May 22, 2024

Bhavana Tv

Its Your Channel

ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿಎಸ್.ಡಿ.ಎಂ.ಕಾಲೇಜು ಉತ್ತಮ ಸಾಧನೆ

ಹೊನ್ನಾವರ: ತಾಲೂಕಿನ ಪ್ರತಿಷ್ಟಿತಕಾಲೇಜಾಗಿರುವ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಪೂರ್ವಕಾಲೇಜು 2023-24 ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿಗಮನಾರ್ಹ ಸಾಧನೆಯನ್ನು ಮಾಡಿದೆ. ವಿಜ್ಞಾನ ವಿಭಾಗದಲ್ಲಿ 97.92, ವಾಣಿಜ್ಯ ವಿಭಾಗದಲ್ಲಿ ಶೇ.94.28, ಕಲಾ ವಿಭಾಗದಲ್ಲಿ ಶೇ. 86.84 ಫಲಿತಾಂಶವನ್ನು ನೀಡಿದೆ ,ಕಾಲೇಜಿನಒಟ್ಟು ಫಲಿತಾಂಶ95.02ರಷ್ಟಾಗಿದೆ.
ವಿಜ್ಞಾನ ವಿಭಾಗದಲ್ಲಿಕುಮಾರಿ. ಮಲ್ಲಿಕಾಗೌರೀಶ್ ಹೆಗಡೆ ಶೇ.97.17 ,ಶ್ರದ್ಧಾ ಶಂಭು ಭಟ್ ಶೇ.97.17 ರಷ್ಟನ್ನು ಪಡೆದು ಪ್ರಥಮ ಸ್ಥಾನ ,ಆದರ್ಶಗಣಪತಿ ಹೆಗಡೆ ಶೇ.96.6 ,ಹರ್ಷಿತಾ ಮಂಜುನಾಥ್ ನಾಯ್ಕ ಶೇ.96.67 ರಷ್ಟನ್ನು ಪಡೆದು ದ್ವಿತೀಯ ಸ್ಥಾನ, ಸ್ವಾತಿ ಕೃಷ್ಣ ಹೆಗಡೆ ಶೇ. 96.17, ವಿಠ್ಠಲ್ ವರದರಾಜ್ ಭಟ್ ಶೇ.96.17 ರಷ್ಟನ್ನು ಪಡೆದುತೃತೀಯ ಸ್ಥಾನವನ್ನು ಪಡೆದಿರುತ್ತಾರೆ.ಇನ್ನು ವಾಣಿಜ್ಯ ವಿಭಾಗದಲ್ಲಿರಂಜಿತಾರಾಜೇಶ್ ಭಂಡಾರಿ ಶೇ.98.50 ರಷ್ಟನ್ನು ಪಡೆದು ಪ್ರಥಮ ಸ್ಥಾನ, ಚೈತ್ರಗೋಕುಲ್‌ದಾಸ್‌ಕಾಮತ್ ಶೇ. 97.67 ,ಎಂ.ಬಿ.ರಮಶ್ರೀ ಶೇ.97.67 ರಷ್ಟನ್ನು ಪಡೆದು ದ್ವಿತೀಯ ಸ್ಥಾನ, ಮಾನ್ಯಕೇಶವ್ ನಾಯ್ಕ ಶೇ.97.33 , ಯೂನುಸ್‌ಖಾನ್ ಸಮೀರ್‌ಖಾನ್ ಶೇ .97.33 ರಷ್ಟನ್ನು ಪಡೆದುತೃತೀಯ ಸ್ಥಾನ ಪಡೆದಿದ್ದಾರೆ. ಕಲಾ ವಿಭಾಗದಲ್ಲಿ ಧನ್ಯಶ್ರೀ ಶ್ರೀಧರ್ ನಾಯ್ಕ ಶೇ.95.67 ರಷ್ಟನ್ನು ಪಡೆದು ಪ್ರಥಮ ಸ್ಥಾನ, ದೀಪಕ್‌ಕೃಷ್ಣಮೂರ್ತಿ ಭಟ್ 94.67 ರಷ್ಟನ್ನು ಪಡೆದು ದ್ವಿತೀಯ ಸ್ಥಾನ, ಸಂಚಿತಾ ಸುಖಾಚಂದ್ರತಾAಡೇಲ್ 91.83 ರಷ್ಟನ್ನು ಪಡೆದುತೃತೀಯಸ್ಥಾನವನ್ನು ಪಡೆದಿರುತ್ತಾರೆ. ಈ ಎಲ್ಲಾ ವಿದ್ಯಾರ್ಥಿಗಳ ಸಾಧನೆಗೆ ಆಡಳಿತ ಮಂಡಳಿ, ಕಾಲೇಜಿನ ಪ್ರಾಚಾರ್ಯರು , ಬೋಧಕ- ಬೋಧಕೇತರ ಸಿಬ್ಬಂದಿಗಳು ಶಯಭವನ್ನು ಹಾರೈಸಿದ್ದಾರೆ.

error: