
ಹೊನ್ನಾವರದ ; ಪ್ರತಿಷ್ಠಿತ ವಿದ್ಯಾಸಂಸ್ಥೆಯಾದ ಎಸ್.ಡಿ.ಎಂ. ಪದವಿ ಕಾಲೇಜಿನ ನೂತನ ಪ್ರಾಚಾರ್ಯರಾಗಿ ಡಾ. ಪಿ. ಎಂ. ಹೊನ್ನಾವರ ಅವರು ಅಧಿಕಾರ ಸ್ವೀಕರಿಸಿದರು.
ಡಾ. ಪ್ರೇಮಾನಂದ ಹೊನ್ನಾವರ ಅವರು ಹೊನ್ನಾವರ ತಾಲೂಕಿನ ಬಾಂದೇಹಳ್ಳದ ನಿವಾಸಿಯಾಗಿದ್ದು, ಎಸ್.ಡಿ.ಎಂ.ಕಾಲೇಜಿನ ಪೂರ್ವ ವಿದ್ಯಾರ್ಥಿಯಾಗಿದ್ದು, 1986 ರಿಂದ ಕಾಲೇಜಿನ ರಸಾಯನಶಾಸ್ತç ವಿಭಾಗದಲ್ಲಿ ಉಪನ್ಯಾಸಕರಾಗಿ ಸೇವೆಯನ್ನು ಆರಂಭಿಸಿದರು. ನಂತರ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿರುವ ಇವರು ಎಂ.ಎಸ್ಸಿ. ಸ್ನಾತಕೋತ್ತರ ವಿಭಾಗದ ಸಂಯೋಜಕರಾಗಿ ಕಳೆದ ಸಾಲಿನಲ್ಲಿ ಐ.ಕ್ಯೂ..ಎ.ಸಿ. ಯ ಸಂಯೋಜಕರಾಗಿ ವಿವಿಧ ಹುದ್ದೆಗಳಲ್ಲಿ ತೃಪ್ತಿಕರವಾಗಿ ಸೇವೆ ಸಲ್ಲಿಸಿದ್ದಾರೆ.
2021 ರಲ್ಲಿ ತುಮಕೂರು ವಿ.ವಿ.ಯಿಂದ ರಸಾಯನಶಾಸ್ತç ವಿಷಯದಲ್ಲಿ ಪಿ.ಎಚ್.ಡಿ.ಪದವಿಯನ್ನು ಪಡೆದಿರುವ ಇವರನ್ನು ಸೇವಾ ಹಿರಿತನದ ಆಧಾರದ ಮೇಲೆ ಆಡಳಿತ ಮಂಡಳಿಯು ಪ್ರಾಚಾರ್ಯರನ್ನಾಗಿ ನೇಮಿಸಿದೆ. ಅವರು ಶನಿವಾರದಂದು ಅಧಿಕಾರ ಸ್ವೀಕರಿಸಿದರು.
ನೂತನ ಪ್ರಾಚಾರ್ಯರಿಗೆ ಆಡಳಿತ ಮಂಡಳಿ ಹಾಗೂ ಕಾಲೇಜಿನ ಬೋಧಕ-ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಅಭಿನಂದನೆ ಸಲ್ಲಿಸಿರುತ್ತಾರೆ.
More Stories
ಜಿಲ್ಲಾ ಮಟ್ಟದ ರಾಮಕ್ಷತ್ರೀಯ ಸಮಾಜದ ಹೊನಲು ಬೆಳಕಿನ ಹಗ್ಗಜಗ್ಗಾಟ ಪಂದ್ಯಾವಳಿ
ಕನ್ನಡ ಕಾರ್ತಿಕ 2024ರ ಅನುದಿನ ಅನುಸ್ಪಂದನ
ಹಿಂದುಳಿದ ನಾಯಕ ಬಿಕೆ ಹರಿಪ್ರಸಾದ್ ಅವರ ಬಗ್ಗೆ ನಾಲಗೆ ಹರಿಬಿಟ್ಟ ಹರೀಶ್ ಪೂಂಜಾ ಸಾರ್ವಜನಿಕ ಜೀವನದಲ್ಲಿರಲು ಯೋಗ್ಯರಲ್ಲ :ಮಂಜುನಾಥ ನಾಯ್ಕ