March 16, 2025

Bhavana Tv

Its Your Channel

ರೋಟರಿ ಕ್ಲಬ್ ಆಶ್ರಯದಲ್ಲಿ ವಿಶ್ವ ವೈದ್ಯರ ದಿನಾಚರಣೆ

ಹೊನ್ನಾವರ: ರೋಟರಿ ಕ್ಲಬ್ ಆಶ್ರಯದಲ್ಲಿ ವಿಶ್ವ ವೈದ್ಯರ ದಿನಾಚರಣೆಯ ಅಂಗವಾಗಿ ತಾಲೂಕಿನ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರನ್ನು ಅಭಿನಂದಿಸಲಾಯಿತು.
ಕಾರ್ಯಕ್ರಮದ ಇವೇಂಟ್ ಚೇರ್ಮೆನ್ ಆಗಿ ಕಾರ್ಯ ನಿರ್ವಹಿಸಿದ ಡಾ. ಆಶಿಕ್ ಹೆಗ್ಡೆಯವರು ಮಾತನಾಡಿ ನಮಗೆಲ್ಲರಿಗು ಆರೋಗ್ಯ ಕ್ಷೇತ್ರದಲ್ಲಿ ಸೇವೆ ಮಾಡಲು ದೇವರು ಅವಕಾಶ ಕೊಟ್ಟಿದ್ದಾರೆ. ವೈದ್ಯರ ದೀನಾಚರಣೆ ಆದರು ಒಂದು ದಿನ ರಜೆ ಇಲ್ಲದೆ ದಿನದ 24 ಗಂಟೆ ರೋಗಿಗಳ ಸೇವೆಗಾಗಿ ಮೀಸಲಿಡುತ್ತಿದ್ದೇವೆ. ಇದನ್ನು ಗುರುತಿಸಿ ರೋಟರಿ ಪರಿವಾರದವರು ತಮಗಾಗಿ ಸಮಯವನ್ನು ಮೀಸಲಿಟ್ಟು ವೈದ್ಯರಿಗೆ ಸನ್ಮಾನಿಸಿದಕ್ಕೆ ಸಂತಸವನ್ನು ವ್ಯಕ್ತಪಡಿಸಿದರು.
ರೋಟರಿ ಅಧ್ಯಕ್ಷರಾದ ದೀಪಕ ಲೋಪಿಸ್ ಮಾತನಾಡಿ ನೂತನವಾಗಿ ಅಧಿಕಾರ ವಹಿಸಿಕೊಳ್ಳುತ್ತಿರುವ ಸಮಯದಲ್ಲಿ ಮೋದಲನೇ ಕಾರ್ಯಕ್ರಮವಾಗಿ ವೈದ್ಯರ ದಿನಾಚರಣೆಯನ್ನು ಆಚರಿಸುವ ಅವಕಾಶ ದೊರೆತಿದ್ದಕ್ಕೆ ಸಂತಸ ವ್ಯಕ್ತಪಡಿಸಿದರು. ರಾಜೇಶ ನಾಯ್ಕ ವಂದಿಸಿ ದಿನೇಶ ಕಾಮತ ಕಾರ್ಯಕ್ರಮವನ್ನು ನಿರುಪಿಸಿದರು.
ಕಾರ್ಯಕ್ರಮದಲ್ಲಿ ರೋಟರಿ ಸದಸ್ಯರಾದ ಸ್ಟೀಫನ್ ರೊಡ್ರಿಗೀಸ್, ಗಣೇಶ ಹೆಬ್ಬಾರ, ಸತ್ಯ ಜಾವಗಲ್, ಸತೀಶ ನಾಯ್ಕ, ಜಿ.ಪಿ. ಹೆಗಡೆ, ಸುರ್ಯಕಾಂತ ಸಾರಂಗ, ನಸ್ರುಲ್ಲಾ ಸಿದ್ದಿ, ನಾರಾಯಾಣ ಯಾಜಿ,ಹೆನ್ರಿ ಲೀಮಾ ಉಪಸ್ಥಿತರಿದ್ದರು

error: