May 4, 2024

Bhavana Tv

Its Your Channel

‘ಜಾತ್ರಾ ಮಹೋತ್ಸವ’ ಮತ್ತು ಸಿಲೆಕ್ಟ್ ಫೌಂಡೇಶನ್ (ರಿ.) ವತಿಯಿಂದ ‘ಸಂಸ್ಕೃತಿ ಕುಂಭ ಮಲೆನಾಡ ಉತ್ಸವ – 2024’

ಹೊನ್ನಾವರ : ಶ್ರೀಕ್ಷೇತ್ರ ಬಂಗಾರಮಕ್ಕಿಯಲ್ಲಿ ದಿನಾಂಕ 17/04/2024 ರ ಶ್ರೀರಾಮನವಮಿಯಿಂದ ಆರಂಭಿಸಿ ದಿನಾಂಕ 23/04/2024 ರ ಹನುಮ ಜಯಂತಿಯವರೆಗೆ ಶ್ರೀಕ್ಷೇತ್ರದಲ್ಲಿ ಶ್ರೀ ವೀರಾಂಜನೇಯಧಾರ್ಮಿಕ ಹಾಗೂ ದತ್ತಿ ಸಂಸ್ಥೆ (ರಿ.) ವತಿಯಿಂದ ‘ಜಾತ್ರಾ ಮಹೋತ್ಸವ’ ಮತ್ತು ಸಿಲೆಕ್ಟ್ ಫೌಂಡೇಶನ್ (ರಿ.) ವತಿಯಿಂದ‘ಸAಸ್ಕೃತಿಕುAಭ ಮಲೆನಾಡಉತ್ಸವ – 2024’ ನಿಮಿತ್ತ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಜಾತ್ರಾ ಮಹೋತ್ಸವ : ಏಪ್ರಿಲ್ 17 ರಂದುರಾಮನವಮಿ, ಏಪ್ರಿಲ್ 18 ರಂದು ಶರಾವತಿಆರತಿ, ಏಪ್ರಿಲ್ 18 ರಿಂದ 20 ರ ವರೆಗೆ ಶರಾವತಿಕುಂಭ, ಏಪ್ರಿಲ್ 22 ರಂದು ಶ್ರೀದೇವರ ಪುಷ್ಪರಥೋತ್ಸವ ಹಾಗೂ ಏಪ್ರಿಲ್ 23 ರಂದು ಶ್ರೀದೇವರ ಬ್ರಹ್ಮರಥೋತ್ಸವ ನೆರವೇರಲಿದೆ.
ಸಂಸ್ಕೃತಿಕು0ಭ ಮಲೆನಾಡಉತ್ಸವ– 2024:
ಏಪ್ರಿಲ್ 17 ರಿಂದ 23 ರ ವರೆಗೆ ಏಳು ದಿನಗಳ ಕಾಲ ಪ್ರತಿದಿನ ಸಂಜೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಅನಾವರಣಗೊಳ್ಳಲಿದೆ. ವಿಶೇಷವಾಗಿ ಪರಮಪೂಜ್ಯ ಶ್ರೀ ಶ್ರೀಶ್ರೀ ಮಾರುತಿಗುರೂಜಿಯವರಿಂದ ಸತ್ಸಂಗ, ಭಕ್ತಿ ಸಂಗೀತ, ಭಜನೆ, ಗಾಯನ, ನೃತ್ಯ ವೈಭವ, ವಿವಿಧ ಶೈಲಿಯ ಕುಣಿತಗಳು ಪ್ರದರ್ಶನಗೊಳ್ಳಲಿದೆ. ಏಪ್ರಿಲ್ 20 ರಂದು ಮಕ್ಕಳ ಸಾಹಿತ್ಯ ಸಮ್ಮೇಳನ, ಏಪ್ರಿಲ್ 21 ರಂದು ಮಕ್ಕಳ ಕವಿ-ಕಾವ್ಯ ಸಮ್ಮೇಳನಗಳು, ಏಪ್ರಿಲ್ 22 ರಂದುಗ್ರಾಮೀಣಕ್ರೀಡಾ ಸ್ಪರ್ಧೆ ಮತ್ತುಏಪ್ರಿಲ್ 23 ರಂದುದAತ ಹಾಗೂ ಕಣ್ಣಿನ ಬೃಹತ್‌ಉಚಿತ ವೈದ್ಯಕೀಯತಪಾಸಣಾ ಶಿಬಿರ ನಡೆಯಲಿದ್ದು ವೈದ್ಯರ ಶಿಫಾರಸ್ಸಿನ ಅನ್ವಯಅಗತ್ಯವಿರುವವರಿಗೆ ಹೆಚ್ಚುವರಿದಂತಚಿಕಿತ್ಸೆ, ಕಣ್ಣಿನ ಸರ್ಜರಿ ಹಾಗೂ ಕನ್ನಡಕವನ್ನು ಉಚಿತವಾಗಿ ನೀಡಲಾಗುವುದು. ಉತ್ಸವದ ವಿಶೇಷವಾಗಿ ವಸ್ತು ಪ್ರದರ್ಶನ ಹಾಗೂ ಅಮ್ಯೂಸ್‌ಮೆಂಟ್ ಪಾರ್ಕ್ಇರಲಿದ್ದು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡುಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಆಡಳಿತ ಮಂಡಳಿ ಕೋರಿದೆ.

error: