May 3, 2024

Bhavana Tv

Its Your Channel

ಹೊನ್ನಾವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವನಮಹೊತ್ಸವ

ಹೊನ್ನಾವರ ; ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅರಣ್ಯ ಇಲಾಖೆ ಸಹಯೋಗದಲ್ಲಿ ವನಮಹೊತ್ಸವ ಕಾರ್ಯಕ್ರಮಕ್ಕೆ ಶಾಸಕ ದಿನಕರ ಶೆಟ್ಟಿ ಚಾಲನೆ ನೀಡಿದರು.
ನಂತರ ಮಾತನಾಡಿ ನಮ್ಮ ಸುತ್ತಮುತ್ತಲು ಈಗ ಇರುವ ಸುಂದರ ಪರಿಸರ ಮುಂದೆಯು ಇರಲು ಅರಣ್ಯ ಇಲಾಖೆಯ ಜೊತೆ ನಾವೆಲ್ಲರು ಕೈ ಜೋಡಿಸಬೇಕು. ಗಿಡ ನೆಡುವುದಕ್ಕಿಂತ ಅದನ್ನು ಉಳಿಸಿ ಬೆಳಿಸಿದರೆ ಮಾತ್ರ ವನಮಹೊತ್ಸವ ಕಾರ್ಯಕ್ರಮ ನೈಜ ಯಶಸ್ಸು ಕಾಣಲಿದೆ ಆ ನಿಟ್ಟಿನಲ್ಲಿ ಅಧಿಕಾರಿಗಳು ವಿದ್ಯಾರ್ಥಿಗಳು ವಿಶೇಷ ಮುತವರ್ಜಿ ವಹಿಸಬೇಕಿದೆ. ಈ ಕಾಲೇಜಿನ ಕಟ್ಟಡ ನಿರ್ಮಾಣಕ್ಕೆ ಅರಣ್ಯ ಇಲಾಖೆ ಜಾಗ ನೀಡುವ ಮೂಲಕ ಶೈಕ್ಷಣಿಕ ಕಾಳಜಿ ಮೆರೆದಿತ್ತು. ಶಾಸಕ ಅವಧಿಯ ಪ್ರಥಮ ಅವಧಿಯಲ್ಲಿ ಕಟ್ಟಡ ಮಂಜೂರಾತಿ, ಎರಡನೆ ಅವಧಿಯಲ್ಲಿ 8 ಕೋಟಿ ವೆಚ್ಚದ ಕಟ್ಟಡ ನಿರ್ಮಾಣ ಮಾಡುವ ಮೂಲಕ ಎಲ್ಲಾ ತರಗತಿಯನ್ನು ಒಂದೆ ಕಡೆ ಆಗುವಂತೆ ನೋಡಿಕೊಂಡಿದ್ದೇನೆ. ಕಾಲೇಜಿನ ವಿದ್ಯಾರ್ಥಿಗಳಿಗೆ ಅಗತ್ಯವಿರುವ ಗಿಡಗಳನ್ನು ಇಲಾಖೆ ಉಚಿತವಾಗಿ ನೀಡಲಿದೆ ಎಂದರು.

ಡಿ.ಎಫ್.ಓ ರವಿಶಂಕರ್ ಸಿ ಮಾತನಾಡಿ ದೇಹಕ್ಕೆ ಯೋಗದಂತೆ ಪರಿಸರದ ಸಮತೋಲನಕ್ಕೆ ಗಿಡಗಳು ಪ್ರಮುಖ ಪಾತ್ರ ವಹಿಸಲಿದೆ. ರಾಜ್ಯದಲ್ಲಿ 5 ಕೋಟಿ ಗಿಡಗಳನ್ನು ನೆಡುವ ಗುರಿಯನ್ನು ಇಟ್ಟು ಶಾಲಾ ಕಾಲೇಜಿನಲ್ಲಿ ಈ ಬಾರಿ ಹೆಚ್ಚಿನ ಗಿಡಗಳನ್ನು ನೆಡುವ ಮೂಲಕ ವಿದ್ಯಾರ್ಥಿಗಳಲ್ಲಿ ಪರಿಸರ ಜಾಗೃತಿ ಮೂಡಿಸುವ ಕಾರ್ಯ ನಡೆದಿದೆ. ಮರ ಕಡಿಯುದರಿಂದ ಪ್ಲಾಸ್ಟಿಕ್ ಬಳಕೆಯಿಂದ ಆಗುವ ದುಷ್ಪರಿಣಾಮವನ್ನು ನಾವೆಲ್ಲರು ಅರಿತು ಸಾರ್ವಜನಿಕ ಕಾಲೇಜು ಹಂತದ ವಿದ್ಯಾರ್ಥಿಗಳ ಶಿಸ್ತು ಮುಂದಿನ ಯಶಸ್ಸಿಗೆ ಕಾರಣವಾಗಲಿದೆ. ಶಿಕ್ಷಣದ ಜೊತೆ ಸಹಪಠ್ಯ ವಿಭಾಗದಲ್ಲಿ ಸಿಗುವ ಸೌಲಭ್ಯವನ್ನು ಬಳಸಿಕೊಂಡು ಜೀವನದ ಯಶಸ್ಸು ಪಡೆಯುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಅಂತರ ಕಾಲೇಜು ಮಟ್ಟದಲ್ಲಿ ಆಯೋಜಿಸಿದ ಕಬ್ಬಡ್ಡಿ ಪಂದ್ಯಾವಳಿಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯೆ ಶಿಲ್ಪ ಎಚ್.ಆರ್ ಮಾತನಾಡಿ ಅರಣ್ಯ ನಾಶ ಇಂದು ಆಗುತ್ತಿದ್ದು, ಅದನ್ನು ತಡೆಯಲು ವಿದ್ಯಾವಂತರಾದ ನಾವೆಲ್ಲರೂ ಪರಿಸರದ ಕುರಿತು ಜಾಗೃತಿ ಮೂಡಿಸುವ ಕಾರ್ಯವಾಗಬೇಕಿದೆ. ಕಾಲೇಜಿನಲ್ಲಿ ಇರುವ ಸೌಲಭ್ಯವನ್ನು ಬಳಿಸಿಕೊಂಡು ಶೈಕ್ಷಣಿಕ ಹಾಗೂ ಸಹಪಠ್ಯ ಚಟುವಟಿಕೆಯಲ್ಲಿ ಸಾಧನೆ ಮಾಡುವ ಮೂಲಕ ಕಾಲೇಜಿಗೆ ಕೀರ್ತಿ ತರುವ ಕಾರ್ಯ ಮಾಡುವಂತೆ ವಿದ್ಯಾರ್ಥಿಗಳಿಗೆ ಸೂಚಿಸಿದರು.
ವೇದಿಕೆಯಲ್ಲಿ ಎ.ಸಿ.ಎಫ್.ಸುದರ್ಶನ ಜಿ.ಕೆ., ಆರ.ಎಫ್.ಓ ವಿಕ್ರಂ ಆರ್.ಎಸ್, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಎಂ.ಎಸ್.ಹೆಗಡೆ ಕಣ್ಣಿ ಉಪಸ್ಥಿತರಿದ್ದರು.

error: