March 27, 2025

Bhavana Tv

Its Your Channel

ಜಲ್ಲಿ ತುಂಬಿ ಸಾಗಾಟ ಮಾಡುತ್ತಿದ್ದ ಎರಡು ವಾಹನ ವಶಕ್ಕೆ

ಹೊನ್ನಾವರ : ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಯಾದ ಆಶಾ ಎಂ. ಎಸ್. ರವರು ಶುಕ್ರವಾರ ತಡರಾತ್ರಿ ಜಲ್ಲಿ ತುಂಬಿ ಸಾಗಾಟ ಮಾಡುತ್ತಿದ್ದ ಎರಡು ವಾಹನ ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.

ಮಂಕಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಜಲ್ಲಿ ಸಾಗಾಟಕ್ಕೆ ಪರ್ಮಿಟ್ ನವಿಕರಣಗೊಳ್ಳದ ಒಂದು ವಾಹನವನ್ನು ಮಂಕಿ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಹೊನ್ನಾವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 24 ಮೆಟ್ರಿಕ್ ಟನ್ ಎಂದು 35 ಮೆಟ್ರಿಕ್ ಟನ್ ಜಲ್ಲಿ ಸಾಗಾಟ ಮಾಡುತ್ತಿದ್ದ ವಾಹನವನ್ನು ಅಧಿಕ ಭಾರ ( ಓವರ್ ಲೋಡ್ ) ಕಾರಣಕ್ಕೆ ಹೊನ್ನಾವರ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.
ವರದಿ : ವಿಶ್ವನಾಥ ಸಲ್ಕೋಡ್ ಹೊನ್ನಾವರ

error: