಥಿಗಳು ಕಣದಲ್ಲಿದ್ದು ಕ್ಷೇತ್ರದಲ್ಲಿ ಕಾಂಗ್ರೇಸ್ ಮತ್ತು ಬಿಜೆಪಿ ನಡುವೆ ನೇರ ನೇರಾ ಹಣಾಹಣಿ ಏರ್ಪಟ್ಟಿದೆ.
ಹಡಿನಬಾಳ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಕಾಂಗ್ರೇಸ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದು ಹಲ್ಲೆಯು ನಡೆದಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಕುಮಟಾ ಕ್ಷೇತ್ರದಲ್ಲಿ 9 ಅಭ್ಯರ್ಥಿಗಳು ಕಣದಲ್ಲಿದ್ದು, ಕಾಂಗ್ರೇಸ್ ಬಿಜೆಪಿ ಜೆಡಿಎಸ್ ಆರಂಭದಲ್ಲಿ ತ್ರಿಕೋನ ಸ್ಪರ್ಧೆ ಕಂಡುಬAದರೂ, ಅಂತಿಮವಾಗಿ ಬಿಜೆಪಿ ಮತ್ತು ಜೆಡಿಎಸ್ ನಡುವೆ ನೇರ ಪೈಪೋಟಿ ಏರ್ಪಟ್ಟಿದೆ. ಇನ್ನು ಹೊನ್ನಾವರ ತಾಲೂಕಿನಾದ್ಯಂತ ಶಾಂತಿಯುತವಾಗಿ ಮತದಾನ ನಡೆದಿದ್ದು, ಎಲ್ಲಿಯೂ ಅಹಿತಕರ ಘಟನೆ ನಡೆದ ಬಗ್ಗೆ ವರದಿಯಾಗಿಲ್ಲ.
ಹೊಸಕುಳಿ ಗ್ರಾ.ಪಂ. ವ್ಯಾಪ್ತಿಯ ಸಂತೇಗುಳಿ 190 ವಾರ್ಡನಲ್ಲಿ ಮುರುಳಿದರ ಹೆಗಡೆ ಹಿರೇಮಕ್ಕಿ ಇವರು ಮತದಾನ ಮಾಡಲು ಆಗಮಿಸಿದಾಗ ಚುನಾವಣಾಧಿಕಾರಿಗಳ ಎಡವಟ್ಟಿನಿಂದ ಸಮಸ್ಯೆ ಆಗಿರುದು ಗಮನಕ್ಕೆ ಬಂದಿದೆ. ಮತದಾನ ಮಾಡುವ ಮೂದಲೇ ದಾಖಲೆಯ ಪತ್ರದಲ್ಲಿ ಮತದಾನವಾಗಿದೆ ಎನ್ನುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಈ ಬಗ್ಗೆ ವಿವಿಧ ಪಕ್ಷದ ಏಜೆಂಟರು ಪಿ.ಆರ್.ಓ ಇವರಿಗೆ ಮನವಿ ಸಲ್ಲಿಸುವ ಮೂಲಕ ಪ್ರಕರಣ ಸುಖ್ಯಾಂತ ಕಂಡಿದ್ದು, ಅಧಿಕಾರಿಗಳು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಸ್ಥಳದಲ್ಲಿ ವಾತವರಣ ತಿಳಿಗೊಳಿಸಿದರು. ಸಿಪಿಐ ಮಂಜುನಾಥ ಇ.ಓ ಇವರು ಸ್ಥಳದಲ್ಲಿ ಇದ್ದು ಅಧಿಕಾರಿಗಳು ಹಾಗೂ ಸಾರ್ವಜನಿಕರ ನಡುವಿನ ಗೊಂದಲ ನಿವಾರಿಸಿದರು

error: