March 15, 2025

Bhavana Tv

Its Your Channel

ಶಾಲಾ ಪ್ರಾರಂಭೋತ್ಸವ ಮತ್ತು ಬೇಸಿಗೆ ಶಿಬಿರಕ್ಕೆ ಚಾಲನೆ

ದಿನಾಂಕ 01/06/2023 ಗುರುವಾರದಂದುಎ0.ಪಿ.ಇ. ಸೊಸೈಟಿಯ ಕೇಂದ್ರೀಯ ವಿದ್ಯಾಲಯದಲ್ಲಿ ಶಾಲಾ ಪ್ರಾರಂಭೋತ್ಸವ ಅದ್ಧೂರಿಯಾಗಿ ನಡೆಯಿತು.ಬೆಳಗಿನ ಪ್ರಾರ್ಥನೆಯ ಸಮಯದಲ್ಲಿ ಎಲ್ಲಾ ವಿದ್ಯಾರ್ಥಿಗಳನ್ನು ಪ್ರಾಂಶುಪಾಲರಾದ ಶ್ರೀಮತಿ ಕಾಂತಿ ಭಟ್ಟ ಈ ಶೈಕ್ಷಣಿಕ ವರ್ಷಕ್ಕೆ ಸ್ವಾಗತಿಸಿದರು. ಶಾಲಾ ರೀತಿ ನೀತಿಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿ ನಂತರ ಸಿಹಿ ವಿತರಿಸಲಾಯಿತು.
ಇದೇ ದಿನ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ಜಿಲ್ಲಾ ಸಂಸ್ಥೆ ಕಾರವಾರ, ಸ್ಥಳೀಯ ಸಂಸ್ಥೆ ಹೊನ್ನಾವರ ಮತ್ತು ಎಂ.ಪಿ.ಇ.ಸೊಸೈಟಿ ಕೇಂದ್ರೀಯ ವಿದ್ಯಾಲಯ ಹೊನ್ನಾವರ ಇವರ ಸಹಯೋಗದಲ್ಲಿ 3 ದಿನಗಳ ಬೇಸಿಗೆ ಶಿಬಿರ ಉದ್ಘಾಟನೆಗೊಂಡಿತು. ವಿದ್ಯಾರ್ಥಿಗಳು ಸ್ಕೌಟ್ಸ್–ಗೈಡ್ಸ್ ಧ್ಯೇಯೋದ್ದೇಶಗಳನ್ನು ಅಳವಡಿಸಿಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕೆಂದು ಕಾರ್ಯಕ್ರಮದ ಮುಖ್ಯ ಅತಿಥಿಗಳಾದ, ಜಿಲ್ಲಾ ಮುಖ್ಯಆಯುಕ್ತರಾದ ಡಾ.ಜಿ.ಜಿ.ಸಭಾಹಿತ ಮಾತನಾಡಿದರು.
ಪಠ್ಯಕ್ರಮದ ಜೊತೆಗೆ ಸ್ಕೌಟ್ಸ್-ಗೈಡ್ಸ ನಲ್ಲಿ ರಾಜ್ಯ ರಾಷ್ಟç ಪುರಸ್ಕಾರ ಪಡೆದು ಭವಿಷ್ಯದಲ್ಲಿ ಸ್ಪಧಾತ್ಮಕ ಪರೀಕ್ಷೆಗಳಿಗೆ ಅನುಕೂಲ ಮಾಡಿಕೊಳ್ಳಿ ಎಂದು ಕಾರ್ಯಕ್ರಮದ ಉದ್ಘಾಟಕರು ಮತ್ತು ಸಭಾಧ್ಯಕ್ಷರಾದ ಶ್ರೀ ಎಸ್.ಎಂ.ಭಟ್ಟರವರು ಮಾತನಾಡಿದರು. ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಕರಿಸಿದ್ದಪ್ಪ ಟಿ. ಎ.ಎಸ್.ಓ.ಸಿ ಉಪಸ್ಥಿತರಿದ್ದರು.
ನಮ್ಮ ವಿದ್ಯಾ ಸಂಸ್ಥೆಯ ವಿಧ್ಯಾರ್ಥಿಗಳ ಸಾಧನೆಯ ಬಗ್ಗೆ ನಮಗೆ ಹೆಮ್ಮೆ ಇದೆ. ಈ ವರ್ಷಕೂಡಾ ಆಸಕ್ತ ವಿದ್ಯಾರ್ಥಿಗಳು ಸ್ಕೌಟ್ಸ್ ಮತ್ತುಗೈಡ್ಸ್ಘಟಕಕ್ಕೆ ಹೆಸರು ನೊಂದಾಯಿಸಿಕೊಳ್ಳಬಹುದೆ0ದುಪ್ರಾಚಾರ್ಯರಾದ ಶ್ರೀಮತಿ ಕಾಂತಿ ಭಟ್ಟ ಮಾತನಾಡಿದರು.ಶಾಲೆಯ ಸ್ಕೌಟ್ಸ್ ಶಿಕ್ಷಕ ಪ್ರತಿನಿಧಿಯಾದ ಶ್ರೀ ಸುಜಯ್ ಭಟ್ಟಉಪಸ್ಥಿತರಿದ್ದರು.ಗೈಡ್ಸ್ ಶಿಕ್ಷಕಿ ಶ್ರೀಮತಿ ವನಿತಾ ನಾಯ್ಕಎಲ್ಲರನ್ನು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

error: