September 18, 2024

Bhavana Tv

Its Your Channel

ಅಳ್ಳಂಕಿ ಕಾಲೇಜಿನಲ್ಲಿ ಕಾಲೇಜು ಸಂಸತ್ತು ಉದ್ಘಾಟನೆ

ಹೊನ್ನಾವರ ತಾಲೂಕಿನ ಅಳ್ಳಂಕಿಯ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಕಾಲೇಜು ಸಂಸತ್ತು ಹಾಗೂ ಸಾಂಸ್ಕೃತಿಕ ಸಂಘದ ಉದ್ಘಾಟನೆ ನೆರವೇರಿಸಲಾಯಿತು.


ಕಾರ್ಯಕ್ರಮ ಉದ್ಘಾಟಿಸಿದ ಪಿ.ಡಿ.ಓ. ಶ್ರೀ ಉದಯ ಬಾಂದೇಕರ ಅವರು ” ಜನ ಮೆಚ್ಚುವ ಕಾರ್ಯ ಮಾಡುವ ಮೊದಲು ನಮ್ಮ ನಮ್ಮ ಮನ ಮೆಚ್ಚುವ ಕಾರ್ಯವನ್ನು ಪ್ರಾಮಾಣಿಕವಾಗಿ ಮಾಡಿದಲ್ಲಿ ಯಶಸ್ಸು ಖಂಡಿತ. ” ಎಂದು ಭಾವೀ ನಾಯಕರಾಗಲಿರುವ ವಿದ್ಯಾರ್ಥಿ ಪ್ರತಿನಿಧಿಗಳಿಗೆ ಕಿವಿಮಾತು ನುಡಿದರು. ಮುಖ್ಯ ಅತಿಥಿಗಳಾದ ಹೊನ್ನಾವರ ಕಾಲೇಜಿನ ಉಪನ್ಯಾಸಕ ಶ್ರೀ ದೇವರಾಜ ಕರ್ಕಿಯವರು ” ಪ್ರಜಾ ಪ್ರಭುತ್ವದ ರೂಪುರೇಷೆ, ಸಂಸತ್ತಿನ ಕಾರ್ಯವಿಧಾನ ಹಾಗೂ ಕಾಲೇಜಿನಲ್ಲಿ ಸಂಸತ್ತಿನ ಮಹತ್ವ “ದ ಕುರಿತು ವಿವರಿಸಿದರು.
ಇನ್ನೋರ್ವ ಅತಿಥಿ ಶ್ರೀ ಗಜಾನನ ಹೆಗಡೆಯವರು ” ವಿದ್ಯಾರ್ಥಿಗಳು ಜೀವನದುದ್ದಕ್ಕೂ ಸನ್ಮಾರ್ಗದಲ್ಲಿ ನಡೆಯುತ್ತೇವೆಂದು ಪಣತೊಟ್ಟು ಕಾರ್ಯಪ್ರವೃತ್ತರಾಗಬೇಕು ” ಎಂದು ಹೇಳಿದರು. ಕಾಲೇಜು ಸಂಸತ್ತಿಗೆ ಆಯ್ಕೆಯಾದ ನೂತನ ವಿದ್ಯಾರ್ಥಿ ಪ್ರತಿನಿಧಿಗಲ್ಲಿ ಧನ್ಯಾ ಹೆಗಡೆ, ಅಶ್ವಿನ್ ನಾಯ್ಕ ಇವರು ತಮ್ಮ ಜವಾಬ್ದಾರಿ ಕುರಿತ ಅನಿಸಿಕೆ ಹಂಚಿಕೊAಡರು. ಅನಂತರ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಗಣಿತದಲ್ಲಿ 100 ಕ್ಕೆ 100 ಅಂಕ ಪಡೆದ ವಿದ್ಯಾರ್ಥಿಗಳಿಗೆ ಗಣಿತ ಉಪನ್ಯಾಸಕರಾದ ಶ್ರೀ ಮಹೇಶ ಹೆಗಡೆಯವರು ಎರಡು ಸಾವಿರ ರೂಪಾಯಿ ನಗದು ಬಹುಮಾನ ನೀಡಿ ಪುರಸ್ಕರಿಸಿದರು. ಕಾಲೇಜಿನ ವಿಜ್ಞಾನ ವಿಭಾಗದ ಫಲಿತಾಂಶವು ನೂರಕ್ಕೆ ನೂರು ಆದುದಕ್ಕೆ ಆ ಎಲ್ಲಾ ವಿದ್ಯಾರ್ಥಿಗಳನ್ನೂ ಗೌರವಿಸಲಾಯಿತು. ಅಲ್ಲದೇ ಇತ್ತೀಚೆಗೆ ಜಿಲ್ಲೆಯ ಉತ್ತಮ ಪಿ.ಡಿ.ಓ. ಪುರಸ್ಕಾರ ಕ್ಕೆ ಪಾತ್ರರಾದ ಶ್ರೀ ಉದಯ ಬಾಂದೇಕರ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮ ದ ಅಧ್ಯಕ್ಷತೆ ವಹಿಸಿದ್ದ ಪ್ರಭಾರ ಪ್ರಾಚಾರ್ಯ ಶ್ರೀ ಹರೀಶ್ ಚಂದ್ರ ಮೇಸ್ತ ಅವರು ನಿಗದಿಪಡಿಸಿದ ಪಠ್ಯ ಓದುವುದಷ್ಟೇ ಶಿಕ್ಷಣವಲ್ಲ, ವಿದ್ಯಾರ್ಥಿಗಳು ಎಲ್ಲಾ ರಂಗದಲ್ಲೂ ತೊಡಗಿಸಿ ಕೊಂಡಾಗ ಮಾತ್ರ ಸಮಗ್ರ ಶಿಕ್ಷಣ ಪಡೆದಂತಾಗುತ್ತದೆ. ” ಎಂದರು. ಉಪನ್ಯಾಸಕ ಶ್ರೀ ದೇವಿದಾಸ ಕುಮಟಾಕರ ಸ್ವಾಗತಿಸಿದರು. ಶ್ರೀ ಭಾರ್ಗವ ಭಟ್ ಪ್ರತಿಜ್ಞಾ ವಿಧಿ ಬೋಧಿಸಿದರು. ಶ್ರೀಮತಿ ಪದ್ಮಾವತಿ ನಾಯ್ಕ ವಂದಿಸಿದರು. ಸಾಂಸ್ಕೃತಿಕ ಸಂಚಾಲಕ ಶ್ರೀ ಮಹೇಶ ಹೆಗಡೆ ಕಾರ್ಯಕ್ರಮವನ್ನು ನಿರೂಪಿಸಿದರು.

error: