
ಹೊನ್ನಾವರ ; ಭಟ್ಕಳ ಶ್ರೀ ಗುರು ಸುಧೀಂದ್ರ ಪದವಿ ಕಾಲೇಜಿನಲ್ಲಿ ನಡೆದಉತ್ತರಕನ್ನಡಜಿಲ್ಲಾ ಮಟ್ಟದ ‘ಸೃಷ್ಟಿ -ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಹೊನ್ನಾವರ ಎಸ್.ಡಿ.ಎಂ. ಪದವಿ ಕಾಲೇಜಿನ ವಿದ್ಯಾರ್ಥಿಗಳು ‘ಚಾಂಪಿಯನ್’ ಆಗಿ ಹೊರಹೊಮ್ಮಿದರು. ಜಿಲ್ಲೆಯ 20 ಪದವಿ ಕಾಲೇಜುಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದವು. ಇದರಲ್ಲಿ ಎಸ್.ಡಿ.ಎಂ. ಪದವಿ ವಿದ್ಯಾರ್ಥಿಗಳಾದ ಕುಮಾರಿ ನಿಹಾರಿಕಾ ಭಟ್ಟ ಸಂಗೀತದಲ್ಲಿ ಪ್ರಥಮ ಸ್ಥಾನ, ಪ್ರಶಾಂತ ಗೌಡ ಚಿತ್ರಕಲೆಯಲ್ಲಿ ಪ್ರಥಮ, ಜಿ.ವಿ.ಪ್ರಸನ್ನ ಮತ್ತು ದರ್ಶನಗೌಡ ಕ್ವಿಜ್‌ನಲ್ಲಿ ಪ್ರಥಮ, ಮೆಕ್ವಿನ್‌ಜಾಯ್ ಸಂಗೀತದಲ್ಲಿ ದ್ವಿತೀಯ ಹಾಗೂ ಸಂದೀಪ ನಾಯ್ಕ ಮತ್ತು ಅಕ್ಷತಾ ಗೌಡ ಕ್ವಿಜ್ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆಯುವುದರೊಂದಿಗೆ ಚಾಂಪಿಯನ್ ಪ್ರಶಸ್ತಿ ಮುಡಿಗೇರಿಸಿಕೊಂಡರು. ಇವರ ಸಾಧನೆಗೆ ಸಂಸ್ಥೆಯ ಆಡಳಿತ ಮಂಡಳಿಯ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು, ಪ್ರಾಚಾರ್ಯರಾದಡಾ. ಪಿ. ಎಂ. ಹೊನ್ನಾವರ, ವಿದ್ಯಾರ್ಥಿ ಒಕ್ಕೂಟದ ಉಪಾಧ್ಯಕ್ಷರಾದ ಡಾ. ಡಿ. ಎಲ್. ಹೆಬ್ಬಾರ, ಸಮಸ್ತ ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಅಭಿನಂದನೆ ಸಲ್ಲಿಸರುತ್ತಾರೆ.
More Stories
ಜಿಲ್ಲಾ ಮಟ್ಟದ ರಾಮಕ್ಷತ್ರೀಯ ಸಮಾಜದ ಹೊನಲು ಬೆಳಕಿನ ಹಗ್ಗಜಗ್ಗಾಟ ಪಂದ್ಯಾವಳಿ
ಕನ್ನಡ ಕಾರ್ತಿಕ 2024ರ ಅನುದಿನ ಅನುಸ್ಪಂದನ
ಹಿಂದುಳಿದ ನಾಯಕ ಬಿಕೆ ಹರಿಪ್ರಸಾದ್ ಅವರ ಬಗ್ಗೆ ನಾಲಗೆ ಹರಿಬಿಟ್ಟ ಹರೀಶ್ ಪೂಂಜಾ ಸಾರ್ವಜನಿಕ ಜೀವನದಲ್ಲಿರಲು ಯೋಗ್ಯರಲ್ಲ :ಮಂಜುನಾಥ ನಾಯ್ಕ