May 4, 2024

Bhavana Tv

Its Your Channel

ಸಾನ್ವಿ ರಾವ್ ದ್ವೀತಿಯ ಪಿಯು ವಾಣಿಜ್ಯ ವಿಭಾಗ ರಾಜ್ಯಕ್ಕೆ 3ನೇ ರ‍್ಯಾಂಕ್ 595/600

ಹೊನ್ನಾವರ : ಮೂಲತ ಕುಂದಾಪುರ ತಾಲೂಕಿನ ಬಸ್ರೂರು ಗ್ರಾಮದ ವಿವೃತ್ತ ಬ್ಯಾಂಕ ಉದ್ಯೋಗಿ ಜಗದೀಶ ರಾವ್ ಹಾಗೂ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಹೊನ್ನಾವರದ ತರಬೇತಿ ಅಧಿಕಾರಿ ವಿನುತಾ ಭಟ್‌ರವರ ಪುತ್ತಿಯಾದ ಸ್ವಾನಿ ಕಾರ್ಕಳದ ಕ್ರೀಯೇಟಿವ್ ಪಿ ಯು ಕಾಲೇಜಿನ ವಿದ್ಯಾರ್ಥಿಯಾಗಿದ್ದು ದ್ವೀತಿಯ ಪಿಯು ವಾಣಿಜ್ಯ ವಿಭಾಗದಲ್ಲಿ 600 ಕ್ಕೆ 595 ಅಂಕ ಪಡೆದು ರಾಜ್ಯಕ್ಕೆ 3ನೇ ರ‍್ಯಾಂಕ್ ಪಡೆದಿದ್ದಾಳೆ,
ಪ್ರಾಥಮಿಕ ಹಾಗು ಪ್ರೌಢಶಾಲೆಯ ಅಧಯಯನವನ್ನು : ಎಂ.ಪಿ.ಇ ಸೊಸೈಟಿ ಸೆಂಟ್ರಲ್ ಸ್ಕೂಲ್, ಹೊನ್ನಾವರದಲ್ಲಿ ನಡೆಸಿದ್ದು
ಭರತನಾಟ್ಯ, ಸಂಗೀತ, ಯಕ್ಷಗಾನ, ಏಕಪಾತ್ರಾಭಿನಯ, ಭಾಷಣ, ಪ್ರಬಂಧ, ಚರ್ಚಾ ಸ್ಪರ್ಧೆ, ಕವನ ಬರಹ, ಚೆಸ್ ಇತ್ಯಾದಿ ಕಲೆಗಳಲ್ಲಿ ನಿಪುಣತೆಯನ್ನು ಹೊಂದಿದ್ದಾಳೆ.
ಪಿಯು ಪರೀಕ್ಷೆಯಲ್ಲಿ ಇಂಗ್ಲೀಷಿನಲ್ಲಿ 95 ಹಾಗೂ ಉಳಿದ ಎಲ್ಲಾ ವಿಷಯಗಳಲ್ಲಿ 100 ಕ್ಕೆ 100 ಅಂಕ ಪಡೆದಿದ್ದಾಳೆ,
ಈ ಸಾಧನೆಗೆ ದೇವರನ್ನು ವಂದಿಸುತ್ತಿದ್ದೇನೆ. ಇದಕ್ಕೆ ಪ್ರೋತ್ಸಾಹ ನೀಡಿದ ಕ್ರಿಯೇಟಿವ್ ಪಿ.ಯು. ಕಾಲೇಜಿನ ಪ್ರಾಚಾರ್ಯರಿಗೆ, ಎಲ್ಲ ಸಂಸ್ಥಾಪಕರಿಗೆ, ಎಲ್ಲ ಶಿಕ್ಷಕರಿಗೆ, ಸಿಬ್ಬಂದಿಗಳಿಗೆ, ನಿಲಯ ಪಾಲಕರಿಗೆ, ಪ್ರತಿಕ್ಷಣದಲ್ಲೂ ನನ್ನೊಂದಿಗೆ ಇದ್ದು ಸದಾ ಪ್ರೋತ್ಸಾಹ ನೀಡಿದ ನನ್ನ ತಂದೆ, ತಾಯಿ, ಅಣ್ಣಾ ಹಾಗು ನನ್ನೆಲ್ಲ ಹಿತೈಷಿಗಳಿಗೆ ಧನ್ಯವಾದ ಅರ್ಪಿಸಿದ್ದಾಳೆ.

. ಉತ್ತಮ ಶಿಕ್ಷಣದ ಜೊತೆ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಬೇಕಾದ ಸಾಂಸ್ಕೃತಿಕ ಹಾಗು ಕ್ರೀಡೆಗಳಿಗೂ ಉತ್ತೇಜನ ನೀಡುವ ಕ್ರೀಯೇಟಿವ್ ಪಿ ಯು ಕಾಲೇಜಿನಲ್ಲಿ ನಾನು ಓದಿರುತ್ತೇನೆ ಎಂಬ ಹೆಮ್ಮೆ ನನ್ನದು. ಯಕ್ಷಗಾನವನ್ನು ಅಭ್ಯಸಿಸುವಂತೆ ಮಾಡಿ ಮೊಟ್ಟ ಮೊದಲ ಬಾರಿ ಪ್ರದರ್ಶಿಸುವಂತೆ ಮಾಡಿ , ಎನ್ ಎಸ್ ಎಸ್ ಸ್ವಯಂಸೇವಕಿಯಾಗಿ ಸೇವೆ ಸಲ್ಲಿಸಲು, ಭಾರತ ಸ್ಕೌಟ್ ಮತ್ತು ಗೈಡ್ಸ್ ರಾಜ್ಯ ಪುರಸ್ಕಾರ ಪಡೆಯಲು ಅವಕಾಶವನ್ನು ನೀಡಿ, ಭರತನಾಟ್ಯ, ಸಂಗೀತ, ಭಾಷಣ, ಸಾಹಿತ್ಯ ಮುಂತಾದ ನನ್ನೆಲ್ಲ ಹವ್ಯಾಸಗಳಿಗೆ ಅವಕಾಶವನ್ನು ನಮ್ಮ ಕಾಲೇಜ್ ನೀಡಿದೆ. ವಿಕಲಚೇತನನಾದ ಅಣ್ಣ ಸಮರ್ಥನ ಎಮ್ ಕಾಮ್ ಪರೀಕ್ಷೆಗೆ criber ಆಗಿ ಬರೆಯಲು ನಮ್ಮ ಕಾಲೇಜಿನ ಎಲ್ಲಾ ಸಂಸ್ಥಾಪಕರು, ಉಪನ್ಯಾಸಕರು ಅನುಕೂಲ ಮಾಡಿಕೊಟ್ಟಿದ್ದನ್ನು ನಾನು ಹೃತ್ಪೂರ್ವಕವಾಗಿ ಸ್ಮರಿಸುತ್ತೇನೆ ಎಂದಿದ್ದಾಳೆ.

  ಮುಂದೆ ತಾನು ಉತ್ತಮ ಚಾರಟೆಡ್ ಎಕೌಂಟೆAಟ್ ಆಗಬೇಕೆಂದು ಬಯಸಿದ್ದು ನಮ್ಮ ಕಾಲೇಜಿನಲ್ಲಿ ಸಿಎ ಪೌಂಡೇಶನ್ ತರಬೇತಿ ಅನ್ನು ಪಡೆಯುತ್ತಿದ್ದು ಮುಂದಿನ ನನ್ನ ಜೀವನಕ್ಕೆ ಈ ಮೂಲಕ ಭಗವಂತನ, ಗುರುಹಿರಿಯರ ಆಶೀರ್ವಾದವನ್ನು ಬೇಡುತ್ತಿದ್ದೇನೆ.  ನನ್ನ ಎಲ್ಲಾ ಸಾಧನೆಗಳಲ್ಲಿ ಬೆನ್ನೆಲುಬಾಗಿ ನಿಂತಿರುವ ನನ್ನ ಅಪ್ಪ ಅಮ್ಮನಿಗೆ ನನ್ನ ಅನಂತಾನAತ ಧನ್ಯವಾದಗಳನ್ನು ಅರ್ಪಿಸುತ್ತಿದ್ದೇನೆ ಎಂದಿದ್ದಾಳೆ.

ಅವಳ ಭವಿಷ್ಯ ಉಜ್ವಲವಾಗಲಿ ಎಂದು ಹಾರೈಸೋಣ

error: