December 19, 2024

Bhavana Tv

Its Your Channel

ಭಾರೀ ಗಾತ್ರದ ಮೀನಿನ ಕಳೆಬರಹ

ಹೊನ್ನಾವರ : ತಾಲೂಕಿನ ಮಂಕಿ ಸಮೀಪದ ಅರಬ್ಬಿ ಸಮುದ್ರದ ಕಡಲತೀರದಲ್ಲಿ ಭಾರೀ ಗಾತ್ರದ ಮೀನಿನ ಕಳೆಬರಹ ಪತ್ತೆಯಾಗಿದೆ. ಅರಬ್ಬೀ ಸಮುದ್ರದಿಂದ ದಡಕ್ಕೆ ಹೊರಬಿದ್ದ ಈ ಬೃಹತ್ ಗಾತ್ರದ ಮೀನಿನ ಕಳೆಬರಹ ಕಂಡು ಜನತೆ ಆಶ್ಚರ್ಯಚಕಿತರಾಗಿದ್ದಾರೆ. ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಸಮುದ್ರದ ಅಲೆಯ ಹೊಡೆತಕ್ಕೆ ಈ ಮೀನು ದಡಕ್ಕೆ ಬಂದಿದೆ. ಹೊನ್ನಾವರ ಕರಾವಳಿ ಕಾವಲು ಪಡೆಯವರು ಸಂಬAಧಿಸಿದ ಗ್ರಾಮ ಪಂಚಾಯತ್ ಹಾಗೂ ಅರಣ್ಯ ಇಲಾಖೆಗೆ ಮಾಹಿತಿ ರವಾನಿಸಿದೆ. ಅರಣ್ಯಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದಾರೆ.ಇದು ಬ್ರಹತ್ ತಿಮಿಂಗಲ ಮೀನಿನ ಕಳೆಬರಹ ಎನ್ನಲಾಗುತ್ತಿದ್ದು ಅರಣ್ಯ ಅಧಿಕಾರಿಗಳಿಂದ ಹೆಚ್ಚಿನ ವಿವರ ತಿಳಿದು ಬರಬೇಕಿದೆ.

error: