ಹೊನ್ನಾವರ ; ಎಂ. ಪಿ. ಇ. ಸೊಸೈಟಿಯ ಎಸ್. ಡಿ. ಎಂ. ಪದವಿ ಕಾಲೇಜಿನಲ್ಲಿ 29-01-1992 ರಿಂದ 31-08-2017 ರವರೆಗೆಇತಿಹಾಸ ವಿಭಾಗದ ಪ್ರಾಧ್ಯಾಪಕರಾಗಿ, ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ ಪ್ರೊ. ಪಿ. ಡಿ. ನಾಯ್ಕರ ನೆನಪಿಗಾಗಿ ಅವರ ಮಡದಿ ಡಾ.ವಾಹಿನಿ ನಾಯ್ಕ ಮತ್ತು ಮಕ್ಕಳು ಒಂದು ಲಕ್ಷರೂಪಾಯಿ ಶಾಶ್ವರ ಠೇವಣಿಯನ್ನು ಇಟ್ಟು, ಅದರ ಚೆಕ್ನ್ನು ಪ್ರಾಚಾರ್ಯರಾದ ಡಾ. ವಿಜಯಲಕ್ಷಿö್ಮ ಎಂ. ನಾಯ್ಕಇವರಿಗೆ ಹಸ್ತಾಂತರಿಸಿದರು.
ಬಿ.ಎ. ವಿಭಾಗದಲ್ಲಿ ವ್ಯಾಸಂಗ ಮಾಡುವಒಂದರಿ0ದ ನಾಲ್ಕನೇ ಸೆಮಿಸ್ಟರ್ವರೆಗಿನಎಲ್ಲ ಪರೀಕ್ಷೆಗಳಲ್ಲಿ ಇತಿಹಾಸ ವಿಷಯದಲ್ಲಿ ಗರಿಷ್ಠ ಅಂಕ ಗಳಿಸುವ ಇಬ್ಬರು ವಿದ್ಯಾರ್ಥಿಗಳಿಗೆ ಈ ಠೇವಣಿಯ ಬಡ್ಡಿಯ ಹಣ ಪ್ರತಿವರ್ಷ ದೊರೆಯಲಿದ್ದು, ಪ್ರತಿಭಾವಂತ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಶಾಶ್ವತವಾಗಿ ಸಹಕಾರಿಯಾಗಲಿದೆ.
ಇದೇ ಸಂದರ್ಭದಲ್ಲಿ ಪ್ರೊ. ಪಿ. ಡಿ. ನಾಯ್ಕರ ಸಂಗ್ರಹದಲ್ಲಿದ್ದ ಅಪರೂಪದ ಇತಿಹಾಸದ ಪುಸ್ತಕಗಳನ್ನು ಡಾ. ವಾಹಿನಿ ನಾಯ್ಕ ಕಾಲೇಜಿನ ಗ್ರಂಥಾಲಯಕ್ಕೆ ಕೊಡುಗೆಯಾಗಿ ನೀಡಿದರು.
More Stories
ಜಿಲ್ಲಾ ಮಟ್ಟದ ರಾಮಕ್ಷತ್ರೀಯ ಸಮಾಜದ ಹೊನಲು ಬೆಳಕಿನ ಹಗ್ಗಜಗ್ಗಾಟ ಪಂದ್ಯಾವಳಿ
ಕನ್ನಡ ಕಾರ್ತಿಕ 2024ರ ಅನುದಿನ ಅನುಸ್ಪಂದನ
ಹಿಂದುಳಿದ ನಾಯಕ ಬಿಕೆ ಹರಿಪ್ರಸಾದ್ ಅವರ ಬಗ್ಗೆ ನಾಲಗೆ ಹರಿಬಿಟ್ಟ ಹರೀಶ್ ಪೂಂಜಾ ಸಾರ್ವಜನಿಕ ಜೀವನದಲ್ಲಿರಲು ಯೋಗ್ಯರಲ್ಲ :ಮಂಜುನಾಥ ನಾಯ್ಕ