April 28, 2024

Bhavana Tv

Its Your Channel

ಕೆಲಸ ಮಾಡಲು ಯೊಗ್ಯತೆ ಇಲ್ಲದವರು ಇಂದಿರಾ ಕ್ಯಾಂಟೀನ್ ಆರಂಭಿಸಲು ಸಾಧ್ಯವೇ ?- ಸಚಿವ ಮಂಕಾಳ್ ವೈದ್ಯ ಗಂಭೀರ ಆರೋಪ

ಹೊನ್ನಾವರ; ಈ ಹಿಂದಿನ ಕಾಂಗ್ರೇಸ್ ಸರ್ಕಾರದ ಅವಧಿಯಲ್ಲಿ ಆರಂಭವಾಗಿದ್ದ ಇಂದಿರಾ ಕ್ಯಾಂಟೀನ್ ಪಟ್ಟಣದಲ್ಲಿ ನಿರ್ಮಾಣವಾಗದೇ, ಸಾಮಗ್ರಿಗಳು ಪಟ್ಟಣ ಪಂಚಾಯತಿ ಆವರಣದಲ್ಲಿ ತುಕ್ಕು ಹಿಡಿಯುತ್ತಿರುದ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಪಟ್ಟಣದಲ್ಲಿ ಸಚೀವ ಮಂಕಾಳ ವೈದ್ಯ ಪ್ರತಿಕ್ರಿಯಿಸಿ ಇಂದಿರಾ ಕ್ಯಾಂಟಿನ್ ಮಂಜೂರಿ ಆಗಿದೆ, ಹಣ ಇದೆ, ಅದನ್ನು ಪ್ರಾರಂಭ ಮಾಡುವ ಯೋಗ್ಯತೆ ಇಲ್ಲದ ರಾಜಕಾರಣಿಗಳು ಇದ್ದರೆ ಹೇಗೆ ನಿರ್ಮಾಣ ಆಗಲು ಸಾಧ್ಯ. ಅದನ್ನು ತಕ್ಷಣ ಪ್ರಾರಂಭ ಮಾಡಿ ಸಾಮಾನ್ಯ ಜನರಿಗೆ, ಬಡವರಿಗೆ ಅದರ ಪ್ರಯೋಜನ ಸಿಗುವ ಹಾಗೆ ಅವರಿಗೆ ತಲುಪುವ ವ್ಯವಸ್ಥೆ ಮಾಡುತ್ತೇನೆ. ನಾವು ಬಡವರ ಪರವಾಗಿ ಐದು ರೂಪಾಯಿಗೆ ತಿಂಡಿ, ಹತ್ತು ರೂಪಾಯಿಗೆ ಊಟ ಕೊಡುತ್ತೇವೆ. ಯಾರೋ ಬೇರೆ ಬೇರೆ ಊರಿನಿಂದ, ಹಳ್ಳಿಯಿಂದ ಪಟ್ಟಣಕ್ಕೆ ಬಂದು ಒಂದು ಊಟ ಮಾಡ್ಕೊಂಡು ಸಂಜೆವರೆಗೆ ಅವರ ಕೆಲಸ ಮಾಡಿಕೊಂಡು ಹೋಗಬೇಕು ಅನ್ನುವಂತ ಉದ್ದೇಶದಿಂದ ಒಳ್ಳೆ ಯೋಜನೆ ನಮ್ಮ ಸರ್ಕಾರ ಇದ್ದಾಗ ಅದನ್ನ ಜಾರಿಗೆ ತಂದಿತ್ತು.
ಹೊನ್ನಾವರದಲ್ಲಿ ಎಲ್ಲಿ ಮಾಡಬೇಕು ಎಂದು ಸ್ಥಳ ಹುಡುಕಲು ಆಗಿಲಿಲ್ಲ. ಎಲ್ಲಾದರು ಮಧ್ಯ ಸ್ಥಳ ಗುರುತಿಸಿ ಆಸ್ಪತ್ರೆ, ತಹಶೀಲ್ದಾರ್ ಕಚೇರಿ, ಅಥವಾ ಬಸ್ ನಿಲ್ದಾಣ ಹತ್ತಿರ ಮಾಡಿದರೆ, ತಾಲೂಕಿನ ಎಲ್ಲ ಹಳ್ಳಿಗಳಿಂದ ಬರುವ ಎಲ್ಲರಿಗು ಅನುಕೂಲವಾಗುತ್ತದೆ ಎಲ್ಲಿ ಮಾಡಬೇಕು ಹುಡುಕಿ ಜಾಗ ನೋಡಿ, ಅಲ್ಲೇ ಮಾಡಲಿಕ್ಕೆ ನಾವು ಸಿದ್ದರಿದ್ದೇವೆ.
ಇನ್ನೂ ಪಟ್ಟಣದ ಶೆಟ್ಟಿ ಕೆರೆಯಲ್ಲಿ ಯುವಬ್ರೀಗೆಡನವರು ಕಸ ತೆಗೆದು ಸ್ವಚ್ಛ ಗೊಳಿಸಿದರು. ಮತ್ತೆ ಕಸ ಹಾಕಿ, ಕಸ ತುಂಬುತ್ತಿದ್ದಾರೆ ಎಂದಾಗ ಈಗ ನೀವು ನನ್ನ ಗಮನಕ್ಕೆ ತಂದಿದ್ದೀರಿ, ಮಳೆಗಾಲ ಪ್ರಾರಂಭ ಆಗಿದೆ, ಮಳೆಗಾಲ ಮುಗಿದನಂತರ ಅದನ್ನು ಸರಿಪಡಿಸಿ ಅಲ್ಲಿ ಕಸ ಹಾಕದೆ ಇರುವ ರೀತಿ ಕಾಂಪೌAಡ್ ನಿರ್ಮಾಣ ಮಾಡಿ, ಯಾವ ರೀತಿ ಅದನ್ನ ರಕ್ಷಣೆ ಮಾಡಬೇಕು ಎಂದು ಅಧಿಕಾರಿಗಳೊಂದಿಗೆ ಚರ್ಚೆ ನಡೆಸುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಮಂಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋವಿಂದ ನಾಯ್ಕ, ಮಾಜಿ ಜಿ. ಪಂ. ಸದಸ್ಯ ಕೃಷ್ಣ ಗೌಡ, ಭಾರತ್ ಸೇವಾದಳದ ಜಿಲ್ಲಾಧ್ಯಕ್ಷ ಯೋಗೀಶ್ ರಾಯ್ಕರ್, ಮಾಜಿ ತಾ.ಪಂ. ಸದಸ್ಯ ಲೋಕೇಶ ನಾಯ್ಕ, ಲಕ್ಷ್ಮೀ ಗೊಂಡ ಮತ್ತಿತರರು ಇದ್ದರು.

error: