May 3, 2024

Bhavana Tv

Its Your Channel

ಶ್ರೀ ಜ್ಞಾನೇಶ್ವರೀ ಪೀಠದ ದೈವಜ್ಙ ಬ್ರಾಹ್ಮಣ ಸಮಾಜದ ಉತ್ತರಾಧಿಕಾರಿ ಸನ್ಯಾಸ ಸ್ವೀಕಾರ

ಹೊನ್ನಾವರ: ಯಾವುದೇ ವಿಚಾರ ಸಕಾರಾತ್ಮಕವಾಗಿದ್ದರೆ ಅದರಂತೆ ನಾವು ಮತ್ತು ಸಮಾಜ ಒಳ್ಳೆಯದಾಗಲು ಸಾಧ್ಯವಾಗುತ್ತದೆ.ಅದಕ್ಕಾಗಿ ಎಲ್ಲರು ಸಕಾರಾತ್ಮಕ ಚಿಂತನೆ ಮಾಡಬೇಕು ಎಂದು ಕರ್ಕಿಯ ಪ.ಪೂ.ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತೀ ಮಹಾಸ್ವಾಮಿಗಳು ಆರ್ಶಿವಚನ ನೀಡಿದರು.

     ಶ್ರೀ ಜ್ಞಾನೇಶ್ವರೀ ಪೀಠ ದೈವಜ್ಙ ಬ್ರಾಹ್ಮಣ ಮಠ,ಶ್ರೀ ಕ್ಷೇತ್ರ ಕರ್ಕಿ ಆಶ್ರಯದಲ್ಲಿ ಶ್ರೀ ಜ್ಞಾನೇಶ್ವರೀ ಪೀಠದ ದೈವಜ್ಙ ಬ್ರಾಹ್ಮಣ ಸಮಾಜದ ಉತ್ತರಾಧಿಕಾರಿಯನ್ನಾಗಿ ನಿಯೋಜಿಸಲು ನಿಶ್ವಯಿಸಿದ ವಟುವಿನ ಸನ್ಯಾಸ ಸ್ವೀಕಾರ ಕಾರ್ಯಕ್ರಮ ಬುಧವಾರ ಶ್ರೀ ಜ್ಞಾನೇಶ್ವರೀ ಪೀಠ, ಶ್ರೀಕ್ಷೇತ್ರ ಕರ್ಕಿ ಶ್ರೀ ಮಠದ ಆವರಣದಲ್ಲಿ ವಿಜೃಂಭಣೆಯಿAದ  ನೇರವೇರಿತು.

  ಶಿಷ್ಯ ಸ್ವೀಕಾರ ಕಾರ್ಯಕ್ರಮ ಏ.1ಹಾಗೂ ಏ.2ರಂದು ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯಿತು. ಬುಧವಾರ ಸಮಾಜದ ವತಿಯಿಂದ ಗೌರವ ಸಮರ್ಪಣೆ ನಡೆಯಿತು. ಆರ್ಶಿವಚನದ ನೀಡಿದ ಸ್ವಾಮೀಜಿಯವರು ನನ್ನ ಬಹುಕಾಲದ ಸಂಕಲ್ಪ ಶ್ರೀದೇವಿ ಪೂರ್ಣಗೊಳಿಸಿದ್ದಾಳೆ. ಸನ್ಯಾಸ ಸ್ವೀಕಾರಕ್ಕೆ ಸನ್ನಿವೇಶ ಸೃಷ್ಠಿಮಾಡಿದ್ದಳು. ಕಳೆದ ಮೂರು ವರ್ಷಗಳಿಂದ ವಿಷಯ ಪ್ರಸ್ಥಾಪವಾಗಿತ್ತು. ಮಹಾಮಾರಿ ಕರೋನಾ ಕಾರಣದಿಂದ ಕಾರ್ಯಕ್ರಮ ವಿಳಂಬವಾಯಿತು. ಆರ್ ಎಸ್ ರಾಯ್ಕರ್ ಮುತುವರ್ಜಿ ವಹಿಸಿಕೊಂಡು ಕಾರ್ಯರೂಪವಾಗುವಂತೆ ಮಾಡಿದರು. ಎಲ್ಲರ ಸಹಕಾರದಿಂದ ಈ ಕಾರ್ಯಕ್ರಮ ಯಶಸ್ವಿಯಾಗಿದೆ. ಸುಜ್ಞಾನೇಶ್ವರ ಸ್ವಾಮಿಗಳ ತಂದೆ ಗುರುನಾಥ, ತಾಯಿ ದೀಪ ಅವರ ತ್ಯಾಗ ಅಮೂಲ್ಯವಾದದು. ಶಿಷ್ಯ ಸ್ವೀಕಾರ ಎನ್ನುವುದು ಸುಯೋಗ ಬೇಕು. ಮನೆಯ ಯಜಮಾನ ತನ್ನ ಸುಖ ನೋಡಿದರೆ ಕುಟುಂಬದ ಸುಖ ನೋಡಲು ಸಾಧ್ಯವಿಲ್ಲ. ದೈವಜ್ಞ ಸಮಾಜಕ್ಕೆ ಶ್ರೀ ಮಠ ಎನ್ನುವ ಭಕ್ತಿ-ಭಾವನೆ ಇದೆ. ಭಕ್ತರು ತಮ್ಮ ಬೇಡಿಕೆಗಳನ್ನು ತಿಳಿಸಿಬೇಕು. ಅದನ್ನು ಹೇಗೆ ಪರಿಪೂರ್ಣ ಗೊಳಿಸುವುದು ಎನ್ನುವುದು ನಾವು ನಿರ್ಧಾರ ಮಾಡುತ್ತೇವೆ. ವರ್ತಮಾನ ನಮ್ಮ ಕೈಯಲ್ಲಿದೆ, ಆದರೆ ಭವಿಷ್ಯ ನಮ್ಮ ಕೈಯಲ್ಲಿಲ್ಲ ಎಂದು ಶ್ರೀಗಳು ನುಡಿದರು.

ಸನ್ಯಾಸ ಸ್ವೀಕರಿಸಿದ ಶ್ರೀ ಮಠದ ನೂತನ ಉತ್ತರಾಧಿಕಾರಿಯಾದ ಶ್ರೀ ಸುಜ್ಞಾನೇಶ್ವರ ಭಾರತಿ ಸ್ವಾಮೀಜಿಯವರು ಮಾತನಾಡಿ, ಭವ್ಯ ದೇವಾಲಯ, ಗುರುಪೀಠ, ಅನ್ನಚತ್ರ, ವೇದಶಾಲೆ ಶ್ರೀದೇವಿಯ ಅನುಗ್ರಹ, ಗುರುಕೃಪೆಯಿಂದ ಸಾಧ್ಯವಾಗಿದೆ. ಮೂಲಗುರುಗಳು ವೃಕ್ಷವಿದ್ದಂತೆ ಉಳಿದ ಗುರುಗಳು ವೃಕ್ಷದ ಕೊಂಬೆಯAತೆ. ಮಠದಿಂದ ಬಡವರಿಗೆ, ಸಮಾಜಕ್ಕೆ ಅನೇಕ ಕಾರ್ಯಗಳಾಗಿ ಉನ್ನತಮಟ್ಟಕ್ಕೇರುವಂತಾಗಿದೆ.

    ಗುರುವಿನ ಮಾರ್ಗದರ್ಶನ, ಸಂಕಲ್ಪದAತೆ ಕಾರ್ಯಮಾಡಲು ಪ್ರಯತ್ನಮಾಡುವೆ ಎಂದರು. ಕಾರವಾರದ ಸಂತೋಷಿ ಮಾತಾ ದೇವಿಯಿಂದ ಪ್ರೇರಣೆಯಾಗಿತ್ತು. ಅಲ್ಲಿನ ಗುರುಗಳ ಸಂಪರ್ಕಿಸಿದಾಗ ನಿಮ್ಮ ಗುರುಪೀಠದ ಗುರುಗಳನ್ನು ಕೇಳಿ ಎಂದಿದ್ದರು. ದೇವರಲ್ಲಿಯು ಸನ್ಯಾಸ ಸ್ವೀಕಾರದ ಬಗ್ಗೆ ಪ್ರಸಾದವಾಗಿತ್ತು. ನಂತರ ಶ್ರೀಮಠಕ್ಕೆ ಬಂದು ಗುರುಗಳಲ್ಲಿ ಕೇಳಿದಾಗ ಶಿಷ್ಯತ್ವ ಒಂದೇ ಬಾರಿಗೆ ಪಡೆಯುವುದಲ್ಲ. ಹಂತಹAತವಾಗಿ ನಡೆಯುವ ಪ್ರಕ್ರಿಯೆ ಎಂದಿದ್ದರು. ಆ ಪ್ರಕಾರವಾಗಿ ಶಿಷ್ಯ ಸ್ವೀಕಾರ ನಡೆದಿದೆ ಎಂದರು.

ಸಂಸ್ಕ್ರತ ಪ್ರಾಧ್ಯಾಪಕ ಪತಂಜಲಿ ವಿಣಾಕರ್ ಮಾತನಾಡಿ, ಸನ್ಯಾಸ ಸ್ವೀಕಾರ ಎಂದರೆ ತಮ್ಮ ಕುಟುಂಬವನ್ನು ಜತೆಗೆ ಸ್ವಾರ್ಥ,ಕ್ರೊಧ ಎಲ್ಲವನ್ನೂ ತ್ಯಜಿಸಿ ಬರುವಂತದ್ದಾಗಿರುತ್ತದೆ. ಆದರೆ ನಾವು ಇಂದು ನಮ್ಮ ಸಂಸಾರ ತಾಪತ್ರಯಗಳನ್ನು ಅವರ ಬಳಿ ನಿವೇದನೆ ಮಾಡುತ್ತೇವೆ. ಅಂತಹದ್ದು ನಡೆಯಬಾರದು. ಸನ್ಯಾಸ ಸ್ವೀಕಾರ ಗುರುತ್ವ ಪಡೆಯುವುದು ಬಹಳ ಕಷ್ಟಕರ.ಜ್ಞಾನ ಮತ್ತು ವೈರಾಗ್ಯ ಹೊಂದಿರಬೇಕು ಎಂದು ಸನ್ಯಾಸದ ಮಹತ್ವ,ಪ್ರಾಮುಖ್ಯತೆ ವಿವರಿಸಿದರು. ತಾಲೂಕಾ ದೈವಜ್ಞ ವಾಹಿನಿ ಅಧ್ಯಕ್ಷ ಕೃಷ್ಣಕುಮಾರ್ ಪ್ರಾಸ್ತಾವಿಕ ಮಾತನಾಡಿದರು.

ವೇದಿಕೆಯಲ್ಲಿ ಧಾರವಾಡ ಶಂಕರಾಚಾರ್ಯ ಸಂಸ್ಕೃತ ವೇಧ ಪಾಠಶಾಲೆ ಮುಖ್ಯಸ್ಥ ವೇ.ಬ್ರ ರಾಜೇಶ್ವರ ಶಾಸ್ತ್ರಿ, ದೈವಜ್ಞ ಬ್ರಾಹ್ಮಣ ಮಠ ಟ್ರಷ್ಠ ಉಪಾಧ್ಯಕ್ಷ ಆರ್ ಎಸ್ ರಾಯ್ಕರ್, ಆರ್.ಪಿ ರಾಯ್ಕರ್,ರಾಮಚಂದ್ರ ಭಟ್ಟ, ಎಮ್ ಎಸ್ ಅರುಣ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು. ಸಾವಿರಾರು ಸಂಖ್ಯೆಯಲ್ಲಿ ಸಮಾಜಭಾಂದವರು ಪಾಲ್ಗೊಂಡಿದ್ದರು. ಧಾರ್ಮಿಕ ಕಾರ್ಯಕ್ರಮದ ನಂತರ ಅನ್ನಸಂತರ್ಪಣೆ ನಡೆಯಿತು.
ವರದಿ : ವಿಶ್ವನಾಥ ಸಾಲ್ಕೋಡ್, ಹೊನ್ನಾವರ

error: