May 8, 2024

Bhavana Tv

Its Your Channel

ಕಡಲ ತೀರದ ಮಕ್ಕಳ ಸಾಹಿತ್ಯ ಸುಗ್ಗಿಎಸ್.ಡಿ.ಎಂ.ಕಾಲೇಜಿನಲ್ಲಿ ಶನಿವಾರ ವಿಚಾರ ಸಂಕಿರಣ

ಹೊನ್ನಾವರ ; ಎಸ್.ಡಿ.ಎಂ. ಪದವಿ ಕಾಲೇಜಿನ ಕನ್ನಡ ಸಂಘ, ಅಭಿವನ, ಬೆಂಗಳೂರು ಹಾಗೂ ಮಕ್ಕಳ ಸಾಹಿತ್ಯಾಸಕ್ತರ ಬಳಗ ಧಾರವಾಡ ಇವುಗಳ ಸಂಯುಕ್ತ ಆಶ್ರಯದಲ್ಲಿ ‘ಮಕ್ಕಳ ಸಾಹಿತ್ಯ :ಉತ್ತರಕನ್ನಡದ ವಿಭಿನ್ನ ನಡೆ’ ಎಂಬ ವಿಚಾರ ಸಂಕಿರಣ, ಕಾವ್ಯ ಪ್ರಸ್ತುತಿ ಮತ್ತು ಪುಸ್ತಕ ಬಿಡುಗಡೆಕಾರ್ಯಕ್ರಮಜುಲೈ 8 ರಂದು ಶನಿವಾರಎಸ್.ಡಿ.ಎಂ. ಕಾಲೇಜಿನಆರ್.ಎಸ್. ಹೆಗಡೆ ಸಭಾಭವನದಲ್ಲಿ ನಡೆಯಲಿದೆ.
ಬೆಳಿಗ್ಗೆ 9.30 ರಿಂದ ಪ್ರಾರಂಭವಗುವ ಈ ವಿನೂತನಕಾರ್ಯಕ್ರಮದ ಸರ್ವಾಧ್ಯಕ್ಷತೆಯನ್ನು ಹಿರಿಯ ಕವಿ ಜಾನಪದ ವಿದ್ವಾಂಸಡಾ.ಎನ್. ಆರ್.ನಾಯಕ ವಹಿಸಲಿದ್ದಾರೆ.ಡಾ. ಆನಂದ ಪಾಟೀಲ ಧಾರವಾಡಇವರು ವಿನ್ಯಾಸ ನುಡಿಗಳನ್ನು ಆಡಲಿದ್ದಾರೆ.ಮುಖ್ಯ ಅತಿಥಿಗಳಾಗಿ ಪ್ರಸಿದ್ಧ ವೈದ್ಯರಾದಡಾ.ಆಶಿಕ್‌ಕುಮಾರ ಹೆಗ್ಡೆ ಹಾಗೂ ಎಂ. ಪಿ. ಇ. ಸೊಸೈಟಿಯಅಧ್ಯಕ್ಷರಾದ ಶ್ರೀ ಕೃಷ್ಣಮೂರ್ತಿ ಭಟ್ಟ ಶಿವಾನಿ ಇವರು ಪಾಲ್ಗೊಳ್ಳಲಿದ್ದಾರೆ.
ಶ್ರೀಮತಿ ಅಕ್ಷತಾಕೃಷ್ಣಮೂರ್ತಿಅವರ ಹಾಲಕ್ಕಿ ಹಾಡುಕೋಗಿಲೆ ಸುಕ್ರಿ ಬೊಮ್ಮಗೌಡ, ಡಾ.ಆನಂದ ಪಾಟೀಲರ‘ಅಪರೂಪದ ಮಕ್ಕಳ ಸಾಹಿತಿಎನ್. ಶ್ರೀನಿವಾಸ ಉಡುಪ’, ಡಾ.ಶಿವಲಿಂಗಪ್ಪ ಹಂದಿಹಾಳ್‌ಅವರು ಅನುವಾದಿಸಿರುವ ಮಿಲುತಿನ್‌ದ್ಯೂರಿಕೋವಿಕ್‌ಅವರ ಅವಳಿ, ತಮ್ಮಣ್ಣ ಬೀಗಾರ್‌ಅವರ ಹಸಿರಿನ ಕಟ್ಟು, ವಿಜಯಶ್ರೀ ಹಾಲಾಡಿಅವರ ‘ಸೂರಕ್ಕಿಗೇಟ್, ಡಾ.ಬಸು ಬೇವಿನಗಿಡದಅವರ ‘ಓಡಿಹೋದ ಹುಡುಗ’ (ಮೂರನೇ ಮುದ್ರಣ) ಕೃತಿಗಳನ್ನು ಸಾಹಿತಿಭಾಗೀರಥಿ ಹೆಗಡೆ ಲೋಕಾರ್ಪಣೆಗೊಳಿಸಲಿದ್ದಾರೆ.
ನಂತರದ ಮೊದಲನೇ ಗೋಷ್ಠಿಯಲ್ಲಿ ದಿನಕರದೇಸಾಯಿ: ಸಮಾಜಮುಖಿ ಮೊದಲ ಹೆಜ್ಜೆಗಳು ವಿಷಯದಕುರಿತು ನಾಗರಾಜ ಹೆಗಡೆ ಅಪಗಾಲ, ಆರ್. ವಿ. ಭಂಡಾರಿ: ಸಮಾಜಿಕ ನ್ಯಾಯದ ಕಾಳಜಿ ವಿಷಯದಕುರಿತುಕಿರಣ್ ಭಟ್ಟ, ಹೊನ್ನಾವರ, ಡಾ. ಎನ್. ಆರ್.ನಾಯಕ: ಸಮಾಜದ ವಿಸ್ತçತ ನೋಟ ವಿಷಯದಕುರಿತುಡಾ. ಶಿವಲಿಂಗಪ್ಪ ಹಂದಿಹಾಳ್, ತಮ್ಮಣ್ಣ ಬೀಗಾರ: ಮಲೆನಾಡಿನ ಬಾಲ್ಯದ ನೋಟಗಳು ವಿಷಯದಕುರಿತುಗಂಗಾಧರ ಕೊಳಗಿ ಅವರು ವಿಷಯ ಮಂಡಿಸಲಿದ್ದಾರೆ. 
ಮಧ್ಯಾಹ್ನ ನಡೆಯುವಎರಡನೇ ಗೋಷ್ಠಿಯಲ್ಲಿಗಣೇಶ ನಾಡೋರ: ಬಾಲ್ಯದ ನೋವಿನ ನೆಲೆಗಳು ವಿಷಯದಕುರಿತುಗುಂಡುರಾವ್‌ದೇಸಾಯಿ, ಮಸ್ಕಿ ಹಾಗೂ ‘ಉತ್ತರಕನ್ನಡದಆಯ್ದ ಹಿರಿಯರನೇಕರ ಮಕ್ಕಳ ಸಾಹಿತ್ಯ ಬೆ¼’ೆ’ಕುರಿತು ಪಿ. ಆರ್.ನಾಯ್ಕ ಹೊಳೆಗದ್ದೆ ವಿಷಯ ಮಂಡಿಸಲಿದ್ದಾರೆ.
ಆನAತರ ಮಕ್ಕಳ ಕಾವ್ಯಪರಂಪರೆಯ ಪ್ರಸ್ತುತಿಯಲ್ಲಿ ನಾಡಿನ ಹಿರಿಯ ಕವಿಗಳ ಕಾವ್ಯವಾಚನ ನಡೆಯಲಿದೆ.ಸಮಾರೋಪ ಸಮಾರಂಭದಲ್ಲಿಡಾ.ಎನ್. ಆರ್.ನಾಯಕ ಸರ್ವಾಧ್ಯಕ್ಷರ ನುಡಿಗಳನ್ನಾಡಲಿದ್ದಾರೆ.
ಇಡೀ ದಿನ ನಡೆಯುವ ಈ ವಿಶೇಷ ‘ಕಡಲ ತೀರದ ಮಕ್ಕಳ ಸಾಹಿತ್ಯ ಸುಗ್ಗಿ’ಕಾರ್ಯಕ್ರಮದಲ್ಲಿ ಸಾಹಿತ್ಯಾಸಕ್ತರು, ಮಕ್ಕಳ ಸಾಹಿತಿಗಳು, ಶಿಕ್ಷಕರು ಹಾಗೂ ಆಸಕ್ತರು ಪಾಲ್ಗೊಳ್ಳಬಹುದುಎಂದುಕಾಲೇಜಿನಕನ್ನಡ ವಿಭಾಗದ ಮುಖ್ಯಸ್ಥರಾದ ನಾಗರಾಜ ಹೆಗಡೆ ಅಪಗಾಲ ಸಂಘಟಕರ ಪರವಾಗಿವಿನಂತಿಸಿದ್ದಾರೆ.
error: