April 18, 2025

Bhavana Tv

Its Your Channel

ಹೊನ್ನಾವರ ಸರ್ಕಾರಿ ಪಿಯು ಕಾಲೇಜು ಉತ್ತಮ ಸಾಧನೆ

ಹೊನ್ನಾವರ ತಾಲೂಕಿನ ಸರ್ಕಾರಿ ಮೋಹನ ಕೆ. ಶೆಟ್ಟಿ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.

ವಿಜ್ಞಾನ ವಿಭಾಗದಲ್ಲಿ ಸಂಜನಾ ಪ್ರಭಾಕರ ನಾಯ್ಕ (ಶೇ. 95.33) ಪ್ರಥಮ, ಶಿವಾನಿ ರಾಮಕೃಷ್ಣ ನಾಯ್ಕ (ಶೇ. 95) ದ್ವಿತೀಯ, ಪ್ರಸನ್ನ ಗಜಾನನ ಸಭಾಹಿತ (ಶೇ. 94.83) ತೃತೀಯ ಸ್ಥಾನ ಪಡೆದಿದ್ದಾರೆ.

ವಾಣಿಜ್ಯ ವಿಭಾಗದಲ್ಲಿ ನವ್ಯಾ ಈಶ್ವರ ಗೌಡ (ಶೇ. 96.33) ಪ್ರಥಮ, ಪ್ರಜ್ಞಾ ಮಂಜುನಾಥ ನಾಯ್ಕ (ಶೇ. 96.16) ದ್ವಿತೀಯ, ಸಹನಾ ಸುರೇಶ ನಾಯ್ಕ ಮತ್ತು ದೀಪಾ ಮಂಜುನಾಥ ಹಳ್ಳೇರ (ಶೇ. 93.33) ತೃತೀಯ ಸ್ಥಾನ ಪಡೆದಿದ್ದಾರೆ.
ಕಲಾ ವಿಭಾಗದಲ್ಲಿ ಧನುಶ್ರೀ ನಾರಾಯಣ ಹಳ್ಳೇರ (ಶೇ. 96.5) ಪ್ರಥಮ, ಶೇರೋನ ರುಜಾರ ರೋಡ್ರಗೀಸ್ (ಶೇ. 95.83) ದ್ವಿತೀಯ, ಎನ್. ವಿವೇಕ (ಶೇ. 94.33) ತೃತೀಯ ಸ್ಥಾನ ಪಡೆದಿದ್ದಾರೆ. ವಿಧ್ಯಾರ್ಥಿಗಳ ಸಾಧನೆಗೆ ಕಾಲೇಜು ಅಭಿವೃದ್ಧಿ ಸಮಿತಿ, ಪ್ರಾಚಾರ್ಯರು ಹಾಗೂ ಉಪನ್ಯಾಸಕರು ಹರ್ಷ ವ್ಯಕ್ತಪಡಿಸಿದ್ದಾರೆ.

error: