April 18, 2025

Bhavana Tv

Its Your Channel

ಶ್ರೀ ರಾಮ ಕ್ಷೇತ್ರದಲ್ಲಿ ಏಪ್ರಿಲ್ 10ರಿಂದ 17ರವರೆಗೆ ಶ್ರೀ ರಾಮತಾರಕ ಮಂತ್ರ ಸಪ್ತಾಹ ಹಾಗೂ ಮಹಾ ಬ್ರಹ್ಮರಥೋತ್ಸ

ಹೊನ್ನಾವರ: ಧರ್ಮಸ್ಥಳ ನಿತ್ಯಾನಂದನಗರದ ಶ್ರೀ ರಾಮ ಕ್ಷೇತ್ರದಲ್ಲಿ 64ನೇ ವರ್ಷದ ಶ್ರೀ ರಾಮತಾರಕ ಮಂತ್ರ ಸಪ್ತಾಹ ಸಮಾರಂಭ ಹಾಗೂ ಮಹಾ ಬ್ರಹ್ಮರಥೋತ್ಸವವು ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ನೇತೃತ್ವದಲ್ಲಿ ಏಪ್ರಿಲ್ 10ರಿಂದ 17ರವರೆಗೆ ನಡೆಯಲಿದೆ’ ಎಂದು ಶ್ರೀ ರಾಮ ಕ್ಷೇತ್ರ ಸೇವಾ ಸಮಿತಿಯ ಸಂಚಾಲಕ ವಾಮನ ನಾಯ್ಕ ಮಂಕಿ ತಿಳಿಸಿದರು.
ಪಟ್ಟಣದ ನಾಮಧಾರಿ ಕಾರ್ಯಲಯದಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾಧ್ಯಮದವರೊಂದಿಗೆ ಮಾತನಾಡಿ. `ಏ. 10 ರಂದು ಬೆಳಗ್ಗೆ ಸ್ವಸ್ತಿ ಪುಣ್ಯಾಹ, ಸ್ಥಳ ಶುದ್ದಿ ಧ್ವಜಪೂಜೆ, ತೋರಣ ಮುಹೂರ್ತ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮ ರಾತ್ರಿ ಮಹಾಪೂಜೆ ನಡೆಯಲಿದೆ. ಏ. 11 ರಂದು ಗುರುಪೂಜೆ, ಶ್ರೀ ಅನ್ನಪೂಣೇಶ್ವರಿ ಅಲಂಕಾರ, ಶ್ರೀ ಗುರುದೇವರ ಉತ್ಸವ ಪೂಜೆ ನಡೆಯಲಿದೆ. ಏ. 12 ರಂದು ನವಗ್ರಹ ಶಾಂತಿ ಹೋಮ, ರಾತ್ರಿ ಶ್ರೀರಾಮ ದೇವರ ರಜತ ಪಲ್ಲಕ್ಕಿ ಉತ್ಸವ ನಡೆಯಲಿದೆ. ಏ. 13 ರಂದು ಮಹಾಮೃತ್ಯುಂಜಯ ಹೋಮ, ಸಂಜೆ ಶ್ರೀ ಅನ್ನಪೂರ್ಣೇಶ್ವರಿ ದೇವಿಯ ಬಲಿ ಉತ್ಸವ ಮತ್ತು ಪುಷ್ಪ ರಥೋತ್ಸವ ನಡೆಯಲಿದೆ. ಏ. 14 ರಂದು ನವದುರ್ಗಾ ಹೋಮ ಸಂಜೆ ಶ್ರೀ ದುರ್ಗಾಪರಮೇಶ್ವರಿ ದೇವಿಯ ಮೂರ್ತಿ ಬಲಿ ಉತ್ಸವ, ಚಂದ್ರ ಮಂಡಲ ರಥೋತ್ಸವ ನಡೆಯಲಿದೆ. ಏ. 15 ರಂದು ಸಹಸ್ರನಾಮಯಾಗ, ಶ್ರೀ ಗೋಪಾಲಕೃಷ್ಣ ದೇವರಿಗೆ ವಿಶೇಷ ಪೂಜೆ, ಸಂಜೆ ಬಲಿ ಉತ್ಸವ ಮತ್ತು ಬೆಳ್ಳಿ ರಥೋತ್ಸವ ನಡೆಯಲಿದೆ. ಏ. 16 ರಂದು ದತ್ತಯಾಗ, ಸಂಜೆ ಶ್ರೀ ಹನುಮಾನ ರಥೋತ್ಸವ, ಕಟ್ಟೆಪೂಜೆ, ಕೆರೆ ದೀಪೋತ್ಸವ ನಡೆಯಲಿದೆ.
ಏ. 17 ರಂದು ಬೆಳಗ್ಗೆ ವಿಷ್ಣು ಸಹಸ್ರನಾಮ ಹೋಮ, ಶ್ರೀ ರಾಮ ತಾರಕ ಮಂತ್ರ ಯಜ್ಞ ಮಂಗಳ, ಮಹಾ ಸಂಕಲ್ಪ, ಪೂರ್ಣಾಹುತಿ, ಸಂಜೆ ಭೂತಬಲಿ, ಶ್ರೀ ದೇವರ ಪಾಲಕಿ ಬಲಿ ಉತ್ಸವ, ಮಹಾ ಬ್ರಹ್ಮರಥೋತ್ಸವ ಹಾಗೂ ಕ್ಷೇತ್ರದ ರಕ್ತೇಶ್ವರಿ ಮತ್ತು ಗುಳಿಗ ದೈವಗಳಿಗೆ ನೇಮೋತ್ಸವ ನಡೆಯಲಿದೆ. ಶ್ರೀ ರಾಮ ತಾರಕ ಮಂತ್ರ ಸಪ್ತಾಹದಲ್ಲಿ ಜಿಲ್ಲೆಯ ವಿವಿಧ ಭಾಗದ ಭಜನಾ ಮಂಡಳಿಗಳು ಪಾಲ್ಗೊಳ್ಳಲಿವೆ. ಜಿಲ್ಲೆಯ ಸಮಾಜ ಬಾಂಧವರು ಹಾಗೂ ಭಕ್ತರು ಪಾಲ್ಗೊಂಡು ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕು’ ಎಂದು ಅವರು ವಿನಂತಿಸಿದರು. ಸಮಿತಿಯ ಕಾರ್ಯದರ್ಶಿ ಟಿ.ಟಿ.ನಾಯ್ಕ, ಸದಸ್ಯರಾದ ಶೇಖರ ನಾಯ್ಕ, ತುಕಾರಾಮ ನಾಯ್ಕ, ಸೀತಾರಾಮ ನಾಯ್ಕ, ಸತೀಶ ನಾಯ್ಕ, ಮಾರುತಿ ನಾಯ್ಕ, ಗಜಾನನ ನಾಯ್ಕ, ಜಗದೀಶ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು.
ವರದಿ : ವಿಶ್ವನಾಥ ಸಾಲ್ಕೊಡ್ ಹೊನ್ನಾವರ

error: